ನವ ದೆಹಲಿ: ದೆಹಲಿ ಮಹಾನಗರ ಪಾಲಿಕೆ ಚುನಾವಣೆ ಮತ ಎಣಿಕೆ (Delhi MCD Election) ನಡೆಯುತ್ತಿದ್ದು, ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷಗಳ ಮಧ್ಯೆ ತೀವ್ರ ಪೈಪೋಟಿ ಇದೆ. ಮೋಹನ್ ಗಾರ್ಡನ್ ವಾರ್ಡ್ ಮತ್ತು ಲಕ್ಷ್ಮೀ ನಗರ ವಾರ್ಡ್‌ಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಮೋಹನ್ ಗಾರ್ಡನ್ನಲ್ಲಿ ಬಿಜೆಪಿಯ ಶ್ಯಾಮ್ ಕೃಷ್ಣ ಮಿಶ್ರಾ ಮತ್ತು ಲಕ್ಷ್ಮೀನಗರಲ್ಲಿ ಅಲಕಾ ರಾಘವ್ ಜಯ ಸಾಧಿಸಿದ್ದರೆ, ದರಿಯಾಗಂಜ್ ವಾರ್ಡ್ನಲ್ಲಿ ಆಪ್ ಅಭ್ಯರ್ಥಿ ಸಾರಿಕಾ ಚೌಧರಿ ಗೆದ್ದಿದ್ದಾರೆ. ಈ ಮೂವರ ವಿಜಯವನ್ನು ದೆಹಲಿ ಚುನಾವಣಾ ಆಯೋಗ ಅಧಿಕೃತ ಘೋಷಣೆ ಮಾಡಿದೆ.
ಇಂದು ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಪ್ರಾರಂಭವಾದಾಗ ಮೊದಲು ಬಿಜೆಪಿ ಮುನ್ನಡೆ ಸಾಧಿಸಿತ್ತು. ಆಪ್ ಅದರ ಹಿಂದಿತ್ತು. ಕಾಂಗ್ರೆಸ್ ಮೂರನೇ ಸ್ಥಾನದಲ್ಲಿ ಹೆಜ್ಜೆ ಹಾಕುತ್ತಿತ್ತು. ಆದರೆ ಈಗ ಆಮ್ ಆದ್ಮಿ ಪಕ್ಷ ಮತ್ತು ಬಿಜೆಪಿ ನಡುವೆ ಸಮಾನ ಪೈಪೋಟಿ ಇದೆ. ಆಪ್ 123 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಬಿಜೆಪಿ 121 ಕ್ಷೇತ್ರಗಳಲ್ಲಿ ಮುಂದಿದೆ. ಒಂದು ಸಲ ಬಿಜೆಪಿ ಮುಂದಿದ್ದರೆ, ಮತ್ತೊಂದು ಸಲ ಆಪ್ ಮುಂದೆ ಓಡುತ್ತಿದೆ. ಹೀಗಾಗಿ ದೆಹಲಿ ಮಹಾನಗರ ಪಾಲಿಕೆ ಚುನಾವಣಾ ಮತ ಎಣಿಕೆ ತುಂಬ ಕುತೂಹಲ ಮೂಡಿಸಿದೆ. ಇನ್ನು ಕಾಂಗ್ರೆಸ್ 8 ಸ್ಥಾನದಲ್ಲಿ ಮುನ್ನಡೆ ಸಾಧಿಸಿದ್ದರೆ, ಪಕ್ಷೇತರರು 5 ಸ್ಥಾನಗಳಲ್ಲಿ ಮುಂದಿದ್ದಾರೆ. ಇದುವರೆಗೆ 23 ಲಕ್ಷ ಮತಗಳ ಎಣಿಕೆಯಾಗಿದೆ.
ಇದನ್ನೂ ಓದಿ: Delhi MCD Election 2022| ದೆಹಲಿ ಮಹಾನಗರ ಪಾಲಿಕೆ ಚುನಾವಣೆ ಮತ ಎಣಿಕೆ; ಬಿಜೆಪಿ 132, ಆಪ್ 117 ವಾರ್ಡ್‌ಗಳಲ್ಲಿ ಮುನ್ನಡೆ