Site icon Vistara News

Disqualification: ಕೊಲೆ ಆರೋಪಿ ಲಕ್ಷದ್ವೀಪ ಸಂಸದ ಮೊಹಮ್ಮದ್‌ ಫೈಜಲ್‌ ಸಂಸತ್‌ ಸದಸ್ಯತ್ವದಿಂದ 2ನೇ ಬಾರಿಗೆ ಅನರ್ಹ

Disqualification Row, Lok Sabha membership of Lakshadweep MP Mohammed Faizal was restored

ಕೊಚ್ಚಿ: ರಾಷ್ಟ್ರೀಯ ಕಾಂಗ್ರೆಸ್‌ ಪಾರ್ಟಿ (ಎನ್‌ಸಿಪಿ)ಯ ಲಕ್ಷದ್ವೀಪದ ಸಂಸದ (lakshadweep MP) ಮೊಹಮ್ಮದ್ ಫೈಜಲ್ (Lok Sabha membership) ಎರಡನೇ ಬಾರಿಗೆ ಲೋಕಸಭಾ ಸದಸ್ಯ ಸ್ಥಾನದಿಂದ (Disqualification) ಅನರ್ಹಗೊಂಡಿದ್ದಾರೆ.

ಮೊಹಮ್ಮದ್ ಫೈಜಲ್ ಪಿ.ಪಿ ಅವರನ್ನು ಹತ್ಯೆ ಪ್ರಕರಣವೊಂದರಲ್ಲಿ ಅಪರಾಧಿ ಎಂದು ಕೇರಳ ಕೋರ್ಟ್ ಘೋಷಿಸಿ ಶಿಕ್ಷೆ ಪ್ರಕಟಿಸಿತ್ತು. ಇದನ್ನು ವಜಾ ಮಾಡಬೇಕು ಎಂದು ಫೈಜಲ್‌ ಕೋರಿದ್ದು, ಈ ಅರ್ಜಿಯನ್ನು ಕೇರಳ ಹೈಕೋರ್ಟ್‌ (kerala high court) ತಿರಸ್ಕರಿಸಿದೆ. ಆ ಬಳಿಕ ಲೋಕಸಭೆಯ ಸದಸ್ಯತ್ವದಿಂದ ಅವರನ್ನು ಅನರ್ಹಗೊಳಿಸಲಾಯಿತು.

“ಕೇರಳದ ಗೌರವಾನ್ವಿತ ಉಚ್ಚ ನ್ಯಾಯಾಲಯದ ದಿನಾಂಕ 03.10.2023ರ ಆದೇಶದ ದೃಷ್ಟಿಯಿಂದ, ಕೇಂದ್ರಾಡಳಿತ ಪ್ರದೇಶ ಲಕ್ಷದ್ವೀಪದ ಸಂಸದೀಯ ಕ್ಷೇತ್ರವನ್ನು ಪ್ರತಿನಿಧಿಸುವ ಲೋಕಸಭಾ ಸದಸ್ಯರಾದ ಮಹಮ್ಮದ್ ಫೈಜಲ್ ಪಿ.ಪಿ. ಅವರನ್ನು ಲೋಕಸಭೆಯ ಸದಸ್ಯತ್ವದಿಂದ, ಅವರ ಶಿಕ್ಷೆಯ ದಿನಾಂಕವಾದ ಜನವರಿ 11, 2023ರಿಂದ ಅನರ್ಹಗೊಳಿಸಲಾಗಿದೆ” ಎಂದು ಲೋಕಸಭೆಯ ಸೆಕ್ರೆಟರಿಯೇಟ್ ಬುಲೆಟಿನ್ ಹೇಳಿದೆ.

ಫೈಜಲ್ ಲೋಕಸಭೆ ಸದಸ್ಯತ್ವದಿಂದ ಅನರ್ಹಗೊಂಡಿರುವುದು ಇದು ಎರಡನೇ ಬಾರಿ. ಜನವರಿ 25ರಂದು ಅವರನ್ನು ಲೋಕಸಭಾ ಸದಸ್ಯರಾಗಿ ಅನರ್ಹಗೊಳಿಸಲಾಯಿತು. ಕವರಟ್ಟಿಯ ಸೆಷನ್ಸ್ ನ್ಯಾಯಾಲಯವು ಪಿ ಸಾಲಿಹ್ ಹತ್ಯೆಗೆ ಯತ್ನಿಸಿದ ಆರೋಪದ ಮೇಲೆ ಅವರನ್ನು ಮತ್ತು ಇತರ ಮೂವರನ್ನು ತಪ್ಪಿತಸ್ಥರೆಂದು ಘೋಷಿಸಿತು ಮತ್ತು ಮೂವರಿಗೂ 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿತು.

ಕೇರಳ ಹೈಕೋರ್ಟ್ ಆ ಪ್ರಕರಣದಲ್ಲಿ ಅವರ ಶಿಕ್ಷೆಯನ್ನು ಅಮಾನತುಗೊಳಿಸಿತ್ತು. ತಿಂಗಳುಗಳ ನಂತರ ಫೈಜಲ್ ಅವರ ಅನರ್ಹತೆಯನ್ನು ಮಾರ್ಚ್ 29ರಂದು ಹಿಂತೆಗೆದುಕೊಳ್ಳಲಾಯಿತು. ಆಗಸ್ಟ್ 2023ರಲ್ಲಿ, ಲಕ್ಷದ್ವೀಪ ಸರ್ಕಾರ ಸಲ್ಲಿಸಿದ ಮೇಲ್ಮನವಿಯ ಮೇಲೆ ಸುಪ್ರೀಂ ಕೋರ್ಟ್ ಕೇರಳ ಹೈಕೋರ್ಟ್ ಆದೇಶವನ್ನು ರದ್ದುಗೊಳಿಸಿತು.

Exit mobile version