Site icon Vistara News

Article 370 : ಮುಫ್ತಿ, ಒಮರ್​ಗೆ ಗೃಹಬಂಧನ? ಆರೋಪ ನಿರಾಕರಿಸಿದ ಎಲ್​ಜಿ

Omar Abdullah

ನವದೆಹಲಿ: 370 ನೇ ವಿಧಿಯನ್ನು (Article 370) ರದ್ದುಗೊಳಿಸುವ ಕಾರ್ಯಸಾಧ್ಯತೆಯ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪಿನ ವಿಚಾರಣೆಗೆ ಮುಂಚಿತವಾಗಿ ಪಕ್ಷದ ಹಿರಿಯ ಮುಖಂಡ ಒಮರ್ ಅಬ್ದುಲ್ಲಾ ಅವರನ್ನು ತಮ್ಮ ಗೃಹ ಬಂಧನದಲ್ಲಿ ಇಡಲಾಗಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್ ಸೋಮವಾರ ಹೇಳಿದೆ. ಪಕ್ಷದ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರನ್ನು ಗೃಹಬಂಧನದಲ್ಲಿರಿಸಲಾಗಿದೆ ಎಂದು ಪಿಡಿಪಿ ಹೇಳಿದ ನಂತರ ಈ ಬೆಳವಣಿಗೆ ನಡೆದಿದೆ.

ಸುಪ್ರೀಂ ಕೋರ್ಟ್ ತೀರ್ಪು ಪ್ರಕಟವಾಗುವ ಮೊದಲೇ ಪೊಲೀಸರು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರ ನಿವಾಸದ ಬಾಗಿಲುಗಳನ್ನು ಸೀಲ್ ಮಾಡಿದ್ದಾರೆ. ಅವರನ್ನು ಅಕ್ರಮ ಗೃಹಬಂಧನದಲ್ಲಿರಿಸಿದ್ದಾರೆ” ಎಂದು ಪಕ್ಷ ಹೇಳಿದೆ.

ನ್ಯಾಷನಲ್ ಕಾನ್ಫರೆನ್ಸ್​ ವಕ್ತಾರೆ ಸಾರಾ ಹಯಾತ್ ಶಾ ಅವರು ಅಬ್ದುಲ್ಲಾ ಅವರ ನಿವಾಸದ ಹಸಿರು ಬಣ್ಣದ ಗೇಟ್​ನ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. “ಒಮರ್ ಅದ್ಬುಲ್ಲದಾ ಅವರನ್ನು ಅವರ ಮನೆಯಲ್ಲಿ ಲಾಕ್ ಮಾಡಲಾಗಿದೆ. ಪ್ರಜಾಪ್ರಭುತ್ವ ಎಲ್ಲಿದೆ” ಎಂದು ಅವರು ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.

ಲೆಫ್ಟಿನೆಂಟ್​ ಜನರಲ್ ನಿರಾಕರಣೆ

ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಈ ಹೇಳಿಕೆಗಳನ್ನು “ಆಧಾರರಹಿತ” ಎಂದು ಹೇಳಿದ್ದಾರೆ. “ಯಾರನ್ನೂ ಗೃಹಬಂಧನದಲ್ಲಿರಿಸಲಾಗಿಲ್ಲ ಅಥವಾ ಯಾರನ್ನೂ ಬಂಧಿಸಲಾಗಿಲ್ಲ” ಎಂದು ಅವರು ಹೇಳಿಕೊಂಡಿದ್ದಾರೆ. ಏತನ್ಮಧ್ಯೆ, ಇಲ್ಲಿನ ಗುಪ್ಕರ್ನಲ್ಲಿರುವ ನ್ಯಾಷನಲ್ ಕಾನ್ಫರೆನ್ಸ್ (ಎನ್ಸಿ) ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಮತ್ತು ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಅವರ ನಿವಾಸದ ಬಳಿ ಜಮಾಯಿಸಲು ಪತ್ರಕರ್ತರಿಗೆ ಪೊಲೀಸರು ಅವಕಾಶ ನೀಡಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುಪ್ಕರ್ ರಸ್ತೆಯ ಪ್ರವೇಶ ದ್ವಾರದಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು ಮತ್ತು ಎನ್ಸಿ ನಾಯಕರ ನಿವಾಸದ ಬಳಿ ಪತ್ರಕರ್ತರಿಗೆ ಎಲ್ಲಿಯೂ ಅವಕಾಶವಿರಲಿಲ್ಲ.

ಏನಿದು ಆರ್ಟಿಕಲ್ 370?

ಆರ್ಟಿಕಲ್ 370 ಭಾರತೀಯ ಸಂವಿಧಾನದಲ್ಲಿ ಅವಿಭಜಿತ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ ಪ್ರಮುಖ ನಿಬಂಧನೆಯಾಗಿದೆ. 1949 ಜುಲೈ ತಿಂಗಳಲ್ಲಿ ಜಮ್ಮು ಮತ್ತು ಕಾಶ್ಮೀರ ಮಧ್ಯಂತರ ಪ್ರಧಾನ ಮಂತ್ರಿ ಶೇಖ್ ಅಬ್ದುಲ್ಲಾ ಅವರು ಭಾರತೀಯ ಸಂವಿಧಾನ ಸಭೆಯೊಂದಿಗೆ ಮಾತುಕತೆಗಳನ್ನು ನಡೆಸಿ, ಅಂತಿಮವಾಗಿ 370 ನೇ ವಿಧಿಯನ್ನು ಅಳವಡಿಸಲಾಯಿತು. ಆ ವಿಧಿಯ ಮೂಲಕ ಜಮ್ಮು ಮತ್ತು ಕಾಶ್ಮೀರಕ್ಕೆ ಕೆಲವು ಸ್ವಾಯತ್ತತೆಯನ್ನು ನೀಡಲಾಯಿತು. ಉದಾಹರಣೆಗೆ ರಾಜ್ಯವು ತನ್ನದೇ ಆದ ಸಂವಿಧಾನವನ್ನು ಹೊಂದಲು ಅವಕಾಶ ನೀಡಿತು, ಪ್ರತ್ಯೇಕ ಧ್ವಜ ಮತ್ತು ಭಾರತ ಸರ್ಕಾರದ ಸೀಮಿತ ನ್ಯಾಯವ್ಯಾಪ್ತಿಯನ್ನು ಕಲ್ಪಿಸಿತು.

ಇದನ್ನೂ ಓದಿ : ಲೋಕಸಭೆಗೆ ಇಲ್ಲದ ನಮಾಜ್‌ ಬ್ರೇಕ್‌ ರಾಜ್ಯಸಭೆಗೂ ಇಲ್ಲ: ರದ್ದು ಮಾಡಿದ ಸಭಾಧ್ಯಕ್ಷ ಜಗದೀಪ್ ಧನ್ಕರ್

ಭಾರತೀಯ ಸಂವಿಧಾನ ಆರ್ಟಿಕಲ್ 1, ಜಮ್ಮು ಕಾಶ್ಮೀರಕ್ಕೆ ಆರ್ಟಿಕಲ್ 370 ರ ಮೂಲಕ ಜಾರಿ ಮಾಡಲು ಅವಕಾಶ ಕಲ್ಪಿಸುತ್ತಿದೆ ಎಂದು ಆರ್ಟಿಕಲ್ 370(1)(ಸಿ)ನಲ್ಲಿ ತಿಳಿಸಲಾಗಿದೆ. ಆರ್ಟಿಕಲ್ 1 ಒಕ್ಕೂಟ ಎಂದು ಹೇಳುತ್ತದೆ. ಅದರರ್ಥ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಭಾರತೀಯ ಒಕ್ಕೂಟಕ್ಕೆ ಬಂಧಿಸುವ ವಿಧಿ 370 ಆಗಿದೆ. ರಾಷ್ಟ್ರಪತಿಗಳ ಆದೇಶದ ಮೂಲಕ 370 ನೇ ವಿಧಿಯನ್ನು ತೆಗೆದುಹಾಕಬಹುದಾದರೂ, ಹೊಸ ಕಾನೂನುಗಳನ್ನು ಮಾಡದ ಹೊರತು ಅದು ರಾಜ್ಯವನ್ನು ಭಾರತದಿಂದ ಸ್ವತಂತ್ರವಾಗಿರುವಂತೆ ನೋಡಿಕೊಳ್ಳುತ್ತದೆ.

370ನೇ ವಿಧಿ ರದ್ದು

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರವು ರಾಷ್ಟ್ರಪತಿ ಆದೇಶದ ಮೂಲಕ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನದ 370 ನೇ ವಿಧಿಯನ್ನು 2019 ಆಗಸ್ಟ್ 5ರಂದು ರದ್ದು ಮಾಡಿತು. ಅಲ್ಲದೇ, ಜಮ್ಮು ಮತ್ತು ಕಾಶ್ಮೀರವನ್ನು ವಿಭಜಿಸಿ, ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಎಂಬ ಕೇಂದ್ರಾಡಳಿತ ಪ್ರದೇಶಗಳನ್ನು ಮಾಡಲಾಯಿತು. ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ರಾಜ್ಯವು ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶವು ಶಾಸಕಾಂಗವನ್ನು ಹೊಂದಿದ್ದರೆ, ಲಡಾಖ್ ಶಾಸಕಾಂಗವನ್ನು ಹೊಂದಿರುವುದಿಲ್ಲ.

ಅರ್ಜಿದಾರರ ವಾದವೇನು?

ಆರ್ಟಿಕಲ್ 370 ರದ್ಧತಿ ನಿರ್ಧಾರವು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ಮತ್ತು ಗುರುತಿನ ಮೇಲೆ ಪ್ರಭಾರ ಬೀರಲಿದೆ. ಜೊತೆಗೆ ಈ ಪ್ರದೇಶದ ಪ್ರದೇಶದ ಸ್ವಾಯತ್ತತೆ ಮತ್ತು ಜನಸಂಖ್ಯಾ ಸಂಯೋಜನೆಗೆ ಅದರ ಸಂಭಾವ್ಯ ಪರಿಣಾಮಗಳ ಬಗ್ಗೆ ಅರ್ಜಿದಾರರು ಆತಂಕ ವ್ಯಕ್ತಪಡಿಸಿದ್ದಾರೆ. ಈ ನೆಲೆಯಲ್ಲೇ ಅರ್ಜಿದಾರರು ಆರ್ಟಿಕಲ್ 370 ರದ್ಧತಿಯು ಸಂವಿಧಾನಬಾಹಿರವಾಗಿದೆ ಎಂದು ವಾದಿಸಿದರು.

ಪೂರ್ಣ ಪ್ರಮಾಣದ ರಾಜ್ಯವನ್ನು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲು ಕೇಂದ್ರ ಸರ್ಕಾರವು ತನಗಿರುವ ಅಖಂಡ ಬಹುಮತ ಮತ್ತು ಕಾರ್ಯನಿರ್ವಾಹಕ ಆದೇಶಗಳನ್ನು ದುರುಪಯೋಗ ಮಾಡಿಕೊಂಡಿದೆ. ಇದು ಒಕ್ಕೂಟ ವ್ಯವಸ್ಥೆ ಮತ್ತು ಸಾಂವಿಧಾನಿಕ ತತ್ವಗಳಿಗೆ ವಿರುದ್ಧವಾದ ನಡೆಯಾಗಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ.

Exit mobile version