Site icon Vistara News

NCP Crisis: ಪ್ರಫುಲ್ ಪಟೇಲ್‌ಗೆ ಪವಾರ್ ಗೇಟ್‌ಪಾಸ್, ಅಜಿತ್ ಬಣದಿಂದ ಎನ್‌ಸಿಪಿ ರಾಜ್ಯಾಧ್ಯಕ್ಷನಿಗೆ ಕೊಕ್!

Sharad Pawar and Ajit Pawar

ಮುಂಬೈ, ಮಹಾರಾಷ್ಟ್ರ: ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (NCP)ದ ನಾಯಕ ಅಜಿತ್ ಪವಾರ್ (Ajit Pawar) ಅವರು ತಮ್ಮ ಬೆಂಬಲಿಗ ಶಾಸಕರೊಂದಿಗೆ ಬಿಜೆಪಿ-ಶಿಂಧೆ ನೇತೃತ್ವದ ಸರ್ಕಾರ ಸೇರಿಕೊಂಡ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿ (Maharashtra) ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ಪಕ್ಷಕ್ಕೆ ದ್ರೋಹ ಬಗೆದ ಆರೋಪದ ಮೇರೆಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಶರದ್ ಪವಾರ್ ಅವರು, ಎನ್‌ಸಿಪಿ ಕಾರ್ಯಾಧ್ಯ್ಷ ಪ್ರಫುಲ್ ಪಟೇಲ್ (Praful Patel) ಹಾಗೂ ಸುನೀಲ್ ತಟಕರೆ (Sunil Tatkare) ಅವರನ್ನು ಪಕ್ಷದಿಂದ ಕಿತ್ತು ಹಾಕಿದ್ದಾರೆ. ಪ್ರಫುಲ್ ಪಟೇಲ್ ಸೇರಿ ಒಟ್ಟು ಐವರ ವಿರುದ್ಧ ಕ್ರಮಕೈಗೊಳ್ಳಲಾಗಿದೆ. ಇದಕ್ಕೆ ಪ್ರತಿಯಾಗಿ ಅಜಿತ್ ಪವಾರ್ ಬಣದಿಂದ ಎನ್‌ಸಿಪಿಯ ರಾಜ್ಯಾಧ್ಯಕ್ಷ ಜಯಂತ್ ಪಾಟೀಲ್ ಅವರನ್ನು ಎನ್‌ಸಿಪಿಯಿಂದ ಕಿತ್ತು ಹಾಕಲಾಗಿದೆ. ಸುನೀಲ್ ತಟಕರೆ ಅವರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ವಿಧಾನಸಭೆಯಲ್ಲಿ ಅಜಿತ್ ಪವಾರ್ ಅವರನ್ನು ಎನ್‌‍ಸಿಪಿಯನ್ನು ಮುನ್ನಡೆಸಲಿದ್ದಾರೆಂದು ಪ್ರಫುಲ್ ಪಟೇಲ್ ಅವರು ತಿಳಿಸಿದ್ದಾರೆ(NCP Crisis).

ಪಕ್ಷ ವಿರೋಧಿ ಚಟುವಟಿಕೆಗಳನ್ನು ನಡೆಸಿರುವ ಪ್ರಫುಲ್ ಪಟೇಲ್ ಹಾಗೂ ಸುನೀಲ್ ತಟಕರೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಎನ್‌ಸಿಪಿ ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಳೆ ಅವರು ಪತ್ರ ಬರೆದ ಬೆನ್ನಲ್ಲೇ ಎನ್‌ಸಿಪಿ ರಾಷ್ಟ್ರೀಯ ಅಧ್ಯಕ್ಷ ಶರದ್ ಪವಾರ್ ಅವರು ಪ್ರಫುಲ್ ಪಟೇಲ್ ಮತ್ತು ಸುನೀಲ್ ತಟಕರೆ ಅವರನ್ನು ಪಕ್ಷದಿಂದಲೇ ಕಿತ್ತು ಹಾಕಿದ್ದಾರೆ.

ಈ ಸುದ್ದಿಯನ್ನೂ ಓದಿ: Ajit Pawar: ಮೋದಿಯಿಂದ ದೇಶದ ಏಳಿಗೆ; ಶಿಂಧೆ ಸರ್ಕಾರ ಸೇರಿದ ಬೆನ್ನಲ್ಲೇ ಅಜಿತ್‌ ಹೇಳಿಕೆ; ಈಗ NCP VS NCP

ಈ ಮಧ್ಯೆ, ಎನ್‌ಸಿಪಿಯ ಎಲ್ಲ ಶಾಸಕರ ಬೆಂಬಲ ಅಜಿತ್ ಪವಾರ್ ಅವರಿಗಿದೆ ಎಂದು ಅಜಿತ್ ಪವಾರ್ ಬಣದ ನಾಯಕ ಪ್ರಫುಲ್ ಪಟೇಲ್ ಅವರು ಹೇಳಿದ್ದಾರೆ. ಹಾಗಾಗಿ, ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ 9 ಶಾಸಕರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಶಾಸಕರನ್ನು ಅನರ್ಹಗೊಳಿಸುವ ಅಧಿಕಾರ ಸ್ಪೀಕರ್ ‌ಅವರಿಗೆ ಮಾತ್ರವೇ ಇರೋದು ಎಂದು ಹೇಳಿದ್ದಾರೆ. ಅಜಿತ್ ಪವಾರ್ ಕೂಡ ಎನ್‌ಸಿಪಿಯ ಎಲ್ಲ ಶಾಸಕರ ಬೆಂಬಲ ತಮಗಿದೆ ಎಂದು ಹೇಳಿಕೊಂಡಿದ್ದಾರೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version