ನವದೆಹಲಿ: ವೈದ್ಯಕೀಯ ಕೋರ್ಸ್‌ಗಳ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET Result)ಯ ಫಲಿತಾಂಶ ಪ್ರಕಟವಾಗಿದ್ದು, ಕರ್ನಾಟಕದ ಎನ್.ಜಿ. ರಿಷಿಕೇಶ್ ಅಖಿಲ ಭಾರತ ಮಟ್ಟದಲ್ಲಿ (AIR) ಮೂರನೇ ರ‍್ಯಾಂಕ್ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ. ರಾಜಸ್ಥಾನದ ತನಿಷ್ಕಾ ಮೊದಲ ಹಾಗೂ ದೆಹಲಿಯ ಆಶಿಶ್ ಬಾತ್ರಾ ವತ್ಸ ದ್ವಿತೀಯ ರ‍್ಯಾಂಕ್ ಪಡೆದಿದ್ದಾರೆ.
ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶಕ್ಕಾಗಿ ನೀಟ್ ನಡೆದಿದ್ದು, ಒಟ್ಟು 17,64,571 ಅಭ್ಯರ್ಥಿಗಳು ಪರೀಕ್ಷೆಗೆ ಬರೆದಿದ್ದರು. ಇವರಲ್ಲಿ 9,93,069 ಅಭ್ಯರ್ಥಿಗಳು ತೇರ್ಗಡೆ ಹೊಂದಿದ್ದಾರೆ. ರಾಜಸ್ಥಾನದ ತನಿಷ್ಕಾ, ದೆಹಲಿಯ ಆಶಿಶ್ ಬಾತ್ರಾ ವತ್ಸ ಹಾಗೂ ಕರ್ನಾಟಕದವರೇ ಆದ ಎನ್.ಜಿ.ನಾಗಭೂಷಣ್ ಮತ್ತು ರುಚಾ ಪವಾಶೆ ಅವರು ಗರಿಷ್ಠ 720 ಅಂಕಗಳಿಗೆ 715 ಅಂಕ ಪಡೆದ ಕಾರಣ ಟೈ ಬ್ರೇಕರ್ ಮೂಲಕ ಮೊದಲ ಮೂರು ಸ್ಥಾನಗಳನ್ನು ಘೋಷಿಸಲಾಗಿದೆ. ಹಾಗಾಗಿ, ರುಚಾ ಪವಾಶೆ ಅವರು ನಾಲ್ಕನೇ ರ‍್ಯಾಂಕ್ ಎಂದು ಘೋಷಿಸಲಾಯಿತು.