Site icon Vistara News

NEET Aspirant Self Harming: ನೀಟ್‌ ಅಭ್ಯರ್ಥಿ ಆತ್ಮಹತ್ಯೆ ಬಳಿಕ ಆತನ ತಂದೆಯೂ ನೇಣಿಗೆ ಶರಣು; ಪರೀಕ್ಷೆ ರದ್ದು ಎಂದ ಸಿಎಂ ಸ್ಟಾಲಿನ್

NEET Aspirant Jagadeeswaran Suicide Case

NEET Aspirant dies by suicide In Tamil Nadu, father too dies

ಚೆನ್ನೈ: ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸುವ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯಲ್ಲಿ (NEET) ತೇರ್ಗಡೆ ಹೊಂದದ ಕಾರಣ ನೀಟ್‌ ಅಭ್ಯರ್ಥಿ ಜಗದೀಶ್ವರನ್‌ (19) ಆತ್ಮಹತ್ಯೆ (NEET Aspirant Self Harming) ಮಾಡಿಕೊಂಡ ಪ್ರಕರಣ ದೇಶಾದ್ಯಂತ ಸುದ್ದಿಯಾಗಿದೆ. ಜಗದೀಶ್ವರನ್‌ (Jagadeeswaran) ಆತ್ಮಹತ್ಯೆ ಮಾಡಿಕೊಂಡ ಆಘಾತದಿಂದ ಹೊರಬರಲಾಗದ ಆತನ ತಂದೆ ಸೆಲ್ವಶೇಖರ್‌ (Selvasekar) ಕೂಡ ಮೃತಪಟ್ಟಿದ್ದು, ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ.

ಚೆನ್ನೈನ ಕ್ರೋಮ್‌ಪೇಟ್‌ನಲ್ಲಿರುವ ನಿವಾಸದಲ್ಲಿ ನೀಟ್‌ ಅಭ್ಯರ್ಥಿ ಜಗದೀಶ್ವರನ್‌ ಆಗಸ್ಟ್‌ 12ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನೀಟ್‌ ಪಾಸಾಗಿ, ವೈದ್ಯನಾಗಬೇಕು ಎಂಬ ಕನಸು ಕಾಣುತ್ತಿದ್ದ ಜಗದೀಶ್ವರನ್‌, ಎರಡು ಬಾರಿ ಅರ್ಹತಾ ಪರೀಕ್ಷೆ ಬರೆದರೂ ತೇರ್ಗಡೆ ಹೊಂದಿರಲಿಲ್ಲ. ಇದರಿಂದ ಖಿನ್ನತೆಗೊಳಗಾದ ಆತ ಆತ್ಮಹತ್ಯೆ ಮಾಡಿದ್ದಾನೆ.

ಭುಜದೆತ್ತರಕ್ಕೆ ಬೆಳೆದ ಮಗ ಆತ್ಮಹತ್ಯೆ ಮಾಡಿಕೊಂಡ ಕಾರಣ ಸೆಲ್ವಶೇಖರ್‌ ಅವರು ತೀವ್ರವಾಗಿ ಆಘಾತಕ್ಕೀಡಾಗಿದ್ದರು. ಅವರಿಗೆ ಎದೆ ನೋವು ಕೂಡ ಕಾಣಿಸಿಕೊಂಡಿತ್ತು. ಆದರೆ, ಸೋಮವಾರ (ಆಗಸ್ಟ್‌ 14) ಬೆಳಗ್ಗೆ ಅವರ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸೆಲ್ವಶೇಖರ್‌ ಶವ ಪತ್ತೆಯಾಗಿದೆ. ಮಗನ ಸಾವಿನಿಂದ ಉಂಟಾದ ದುಃಖದಲ್ಲಿ ಇವರು ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಕಾಶ್ಮೀರಿ ಕೂಲಿ ಕಾರ್ಮಿಕ ಉಮರ್‌ ಅಹ್ಮದ್ ನೀಟ್‌ ಪಾಸಾದ, ಕಣಿವೆ ಈಗ ಪ್ರತಿಭೆಗಳ ಬಣವೆ‌

ನೀಟ್‌ ರದ್ದು ಎಂದ ಸ್ಟಾಲಿನ್‌

ರಾಜ್ಯದಲ್ಲಿ ನೀಟ್‌ ಪಾಸಾಗದೆ ಜಗದೀಶ್ವರನ್‌ ಮಾತ್ರವಲ್ಲ, ಹಲವು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಹಾಗಾಗಿ, ತಮಿಳುನಾಡಿನಲ್ಲಿ ನೀಟ್‌ ರದ್ದುಪಡಿಸಲಾಗುವುದು ಎಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಘೋಷಿಸಿದ್ದಾರೆ.

“ನೀಟ್‌ ಅಭ್ಯರ್ಥಿ ಜಗದೀಶ್ವರನ್‌, ಅವರ ತಂದೆ ಸೆಲ್ವಶೇಖರ್‌ ಅವರು ಮೃತಪಟ್ಟ ಸುದ್ದಿ ತಿಳಿದು ಮನಸ್ಸಿಗೆ ಖೇದವಾಗಿದೆ. ಅವರನ್ನು ಹೇಗೆ ಸಮಾಧಾನಪಡಿಸಬೇಕೋ ಗೊತ್ತಾಗುತ್ತಿಲ್ಲ. ವಿದ್ಯಾರ್ಥಿಗಳ ಗುರಿಗೆ ತೊಡಕಾಗಿರುವ ನೀಟ್‌ಅನ್ನು ರಾಜ್ಯದಲ್ಲಿ ರದ್ದುಪಡಿಸಲಾಗುವುದು. ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳಬಾರದು” ಎಂದು ಎಂ.ಕೆ.ಸ್ಟಾಲಿನೆ ತಿಳಿಸಿದರು.

Exit mobile version