ನವದೆಹಲಿ: ಗಣರಾಜ್ಯೋತ್ಸವ ದಿನದಂದು ಕೇಂದ್ರ ಆರೋಗ್ಯ ಸಚಿವ ಡಾ. ಮನ್ಸುಖ್ ಮಾಂಡವಿಯಾ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಅವರು ಭಾರತ್ ಬಯೋಟೆಕ್‌ನ ಇಂಟ್ರಾನಾಸಲ್ ಕೋವಿಡ್-19 ಇನ್‌ಕೊವಾಕ್(iNCOVACC Vaccine) ಲಸಿಕೆಗೆ ಚಾಲನೆ ನೀಡಿದರು. ಹೈದ್ರಾಬಾದ್ ಮೂಲದ ಭಾರತ್ ಬಯೋಟೆಕ್ ಕಂಪನಿಯು ಇಂಟ್ರಾನಾಸಲ್ ಲಸಿಕೆಯನ್ನು ಸರ್ಕಾರಕ್ಕೆ 325 ರೂ.ಗೆ ಮತ್ತು ಖಾಸಗಿ ಲಸಿಕಾ ಕೇಂದ್ರಗಳಿಗೆ ಪ್ರತಿ ಶಾಟ್‌ಗೆ 800 ರೂ.ಗೆ ಮಾರಾಟ ಮಾಡುವುದಾಗಿ ಕಳೆದ ಡಿಸೆಂಬರ್‌ನಲ್ಲಿ ಘೋಷಣೆ ಮಾಡಿತ್ತು.
ಪ್ರಪಂಚದ ಮೊದಲ ಮೇಡ್-ಇನ್-ಇಂಡಿಯಾ ಇಂಟ್ರಾನಾಸಲ್ ಲಸಿಕೆ iNCOVACC ಒಂದು ಮರುಸಂಯೋಜಕ ಪ್ರತಿಕಾಯ-ಕೊರತೆಯ ಅಡೆನೊವೈರಸ್ ವೆಕ್ಟರ್ಡ್ ಲಸಿಕೆಯಾಗಿದ್ದು, ಪೂರ್ವ-ಸಮ್ಮಿಳನ ಸ್ಥಿರಗೊಳಿಸಿದ ಸ್ಪೈಕ್ ಪ್ರೊಟೀನ್ ಅನ್ನು ಹೊಂದಿದೆ. ಈ ಲಸಿಕೆಗೆ ಭಾರತೀಯ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ(ಡಿಸಿಜಿಐ) ನವೆಂಬರ್‌ನಲ್ಲಿ ವಯಸ್ಕರಿಗೆ ಹೆಟೆರೊಲಾಜಸ್ ಬೂಸ್ಟರ್ ಡೋಸ್‌ನಂತೆ ನಿರ್ಬಂಧಿತ ತುರ್ತು ಬಳಕೆಗಾಗಿ ಅನುಮೋದನೆಯನ್ನು ನೀಡಿತು.
ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಕೋವಿಡ್ ಲಸಿಕೆ ಅಡ್ಡಪರಿಣಾಮ, ಸರ್ಕಾರ ಹೊಣೆಗಾರಿಕೆ ಹೊರಲಿ
iNCOVACC ಹೇಗೆ ಕೆಲಸ ಮಾಡುತ್ತದೆ?
ಈ ಲಸಿಕೆ ಹೆಚ್ಚು ಪರಿಣಾಮಕಾರಿಯಾಗಿದೆ. ಏಕೆಂದರೆ, ಕೊರೊನೊ ವೈರಸ್, ಮೂಗಿನ ಪ್ರವೇಶಿಸುವ ಬಿಂದುವಾಗಿರುವ ಶ್ವಾಸನಾಳದ ಲೋಳೆಪೊರೆಯ ಒಳಪದರವನ್ನು ಟಾರ್ಗೆಟ್ ಮಾಡುತ್ತದೆ. ಇದರಿಂದಾಗಿ ಈ ಇಂಟ್ರಾನಾಸಲ್ ಹೆಚ್ಚು ಪರಿಣಾಮ ಬೀರಬಹುದು ಎಂದು ಹೇಳಲಾಗುತ್ತದೆ. ಈ ಒಳಪದರವನ್ನು ರಕ್ಷಿಸುವ ಮೂಲಕ ವ್ಯಾಕ್ಸೀನ್, ಸೋಂಕನ್ನು ತಡೆ ಗಟ್ಟಬಹುದು ಮತ್ತು ಶ್ವಾಸಕೋಶದ ಮೇಲ್ಭಾಗ ಹಾಗೂ ಕೆಳ ಭಾಗಕ್ಕೆ ಸೋಂಕು ಪ್ರಸರಣವಾಗುವುದನ್ನು ನಿಯಂತ್ರಿಸಬಹುದಾಗಿದೆ. ಇನ್‌ಕೊವಾಕ್ ಅನ್ನು ಫಸ್ಟ್ ಬೂಸ್ಟರ್ ಶಾಟ್ ಆಗಿ ಶಿಫಾರಸು ಮಾಡಲಾಗುತ್ತದೆ. 28 ದಿನಗಳ ಅಂತರದಲ್ಲಿ ಒಬ್ಬ ವ್ಯಕ್ತಿಗೆ ಎಱಡು ಬಾರಿ ಈ ಲಸಿಕೆಯನ್ನು ನೀಡಬಹುದು.