Site icon Vistara News

ಎನ್‌ಡಿಎ ಒಕ್ಕೂಟದ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ನಾಮಪತ್ರ ಸಲ್ಲಿಕೆ; ಪ್ರಧಾನಿ ಮೋದಿ ಉಪಸ್ಥಿತಿ

Droupadi Murmu Nomination

ನವದೆಹಲಿ: ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟದ ರಾಷ್ಟ್ರಪತಿ ಅಭ್ಯರ್ಥಿ, ಜಾರ್ಖಂಡ ಮಾಜಿ ರಾಜ್ಯಪಾಲೆ ದ್ರೌಪದಿ ಮುರ್ಮು ಇಂದು ನಾಮಪತ್ರ (Droupadi Murmu Nominations) ರಾಷ್ಟ್ರಪತಿ ಚುನಾವಣೆ ಜುಲೈ 18ಕ್ಕೆ ನಡೆಯಲಿದೆ. ಇಂದು ದ್ರೌಪದಿ ಮುರ್ಮು ನಾಮಪತ್ರ ಸಲ್ಲಿಸಿದ್ದಾರೆ. ಪ್ರಧಾನಿ ಮೋದಿಯವರು ಮೊದಲ ಸೂಚಕರಾಗಿದ್ದಾರೆ. ಸಲ್ಲಿಸಿದ್ದಾರೆ. ಈ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಗೃಹ ಸಚಿವ ಅಮಿತ್‌ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು. ಈ ಎಲ್ಲ ರಾಜಕೀಯ ದಿಗ್ಗಜರೊಂದಿಗೆ ಹೆಜ್ಜೆ ಹಾಕುತ್ತ, ಬಲಪ್ರದರ್ಶನ ಮಾಡಿ ನಾಮಪತ್ರ ಸಲ್ಲಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರೇ ಮೊದಲ ಸೂಚಕರಾಗಿದ್ದು, ಮುರ್ಮು ನಾಮಪತ್ರವನ್ನು ರಿಟರ್ನಿಂಗ್‌ ಆಫೀಸರ್‌ ಪಿ.ಸಿ. ಮೋಡಿ ಅವರಿಗೆ ನೀಡಿದ್ದಾರೆ. ಇವರ ನಾಮಪತ್ರಕ್ಕೆ ಜೆ.ಪಿ.ನಡ್ಡಾ, ರಾಜನಾಥ್‌ ಸಿಂಗ್‌ ಮತ್ತು ಅಮಿತ್‌ ಶಾ ಸಹಿ ಹಾಕಿದ್ದಾರೆ. ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿಯವರೂ ಸೂಚಕರಾಗಿ ಸಹಿ ಹಾಕಿದ್ದಾರೆ.

ದ್ರೌಪದಿ ಮುರ್ಮು ಇಂದು ನಾಮಪತ್ರ ಸಲ್ಲಿಸುವುದಕ್ಕೂ ಮೊದಲು ಸಂಸತ್ತಿನಲ್ಲಿ ಮಹಾತ್ಮ ಗಾಂಧಿ, ಡಾ. ಬಿ.ಆರ್.ಅಂಬೇಡ್ಕರ್‌ ಮತ್ತು ಬಿರ್ಸಾ ಮುಂಡ್ರಾ ಪ್ರತಿಮೆಗಳಿಗೆ ಗೌರವ ಸಮರ್ಪಿಸಿದರು. ದ್ರೌಪದಿ ಮುರ್ಮು ಗೆಲುವು ನಿಶ್ಚಿತ ಎಂದು ಹೇಳಲಾಗುತ್ತಿದ್ದರೂ, ಅವರು ನಿಯಮದಂತೆ ಪ್ರತಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ಯಶವಂತ ಸಿನ್ಹಾ ಜತೆ ಸ್ಪರ್ಧೆಗೆ ಇಳಿಯಲೇಬೇಕು. ಹಾಗೊಮ್ಮೆ ರಾಷ್ಟ್ರಪತಿ ಹುದ್ದೆಗೆ ಏರಿದ್ದೇ ಆದರೆ, ಅವರ ಬುಡಕಟ್ಟು ಜನಾಂಗದಿಂದ ಆಯ್ಕೆಯಾದ ಮೊಟ್ಟ ಮೊದಲ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ಇದನ್ನೂ ಓದಿ: ನನ್ನ ಅಮ್ಮನ ಬಗ್ಗೆ ತಿಳಿದ್ರೆ ಎಲ್ಲರೂ ಬೆಂಬಲ ಕೊಡ್ತಾರೆ ಎಂದ ದ್ರೌಪದಿ ಮುರ್ಮು ಮಗಳು

Exit mobile version