ನವ ದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (National Testing Agency-NTA ) ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ಪದವಿಪೂರ್ವ (Nationla Eligibility- Cum Entrance Test Undergraduate- NEET UG 2023) ಫಲಿತಾಂಶವನ್ನು ಮಂಗಳವಾರ ಸಂಜೆ ಪ್ರಕಟಿಸಿದೆ. ಅಂಕಪಟ್ಟಿಯಗಳು ಶೀಘ್ರದಲ್ಲೇ neet.nta.nic.in ಮತ್ತು ntaresults.nic.in ಲಭ್ಯವಾಗಲಿದೆ. ಈ ಬಾರಿ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ತಮಿಳುನಾಡಿನ ಪ್ರಭಂಜನ್ ಜೆ ಮತ್ತು ಆಂಧ್ರಪ್ರದೇಶದ ಬೋರಾ ವರುಣ್ ಚಕ್ರವರ್ತಿ 720 ಕ್ಕೆ 720 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.
ಎನ್ಟಿಎ ನೀಟ್ ಫಲಿತಾಂಶಗಳ ಜೊತೆಗೆ ಅಖಿಲ ಭಾರತ ಟಾಪರ್ಗಳ ಹೆಸರುಗಳು ಮತ್ತು ಅವರು ಗಳಿಸಿದ ಅಂಕಗಳು ಮತ್ತು ವರ್ಗವಾರು ಕಟ್ ಆಫ್ ಅಂಕಗಳನ್ನು ಪ್ರಕಟಿಸಿದೆ. ವೈದ್ಯಕೀಯ ಪ್ರವೇಶ ಪರೀಕ್ಷೆಯನ್ನು ಮಣಿಪುರ ಹೊರತುಪಡಿಸಿ ಬೇರೆಲ್ಲ ರಾಜ್ಯಗಳಲ್ಲಿ ಮೇ 7, 2023ರಂದು ನಡೆಸಲಾಗಿತ್ತು. ಮಣಿಪುರದ 8,753 ಅಭ್ಯರ್ಥಿಗಳಿಗೆ ಜೂನ್ 6 ರಂದು ರಾಜ್ಯ ರಾಜಧಾನಿ ಇಂಫಾಲ್ ಸೇರಿದಂತೆ 11 ನಗರಗಳಲ್ಲಿ ಪರೀಕ್ಷೆ ನಡೆಯಲಿದೆ.
ಮೇ 7 ಮತ್ತು ಜೂನ್ 6 ರ ನೀಟ್ ಪರೀಕ್ಷೆಗಳ ತಾತ್ಕಾಲಿಕ ಕೀ ಉತ್ತರಗಳನ್ನು ಅಭ್ಯರ್ಥಿಗಳ ರೆಕಾರ್ಡ್ ಮಾಡಿದ ಪ್ರತಿಕ್ರಿಯೆಗಳು ಮತ್ತು ಒಎಂಆರ್ ಪ್ರತಿಗಳೊಂದಿಗೆ ಬಿಡುಗಡೆ ಮಾಡಲಾಗಿದೆ. ಅಂತಿಮ ಕೀ ಉತ್ತರಗಳನ್ನು ಫಲಿತಾಂಶಗಳೊಂದಿಗೆ ಅಥವಾ ನಂತರ ಪ್ರಕಟಿಸಲಾಗುತ್ತದೆ.
ಭಾರತದ ಹೊರಗಿನ 14 ನಗರಗಳು ಸೇರಿದಂತೆ ಭಾರತದ 499 ನಗರಗಳಲ್ಲಿರುವ 4097 ವಿವಿಧ ಕೇಂದ್ರಗಳಲ್ಲಿ 2087462 ಅಭ್ಯರ್ಥಿಗಳಿಗೆ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ಯುಜಿ) ನಡೆಸಲಾಗಿತ್ತು.
ನೀಟ್ ಯುಜಿಯ ಕಟ್-ಆಫ್ ಅಂಕಗಳು ಎಲ್ಲಾ ವಿಭಾಗಗಳಲ್ಲಿ ಹೆಚ್ಚಾಗಿದೆ. ಇಡಬ್ಲ್ಯೂಎಸ್: 720-137 ಅಂಕಗಳು (50 ನೇ ಪ್ರತಿಶತ), ಒಬಿಸಿ, ಎಸ್ಸಿ, ಎಸ್ಟಿ: 136-107 ಅಂಕಗಳು (40ನೇ ಪರ್ಸೆಂಟೈಲ್) UR/EWS & PH: 136-121 (45 ನೇ ಪ್ರತಿಶತ) OBE/SC+PH: 120-107 (40ನೇ ಪ್ರತಿಶತ) ST+PH: 120-108 (40ನೇ ಪ್ರತಿಶತ).
ಇಬ್ಬರಿಗೆ 720ಕ್ಕೆ 720 ಅಂಕ
ನೀಟ್ ಯುಜಿ 2023 ರಲ್ಲಿ ಪರಿಪೂರ್ಣ ಅಂಕ ಪಡೆದ ಇಬ್ಬರು ವಿದ್ಯಾರ್ಥಿಗಳು ಅಗ್ರಸ್ಥಾನದಲ್ಲಿದ್ದಾರೆ. ತಮಿಳುನಾಡಿನ ಪ್ರಭಂಜನ್ ಜೆ ಮತ್ತು ಆಂಧ್ರಪ್ರದೇಶದ ಬೋರಾ ವರುಣ್ ಚಕ್ರವರ್ತಿ ನೀಟ್ 2023ರ ಅಖಿಲ ಭಾರತ ಟಾಪರ್ಗಳು. ಅವರಿಬ್ಬರೂ 720 ಕ್ಕೆ 720 ಅಂಕಗಳನ್ನು ( ಶೇಕಡಾ 99.999901 )ಗಳಿಸಿದ್ದಾರೆ.
2087462 ಅಭ್ಯರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದರೆ, 2038596 ಅಭ್ಯರ್ಥಿಗಳು ಹಾಜರಾಗಿದ್ದರು. ಅರ್ಹ ಅಭ್ಯರ್ಥಿಗಳು ಸಂಖ್ಯೆ 1145976.
ಅಗ್ರ 20 ರ್ಯಾಂಕ್ ಪಡೆದವರ ಪಟ್ಟಿ ಇಲ್ಲಿದೆ
ರ್ಯಾಂಕ್ 1: ಪ್ರಬಂಜನ್ ಜೆ, ಬೋರಾ ವರುಣ್ ಚಕ್ರವರ್ತಿ (720 ಅಂಕಗಳು)
ರ್ಯಾಂಕ್ 3: ಕೌಸ್ತವ್ ಬೌರಿ (716)
4ನೇ ರ್ಯಾಂಕ್: ಪ್ರಂಜಲ್ ಅಗರ್ವಾಲ್ (715)
5ನೇ ರ್ಯಾಂಕ್: ಧ್ರುವ್ ಅಡ್ವಾಣಿ (715)
6ನೇ ರ್ಯಾಂಕ್: ಸೂರ್ಯ ಸಿದ್ಧಾರ್ಥ್ ಎನ್ (715)
7ನೇ ರ್ಯಾಂಕ್: ಶ್ರೀನಿಕೇತ್ ರವಿ (715)
8ನೇ ರ್ಯಾಂಕ್: ಸ್ವಯಂ ಶಕ್ತಿ ತ್ರಿಪಾಠಿ (715)
ರ್ಯಾಂಕ್ 9: ವರುಣ್ ಎಸ್ (715)
10ನೇ ರ್ಯಾಂಕ್: ಪಾರ್ಥ್ ಖಂಡೇಲ್ವಾಲ್ (715)
11ನೇ ರ್ಯಾಂಕ್: ಆಶಿಕಾ ಅಗರ್ವಾಲ್ (715)
12ನೇ ರ್ಯಾಂಕ್: ಸಯಾನ್ ಪ್ರಧಾನ್ (715)
13ನೇ ರ್ಯಾಂಕ್: ಹರ್ಷಿತ್ ಬನ್ಸಾಲ್ (715)
14ನೇ ರ್ಯಾಂಕ್: ಶಶಾಂಕ್ ಕುಮಾರ್ (715)
15ನೇ ರ್ಯಾಂಕ್: ಕಾಂಚನಿ ಗೇಯಂತ್ ರಘು ರಾಮ್ ರೆಡ್ಡಿ (715)
16ನೇ ರ್ಯಾಂಕ್: ಶುಭಮ್ ಬನ್ಸಾಲ್ (715)
17ನೇ ರ್ಯಾಂಕ್: ಭಾಸ್ಕರ್ ಕುಮಾರ್ (715)
18ನೇ ರ್ಯಾಂಕ್: ದೇವ್ ಭಾಟಿಯಾ (715)
19ನೇ ರ್ಯಾಂಕ್: ಅರ್ನಬ್ ಪತಿ (715)
20ನೇ ರ್ಯಾಂಕ್: ಶಶಾಂಕ್ ಸಿನ್ಹಾ (715)
ಅಗ್ರ 10 ಸ್ಥಾನ ಪಡೆದ ಮಹಿಳಾ ಅಭ್ಯರ್ಥಿಗಳು
- ಪ್ರಂಜಲ್ ಅಗರ್ವಾಲ್
- ಆಶಿಕಾ ಅಗರ್ವಾಲ್
- ಆರ್ಯ ಆರ್ ಎಸ್
- ಮಿಮಾನ್ಶಾ ಮೌನ್
- ಸುಮೇಘಾ ಸಿನ್ಹಾ
- ಕಾನಿ ಯಸಶ್ರೀ
- ಬರೀರಾ ಅಲಿ
- ರಿದ್ಧಿ ವಾಜರಿಂಗ್ಕರ್
- ಕವಲಕುಂಟ್ಲಾ ಪ್ರಣತಿ ರೆಡ್ಡಿ
- ಜಾಗೃತಿ ಬೊಡೆಡ್ಡುಲಾ
ಅಗ್ರ 10 ಸ್ಥಾನ ಪಡೆದ ಪುರುಷ ಅಭ್ಯರ್ಥಿಗಳು
- ಪ್ರಬಂಜನ್ ಜೆ.
- ಬೋರಾ ವರುಣ್ ಚಕ್ರವರ್ತಿ
- ಕೌಸ್ತವ್ ಬೌರಿ
- ಧ್ರುವ್ ಅಡ್ವಾಣಿ
- ಸೂರ್ಯ ಸಿದ್ಧಾರ್ಥ್ ಎನ್
- ಶ್ರೀನಿಕೇತ್ ರವಿ
- ಸ್ವಯಂ ಶಕ್ತಿ ತ್ರಿಪಾಠಿ
- ವರುಣ್ ಎಸ್
- ಪಾರ್ಥ್ ಖಂಡೇಲ್ವಾಲ್
- ಸಾಯನ್ ಪ್ರಧಾನ್