Site icon Vistara News

Operation Dost: ಜೂಲಿ ವಿ ಲವ್‌ ಯು; 6 ವರ್ಷದ ಬಾಲಕಿಯ ಪ್ರಾಣ ಉಳಿಸಿದ ಶ್ವಾನಕ್ಕೆ ಸಿಕ್ಕಿತು ಸಮ್ಮಾನ

NDRF Dog Julie Gets Award

NDRF dog Julie awarded for saving 6-yr-old girl's life in Turkey

ನವದೆಹಲಿ: ಶ್ವಾನಗಳು ಇರುವುದೇ ಹಾಗೆ. ಅವುಗಳಿಗೆ ಒಂದು ಹಿಡಿ ಪ್ರೀತಿ ತೋರಿಸಿದರೆ, ಒಂದಷ್ಟು ಅನ್ನ ಹಾಕಿದರೆ ಕೊನೆಯವರೆಗೂ ನಮಗೆ ನಿಯತ್ತಾಗಿ, ನಮಗೆ ಕಾವಲಾಗಿ ಇರುತ್ತವೆ. ಹಾಗಾಗಿಯೇ, ನಿಯತ್ತಿಗೆ ಇನ್ನೊಂದು ಹೆಸರೇ ಶ್ವಾನಗಳಾಗಿವೆ. ಅದರಲ್ಲೂ, ಭಾರತೀಯ ಸೇನೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್‌)ಯಲ್ಲಿರುವ ಶ್ವಾನಗಳು ದೇಶವನ್ನೂ ಕಾಯುತ್ತವೆ. ಇದಕ್ಕೆ ನಿದರ್ಶನ ಎಂಬಂತೆ, ಕಳೆದ ವರ್ಷದ ಫೆಬ್ರವರಿಯಲ್ಲಿ ಭೂಕಂಪದಿಂದ ನಲುಗಿದ್ದ ಟರ್ಕಿಯಲ್ಲಿ ಆರು ವರ್ಷದ ಬಾಲಕಿಯ ಪ್ರಾಣ ಉಳಿಸಿದ್ದ (Operatin Dost) ಎನ್‌ಡಿಆರ್‌ಎಫ್‌ ಶ್ವಾನ ‘ಜೂಲಿ’ಗೆ ಈಗ ಪ್ರಶಸ್ತಿ ಲಭಿಸಿದೆ.

ಹೌದು, ಕಳೆದ ಫೆಬ್ರವರಿಯಲ್ಲಿ ಟರ್ಕಿಯಲ್ಲಿ ಭೀಕರ ಭೂಕಂಪ ಸಂಭವಿಸಿದ ಕಾರಣ ಭಾರತವು ‌’ಆಪರೇಷನ್‌ ದೋಸ್ತ್’ ಕೈಗೊಂಡು ನೆರವಿನ ಹಸ್ತ ಚಾಚಿತ್ತು. ಟರ್ಕಿಯಲ್ಲಿ ಭೂಕಂಪದಿಂದ ಕಟ್ಟಡ ಕುಸಿದು, ಕಟ್ಟಡದ ಅವಶೇಷಗಳ ಅಡಿಯಲ್ಲಿ ಆರು ವರ್ಷದ ಬಾಲಕಿ ಸಿಲುಕಿದ್ದಳು. ಬಾಲಕಿಯನ್ನು ಎನ್‌ಡಿಆರ್‌ಎಫ್‌ನ ಜೂಲಿಯು ರಕ್ಷಣೆ ಮಾಡಿತ್ತು. ಹೆಣ್ಣು ಲ್ಯಾಬ್ರಡಾರ್‌ ಶ್ವಾನವು ಚಾಣಾಕ್ಷತನ ಮೆರೆದು ಬಾಲಕಿಯ ಪ್ರಾಣ ಉಳಿಸಿತ್ತು. ಹೀಗೆ, ವಿದೇಶದಲ್ಲಿ ಶೌರ್ಯ ಮೆರೆದ ಜೂಲಿಗೆ ಈಗ ಡೆರೈಕ್ಟರ್‌ ಜನರಲ್ಸ್‌ ಕಮೆಂಡೇಷನ್‌ ರೋಲ್‌ ಎಂಬ ಪ್ರಶಸ್ತಿ ನೀಡಲಾಗಿದೆ.

ಟರ್ಕಿಯಲ್ಲಿ ಬಹುಮಹಡಿ ಕುಸಿದ ಕಾರಣ ಆರು ವರ್ಷದ ಬೆರೆನ್‌ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದಳು. ಸುಮಾರು 70 ಗಂಟೆ ಆಕೆ ಅವಶೇಷಗಳ ಅಡಿಯಲ್ಲೇ ಇದ್ದಳು. ಬಾಲಕಿಯ ರಕ್ಷಣೆಗೆ ಜೂಲಿಗೆ ರೋಮಿಯೊ ಎಂಬ ಮತ್ತೊಂದು ಶ್ವಾನ ಕೂಡ ನೆರವಾಗಿತ್ತು. ಟರ್ಕಿಯಲ್ಲಿ ಸುಮಾರು ಏಳೆಂಟು ಜನರ ರಕ್ಷಣೆಗೆ ಜೂಲಿ ನೆರವಾಗಿದೆ ಎಂಬುದು ಗಮನಾರ್ಹ ಸಂಗತಿಯಾಗಿದೆ.

ಇದನ್ನೂ ಓದಿ: Viral Video: ಅಪ್ಪನ ಕಣ್ಣೆದುರೇ ಮಗನನ್ನು ಕೊಂದು ತಿಂದ ತಿಮಿಂಗಲ! ವೈರಲ್‌ ವಿಡಿಯೊ ಇಲ್ಲಿದೆ ನೋಡಿ

ಏನಿದು ಆಪರೇಷನ್‌ ದೋಸ್ತ್?

ಕೆಲ ತಿಂಗಳ ಹಿಂದೆ ಟರ್ಕಿ ಹಾಗೂ ಸಿರಿಯಾದಲ್ಲಿ ಭೀಕರ ಭೂಕಂಪ ಸಂಭವಿಸಿ, 25,000ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು. ಆಗ ಭಾರತದ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ಪಡೆ (ಎನ್‌ಡಿಆರ್‌ಎಫ್‌)ಯ ನಾಲ್ಕು ತಂಡಗಳು ತಲುಪಿ, ಆಪರೇಷನ್‌ ದೋಸ್ತ್‌ ಹೆಸರಿನಲ್ಲಿ ನೆರವಿಗೆ ಧಾವಿಸಿತ್ತು. 30 ಬೆಡ್‌ಗಳ ಒಂದು ಪೂರ್ಣ ಪ್ರಮಾಣದ ಆಸ್ಪತ್ರೆಯೇ ನಿರ್ಮಿಸಿತ್ತು. 99 ವಿವಿಧ ತಜ್ಞರು, ಔಷಧಗಳು, ಸ್ಕ್ಯಾನಿಂಗ್‌ ಯಂತ್ರಗಳು, ವೈದ್ಯಕೀಯ ಹಾಗೂ ಶಸ್ತ್ರಚಿಕಿತ್ಸಾ ಸಾಮಗ್ರಿಗಳನ್ನು ಭಾರತ ನೀಡಿತ್ತು. 150ಕ್ಕೂ ಹೆಚ್ಚಿನ ಎನ್‌ಡಿಆರ್‌ಎಫ್‌ ಯೋಧರು ಅಲ್ಲಿಗೆ ವಿಶೇಷ ವಾಹನಗಳು, ಸಾಧನೋಪಕರಣಗಳು, ಡಾಗ್‌ ಸ್ಕ್ವಾಡ್‌ಗಳ ಜತೆಗೆ ಧಾವಿಸಿದ್ದರು. ಕುಸಿದ ಕಟ್ಟಡಗಳ ಅವಶೇಷಗಳಡಿಯಲ್ಲಿ ಸಿಲುಕಿರುವವರನ್ನು ಹೊರತೆಗೆಯುವ, ಪ್ರಥಮ ಚಿಕಿತ್ಸೆ ನೀಡುವ, ಆಸ್ಪತ್ರೆಗೆ ಸಾಗಿಸುವ ಕಾರ್ಯದಲ್ಲಿ ತೊಡಗಿದ್ದರು.

Exit mobile version