Site icon Vistara News

Nagaland Election Result: ಎನ್‌ಡಿಪಿಪಿ-ಬಿಜೆಪಿ ಕೂಟಕ್ಕೆ ಮತ್ತೆ ಅಧಿಕಾರ, 37 ಕ್ಷೇತ್ರದಲ್ಲಿ ಮುನ್ನಡೆ

NDPP led alliance may get power again, early trends gain

ನವದೆಹಲಿ: ಬಿಜೆಪಿ ನೇತೃತ್ವದ ಕೂಟವು ನಾಗಾಲ್ಯಾಂಡ್‌ನಲ್ಲಿ (Nagaland Election Result) ಆರಂಭಿಕ ಮುನ್ನಡೆ ಪಡೆದುಕೊಂಡು ಮುನ್ನುಗ್ಗುತ್ತಿದೆ. ಇದೇ ಟ್ರೆಂಡ್ ಕೊನೆತಕವೂ ಮುಂದುವರಿದರೆ, ಬಿಜೆಪಿ- ಎನ್‌ಡಿಪಿಪಿ ಕೂಟ ಸರ್ಕಾರ ರಚನೆಯಾಗುವುದು ಪಕ್ಕಾ. ನಾಗಾಲ್ಯಾಂಡ್‌ನಲ್ಲಿ ಬಿಜೆಪಿ(BJP) ಮತ್ತು ನ್ಯಾಷನಲಿಸ್ಟ್ ಡೆಮಾಕ್ರಟಿಕ್ ಪ್ರೊಗೆಸ್ಸಿವ್ ಪಾರ್ಟಿ(NDPP) ಜತೆಗೂಡಿ ಈ ಬಾರಿ ಚುನಾವಣೆ ಎದುರಿಸಿವೆ. ಆರಂಭಿಕ ಫಲಿತಾಂಶದ ವೇಳೆ 37 ಕ್ಷೇತ್ರದಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದ್ದು, ಮ್ಯಾಜಿಕ್ ಸಂಖ್ಯೆ 31 ಆಗಿದೆ(Northeast Assembly Election Result).

ಇನ್ನು ನಾಗಾ ಪೀಪಲ್ಸ್ ಫ್ರಂಟ್(NPF) ಆರು ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದರೆ, ಕಾಂಗ್ರೆಸ್ ಎರಡು ಕ್ಷೇತ್ರದಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದೆ. ಎನ್‌ಡಿಪಿಪಿ ಜತೆಗಿನ ಮೈತ್ರಿಯಲ್ಲಿ ಬಿಜೆಪಿಯ ಕಿರಿಯ ಪಕ್ಷವಾಗಿದೆ. ಬಿಜೆಪಿ 20 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರೆ, ಎನ್‌ಡಿಪಿಪಿ 40 ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ. ಎನ್‌ಡಿಪಿಪಿಯ ನೈಫಿಯು ರಿಯೋ(Neiphiu Rio) ಮುಖ್ಯಮಂತ್ರಿಯಾಗಿದ್ದು, ಮತ್ತೊಂದು ಬಾರಿಗೂ ಅವರೇ ಸಿಎಂ ಆಗುವ ಸಾಧ್ಯತೆಗಳಿವೆ. ಕಳೆದ ಚುನಾವಣೆಯಿಂದಲೂ ಬಿಜೆಪಿಯ ಎನ್‌ಡಿಪಿಪಿಯೊಂದಿಗೆ ಮೈತ್ರಿಯನ್ನು ಸಾಧಿಸಿದೆ. ಕಳೆದ ಬಾರಿ ಈ ಕೂಟ 30 ಕ್ಷೇತ್ರಗಳನ್ನು ಗೆದ್ದಿದ್ದರೆ, ಎನ್‌ಪಿಎಫ್ 26 ಕ್ಷೇತ್ರಗಳಲ್ಲಿ ಗೆದ್ದಿತ್ತು.

ಇದನ್ನೂ ಓದಿ: Northeast Assembly Election Result: ತ್ರಿಪುರದಲ್ಲಿ ಗೆಲುವಿನತ್ತ ಬಿಜೆಪಿ, ನಾಗಾಲ್ಯಾಂಡ್​ನಲ್ಲೂ ಎನ್​ಡಿಎ ಒಕ್ಕೂಟಕ್ಕೆ ಮುನ್ನಡೆ

2003ರವರೆಗೂ ಅಧಿಕಾರ ನಡೆಸಿದ್ದ ಕಾಂಗ್ರೆಸ್, ಈ ಹಿಂದಿನ ಚುನಾವಣೆಯಲ್ಲಿ ಯಾವುದೇ ಕ್ಷೇತ್ರವನ್ನು ಗೆದ್ದಿರಲಿಲ್ಲ. ಈ ಬಾರಿ ಒಂದೆರಡು ಸೀಟುಗಳನ್ನು ಗೆದ್ದುಕೊಳ್ಳಬಹುದು ಎಂದು ಹೇಳಲಾಗುತ್ತಿದೆ. ಫೆ.27ರಂದು ನಾಗಾಲ್ಯಾಂಡ್‌ನ ಒಟ್ಟು 59 ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ಹಾಲಿ ಶಾಸಕ, ಬಜೆಪಿ ಬೆಂಬಲಿತ ಅಭ್ಯರ್ಥಿ ಕಜೆತೋ ಕಿಮಿನಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Exit mobile version