Site icon Vistara News

Narendra Modi : ಭಾರತೀಯರು ಸೋಮಾರಿಗಳೆಂದು ಅವಮಾನಿಸಿದ್ದ ನೆಹರೂ, ಇಂದಿರಾ: ಮೋದಿ ಆಕ್ರೋಶ

Narendra modi

Parliament Budget Session: Government extends session by one day till Feb 10

ನವ ದೆಹಲಿ: ಭಾರತೀಯರು ಸೋಮಾರಿಗಳು. ಕಷ್ಟ ಬಂದಾಗ ಪಲಾಯನ ಮಾಡುತ್ತಾರೆ ಎಂಬುದಾಗಿ ಮಾಜಿ ಪ್ರಧಾನಿಗಳಾದ ಜವಾಹರ್​ ಲಾಲ್ ನೆಹರೂ ಹಾಗೂ ಇಂದಿರಾ ಗಾಂಧಿ ದೇಶದ ಜನರಿಗೆ ಅಪಮಾನ ಮಾಡಿದ್ದರು. ಈ ಮೂಲಕ ಕಾಂಗ್ರೆಸ್ ಪ್ರಧಾನಿಗಳು ಜನರ ನೈತಿಕ ಸ್ಥೈರ್ಯ ಕುಗ್ಗಿಸುವ ಕೆಲಸವನ್ನು ನಿರಂತರವಾಗಿ ಮಾಡಿದ್ದರು ಎಂಬುದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಸಂಸತ್​ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಜೆಟ್​ ಅಧಿವೇಶನದ (budget session) ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಉತ್ತರ ನೀಡಿದ ಅವರು ಕಾಂಗ್ರೆಸ್​ ನೇತೃತ್ವದ ಸರ್ಕಾರಗಳ ಆಡಳಿತ ವೈಖರಿಯನ್ನು ಕಟುವಾಗಿ ಟೀಕಿಸಿದರು.

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಆಗಸ್ಟ್ 15ರ ಸ್ವಾತಂತ್ರ್ಯೋತ್ಸವ ಭಾಷಣವನ್ನು ಕೆಂಪುಕೋಟೆಯಲ್ಲಿ ಮಾಡುವಾಗ ದೇಶಕ್ಕೆ ಅವಮಾನ ಮಾಡಿದ್ದರು. ಕಷ್ಟದ ಹಾಗೂ ಕಠಿಣ ಸಂದರ್ಭಗಳಲ್ಲಿ ಇಡೀ ದೇಶ ಸೋಲು ಒಪ್ಪಿಕೊಳ್ಳುತ್ತದೆ ಎಂದಿದ್ದರು. ಆದರೆ, ಇಂದಿರಾ ಗಾಂಧಿ ಅವರು ದೇಶದ ಜನರ ಸಾಮರ್ಥ್ಯವನ್ನು ಸರಿಯಾಗಿ ಲೆಕ್ಕ ಹಾಕಿಯೇ ಇರಲಿಲ್ಲ. ಅದುವೇ ಅವರ ವೈಫಲ್ಯವಾಗಿತ್ತು ಎಂದು ಮೋದಿ ಹೇಳಿದರು.

ಕಾಂಗ್ರೆಸ್ ಪಕ್ಷ ತಮ್ಮ ಸಾಮರ್ಥ್ಯವನ್ನು ಮಾತ್ರ ಸರಿಯಾಗಿ ಲೆಕ್ಕ ಹಾಕಿದ್ದಾರೆ. ಆದರೆ, ಪ್ರಜೆಗಳ ಸಾಮರ್ಥ್ಯವನ್ನು ಅಂದಾಜಿಸಿರಲಿಲ್ಲ. ಅದೇ ರೀತಿಯ ಆಲೋಚನೆ ಇಂದೂ ಅವರ ಪಕ್ಷದಲ್ಲಿದೆ. ಅದೇ ರೀತಿ ಮೊದಲ ಪ್ರಧಾನಿ ಜವಾಹರ್​ ಲಾಲ್ ನೆಹರೂ ಅವರು ಬೇರೆ ಬೇರೆ ದೇಶಗಳನ್ನು ಹಾಡಿ ಹೊಗಳುತ್ತಿದ್ದರು ಎಂದು ಮೋದಿ ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ : Narendra Modi: ಭಾರತದ ವೈಭವ ಈಗ ಎದ್ದು ಕಾಣುತ್ತಿದೆ; ಲೋಕಸಭೆಯಲ್ಲಿ ಮೋದಿ ಹೇಳಿಕೆ

ಮಾಜಿ ಪ್ರಧಾನಿ ನೆಹರು ಚೀನಾ, ಆಮೆರಿಕನ್ನರಂತೆ ಭಾರತೀಯರು ಕಷ್ಟಪಟ್ಟು ಕೆಲಸ ಮಾಡಲ್ಲ ಎಂಬ ಹೇಳಿಕೆ ನೀಡಿದ್ದರು. ಭಾರತೀಯರು ಕಷ್ಟ ಬಂದಾಗ ಓಡಿ ಹೋಗುತ್ತಾರೆ ಎಂದು ಅವಮಾನ ಮಾಡಿದ್ದರು. ದೇಶದ ಪ್ರಜೆಗಳಿಗೆ ಅವಮಾನ ಮಾಡುವುದು ಕಾಂಗ್ರೆಸ್‌ ಸಂಸ್ಕೃತಿ ಎಂದು ಅವರು ಹೇಳಿದರು.

ಇಂಡಿಯಾ ಬ್ಲಾಕ್​ ಹಳಿ ತಪ್ಪಿದೆ

ಇಂಡಿಯಾ ಮೈತ್ರಿಕೂಟದ ಅಲೈನ್‌ಮೆಂಟ್ ಈಗ ಹಳಿ ತಪ್ಪಿದೆ. ಎಲ್ಲರೂ ಬೇರೆ ಬೇರೆ ಕಡೆ ಮುಖ ಮಾಡಿದ್ದಾರೆ. ಯಾರಿಗೂ ಪರಸ್ಪರ ವಿಶ್ವಾಸ ಇಲ್ಲ. ಒಬ್ಬರಿಗೆ ಮತ್ತೊಬ್ಬರು ವಿಶ್ವಾಸ ವ್ಯಕ್ತಪಡಿಸುವ ಗುಣ ಅವರ ರಕ್ತದಲ್ಲಿ ಇಲ್ಲ. ವಿಶ್ವಾಸದ ಗುಣ ಅವರಲ್ಲೇ ಇಲ್ಲವೆಂದಅದರೆ ದೇಶದ ಮೇಲೆ ಹೇಗೆ ವಿಶ್ವಾಸ ಇಡುತ್ತಾರೆ ಎಂದು ಮೋದಿ ಪ್ರಶ್ನಿಸಿದರು.

ನಮಗೆ ದೇಶದ ಜನರ ಸಾಮರ್ಥ್ಯದ ಮೇಲೆ ಭರವಸೆ ಇದೆ. ದೇಶದ ಜನರ ಮೇಲೆ ಭರವಸೆ ಇದೆ. ಅವರು ಅಭಿವೃದ್ಧಿಗೆ ಸಹಕರಿಸುತ್ತಾರೆ. ನಮ್ಮ ಸರ್ಕಾರದ ಮೊದಲ ಅವಧಿ ಯುಪಿಎ ಸರ್ಕಾರದ ಅವಧಿಯ ತಪ್ಪುಗಳನ್ನು ಸರಿಪಡಿಸುವಲ್ಲಿ ಸಮಯ ಕಳೆದಿದೆ. ಎರಡನೇ ಅವಧಿಯಲ್ಲಿ ಸಾಕಷ್ಟು ಪ್ರಗತಿ ಸಾಧಿಸಲಾಗಿದೆ. ಮುಂದೆ ಭಾರತ ದೊಡ್ಡ ಶಕ್ತಿಯಾಗಲಿದೆ ಎಂದು ಹೇಳಿದರು.

ಮುಂದಿನ ಬಾರಿ ಪ್ರಚಂಡ ಬಹುಮತ

ಮುಂದಿನ ಲೋಕಸಭಾ ಚುನಾವಣೆ ಬಳಿಕ ನಮ್ಮ (Narendra Modi) ಸರ್ಕಾರವೇ ಅಧಿಕಾರಕ್ಕೆ ಬರುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕೇಂದ್ರದಲ್ಲಿ ಮತ್ತೊಮ್ಮೆ ಮೋದಿ ಸರ್ಕಾರ ಬರಲಿದೆ. ಎನ್‌ಡಿಎ 400ಕ್ಕಿಂತ ಹೆಚ್ಚು ಸೀಟು ಗೆಲ್ಲುವುದು ಖಾತರಿ. ಅದರಲ್ಲಿ ಬಿಜೆಪಿ 370ಕ್ಕಿಂತ ಹೆಚ್ಚು ಸೀಟು ಗೆಲ್ಲುತ್ತದೆ ಎಂದು ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.

ಜನರು ನಮ್ಮನ್ನು ಎರಡನೇ ಅವಧಿಗೆ ಹಿಂದಿಗಿಂತಲೂ ಹೆಚ್ಚು ಸೀಟುಗಳನ್ನು ನೀಡುವ ಮೂಲಕ ಆಯ್ಕೆ ಮಾಡಿದ್ದಾರೆ. ಎರಡನೇ ಭಾರಿ ತೆಗೆದುಕೊಂಡಿರುವ ಸಂಕಲ್ಪ ಹಾಗೂ ವಚನಗಳನ್ನು ಪೂರ್ತಿ ಮಾಡಲಾಗಿದೆ. ಎಲ್ಲ ಕೆಲಸಗಳನ್ನು 2ನೇ ಅವಧಿಯಲ್ಲಿ ಪೂರ್ಣಗೊಳಿಸಿದ್ದೇವೆ. ನಾವೆಲ್ಲ 370ನೇ ವಿಧಿ ರದ್ದಾಗಿದ್ದನ್ನು ನೋಡಿದ್ದೇವೆ. ನಾರಿ ಶಕ್ತಿ ವಂದನಾ ಅಧಿನಿಯಮ ಕಾನೂನು ಮಾಡಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

Exit mobile version