Site icon Vistara News

NCERT: ಹೊಸ ಶಿಕ್ಷಣ ನೀತಿ ಅನುಸಾರ ಎನ್‌ಸಿಇಆರ್‌ಟಿ ಪಠ್ಯಪುಸ್ತಕ ಪರಿಷ್ಕರಣೆ, ಮುಂದಿನ ವರ್ಷದಿಂದಲೇ ಜಾರಿ

Ramayana, Mahabharata likely to be part of NCERT SS Textbook Says Committee

ನವದೆಹಲಿ: ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗೆ (National Education Policy – NEP) ಅನುಗುಣವಾಗಿ ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಆ್ಯಂಡ್ ಟ್ರೈನಿಂಗ್ (NCERT) ಪಠ್ಯ ಪುಸ್ತಕಗಳನ್ನು ಪರಿಷ್ಕರಿಸಲಾಗುತ್ತದೆ. ಈ ಪರಿಷ್ಕೃತ ಪಠ್ಯಗಳು 2024-25 ಶೈಕ್ಷಣಿಕ ವರ್ಷದಿಂದ ಜಾರಿಯಾಗಲಿವೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು(NCF) ಅನುಸಾರವೇ ಪಠ್ಯಗಳನ್ನು ಪರಿಷ್ಕರಿಸಲಾಗುತ್ತದೆ.

2024-25ರ ಶೈಕ್ಷಣಿಕ ಅವಧಿಯಿಂದ ಹೊಸ ಪಠ್ಯಪುಸ್ತಕಗಳನ್ನು ಪರಿಚಯಿಸುವ ಸಾಧ್ಯತೆಯಿದೆ. ಇದು ತುಂಬ ಬೃಹತ್ ಕೆಲಸವಾಗಿದ್ದು, ಆದರೂ ನಾವು ಪಠ್ಯ ಪರಿಷ್ಕರಣೆಯ ಗುರಿಯನ್ನು ಹಾಕಿಕೊಂಡಿದ್ದೇವೆ. ಹೊಸ ಎನ್‌ಸಿಎಫ್ ಪ್ರಕಾರ ಪಠ್ಯಪುಸ್ತಕಗಳನ್ನು ಪರಿಷ್ಕರಿಸಲಾಗುವುದು. ಅದರ ಕೆಲಸ ಈಗಾಗಲೇ ನಡೆಯುತ್ತಿದೆ. ಪಠ್ಯಪುಸ್ತಕಗಳನ್ನು ಅಭಿವೃದ್ಧಿಪಡಿಸುವುದು ಶ್ರಮದಾಯಕ ಕೆಲಸವಾಗಿದೆ ಎಂಬ ಸಚಿವಾಲಯ ಹಿರಿಯ ಅಧಿಕಾರಿಯ ಹೇಳಿಕೆಯನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ಪರಿಷ್ಕೃತ ಎನ್‌ಸಿಎಫ್ ಪ್ರಕಾರ ಅಭಿವೃದ್ಧಿಪಡಿಸಿದ ಎಲ್ಲಾ ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳು ಡಿಜಿಟಲ್ ಸ್ವರೂಪದಲ್ಲಿಯೂ ಲಭ್ಯವಿರುತ್ತವೆ. ಕೋವಿಡ್-19 ಸಾಂಕ್ರಾಮಿಕವು ನಮಗೆ ಡಿಜಿಟಲ್ ಅಗತ್ಯತೆಯ ಬಗ್ಗೆಯೂ ಕಲಿಸಿಕೊಟ್ಟಿದೆ. ಹಾಗಾಗಿ, ಹೊಸ ಎಲ್ಲ ಪಠ್ಯ ಪುಸ್ತಕಗಳು ಏಕಕಾಲಕ್ಕೆ ಡಿಜಿಟಲ್ ರೂಪದಲ್ಲಿಯೂ ದೊರೆಯುವಂತೆ ಮಾಡಲಾಗುವುದು. ಈ ಡಿಜಿಟಲ್ ಪುಠ್ಯ ಪುಸ್ತಕಗಳನ್ನು ಯಾರೂ ಬೇಕಾದವರು ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.

ರಾಷ್ಟ್ರೀಯ ಹೊಸ ಶಿಕ್ಷಣ ನೀತಿಯು 5+3+3+4 ಪಠ್ಯಕ್ರಮದ ಶಿಕ್ಷಣ ರಚನೆಯನ್ನು ಕಲ್ಪಿಸಿದೆ. ಹೊಸ ಶಿಕ್ಷಣ ನೀತಿಯಲ್ಲಿ ವಿವರಿಸಿರುವ ಹೊಸ ಶಾಲಾ ಶಿಕ್ಷಣ ವ್ಯವಸ್ಥೆಯ ಪ್ರಕಾರ, ಮಕ್ಕಳು ಅಡಿಪಾಯದ ಹಂತದಲ್ಲಿ ಐದು ವರ್ಷಗಳನ್ನು, ಪೂರ್ವಸಿದ್ಧತಾ ಮತ್ತು ಮಧ್ಯಮ ಹಂತಗಳಲ್ಲಿ ತಲಾ ಮೂರು ವರ್ಷಗಳನ್ನು ಮತ್ತು ದ್ವಿತೀಯ ಹಂತದಲ್ಲಿ ನಾಲ್ಕು ವರ್ಷಗಳನ್ನು ಕಳೆಯಲಿದ್ದಾರೆ.

ಇದನ್ನೂ ಓದಿ: Mother Tongue | ಮಗುವಿಗೆ 8 ವರ್ಷದವರೆಗೂ ಮಾತೃಭಾಷೆಯಲ್ಲಿ ಕಲಿಸಬೇಕು: ಧರ್ಮೇಂದ್ರ ಪ್ರಧಾನ್

Exit mobile version