Site icon Vistara News

NCP Crisis: ಎನ್‌ಸಿಪಿ ಹೆಸರು, ಚಿಹ್ನೆಗಾಗಿ ಚುನಾವಣಾ ಆಯೋಗಕ್ಕೆ ಅಜಿತ್ ಅರ್ಜಿ! ಈಗೇನ್ ಮಾಡ್ತಾರೆ ಶರದ್ ಪವಾರ್?

Sharad Pawar and Ajit Pawar

ಮುಂಬೈ, ಮಹಾರಾಷ್ಟ್ರ: ಅಜಿತ್ ಪವಾರ್ (Ajit Pawar) ನೇತೃತ್ವದ ಗುಂಪು ತಮ್ಮ ಬಣಕ್ಕೆ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ (NCP) ಹೆಸರು (NCP Name) ಮತ್ತು ಸಿಂಬಲ್ (Party Symbol) ನೀಡುವಂತೆ ಚುನಾವಣಾ ಆಯೋಗಕ್ಕೆ (Election Commission) ಮನವಿ ಮಾಡಿದೆ. ತಮ್ಮ ಮನವಿ ಜತೆಗೆ 40 ಶಾಸಕರ ಬೆಂಬಲ ಅಫಿಡವಿಟ್ ಕೂಡ ಸಲ್ಲಿಸಿದೆ. ಶರದ್ ಪವಾರ್ (Sharad Pawar) ಅವರು 40 ವರ್ಷಗಳ ಹಿಂದೆ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷವನ್ನು ಸ್ಥಾಪಿಸಿದ್ದರು. ಆದರೆ, ಸಹೋದರ ಪುತ್ರರಾದ ಅಜಿತ್ ಪವಾರ್ ಅವರು ಶರದ್ ಪವಾರ್ ವಿರುದ್ಧ ಬಂಡೆದ್ದು, ಸುಮಾರು 30 ಶಾಸಕರೊಂದಿಗೆ ಶಿಂಧೆ-ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಬೆಂಬಲ ನೀಡಿದ್ದಾರೆ. ಅಲ್ಲದೇ, ಸರ್ಕಾರದಲ್ಲಿ ಭಾಗಿಯಾಗಿದ್ದು, ಉಪಮುಖ್ಯಮಂತ್ರಿಯಾಗಿದ್ದಾರೆ(NCP Crisis).

ಇದಕ್ಕೆ ಪ್ರತಿಯಾಗಿ ಶರದ್ ಪವಾರ್ ನೇತೃತ್ವದ ಬಣವು ಚುನಾವಣಾ ಆಯೋಗಕ್ಕೆ ಕೇವಿಯಟ್ ಸಲ್ಲಿಸಿದೆ. ಪಕ್ಷದ ಒಳ ಜಗಳಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ಧಾರವನ್ನು ಕೈಗೊಳ್ಳುವ ಮುಂಚೆ ತಮ್ಮ ವಾದವನ್ನು ಆಲಿಸಬೇಕು ಎಂದು ಶರದ್ ಪವಾರ್ ನೇತೃತ್ವದ ಬಣ ಆಯೋಗಕ್ಕೆ ಮನವಿ ಮಾಡಿದೆ.

ಚುನಾವಣಾ ಆಯೋಗವು ತನ್ನ ಮುಂದೆ ಸಲ್ಲಿಸಿದ ದಾಖಲೆಗಳನ್ನು ವಿನಿಮಯ ಮಾಡಿಕೊಳ್ಳುವಂತೆ ಎರಡೂ ಬಣಗಳಿಗೆ ಹೇಳಿದೆ. ಮುಂದಿನ ಕೆಲವು ದಿನಗಳಲ್ಲಿ ಪಕ್ಷದ ಹೆಸರು ಮತ್ತು ಸಿಂಬಲ್ ಯಾವ ಬಣಕ್ಕೆ ಸೇರಲಿದೆ ಎಂಬ ನಿರ್ಧಾರವನ್ನು ಆಯೋಗ ಕೈಗೊಳ್ಳುವ ಸಾಧ್ಯತೆಗಳಿವೆ.

ಈ ಸುದ್ದಿಯನ್ನೂ ಓದಿ: NCP Crisis: ನಾನು ಸಿಎಂ ಆಗ್ಬೇಕು; ಅಜಿತ್, ಪಕ್ಷದ ಚಿಹ್ನೆ ಯಾರೂ ಕಸಿಯಲಾರರು ಎಂದ ಶರದ್! ಯಾರ ಕಡೆ ಎಷ್ಟು ಶಾಸಕರು?

ಎರಡೂ ಬಣದ ನಾಯಕರು ತಮ್ಮದೇ ನಿಜವಾದ ಎನ್‌ಸಿಪಿ ಎಂದು ಹೇಳಿಕೊಳ್ಳುತ್ತಿದ್ದಾರೆ. ಶರದ್ ಪವಾರ್ ನೇತೃತ್ವದ ನಾಯಕಿ ಸುಪ್ರಿಯಾ ಸುಳೆ ಅವರು, ನಿಜವಾದ ಎನ್‌ಸಿಪಿ ಶರದ್ ಪವಾರ್ ಜತೆಗಿದೆ. ಓರಿಜನಲ್ ಸಿಂಬಲ್ ಕೂಡ ನಮ್ಮ ಬಳಿಯೇ ಇರಲಿದೆ. ನೀವು ನಮ್ಮನ್ನು ಅವಮಾನ ಮಾಡಿ. ಆದರೆ, ನಮ್ಮ ತಂದೆಯನ್ನಲ್ಲ. ಈಗ ನಡೆಯುತ್ತಿರುವ ಸಂಘರ್ಷವು ಬಿಜೆಪಿ ಸರ್ಕಾರದ ವಿರುದ್ಧವಾಗಿದೆ. ಬಿಜೆಪಿ ದೇಶದಲ್ಲಿರುವ ಅತ್ಯಂತ ಭ್ರಷ್ಟ ಪಕ್ಷವಾಗಿದೆ ಎಂದು ಹೇಳಿದ್ದಾರೆ. ಈ ಮಧ್ಯೆ ಅಜಿತ್ ಬಣದ ಛಗನ್ ಬುಜಬುಲ್ ಕೂಡ ಎನ್‌ಸಿಪಿ ಹೆಸರು ಮತ್ತು ಸಿಂಬಲ್ ಅಜಿತ್ ಬಣಕ್ಕೆ ದೊರೆಯಲಿದೆ ಎಂದು ಹೇಳಿಕೊಂಡಿದ್ದಾರೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version