ನವದೆಹಲಿ: ದಿಲ್ಲಿಯಲ್ಲಿರುವ ನೆಹರು ಮೆಮೋರಿಯಲ್ ಮ್ಯೂಸಿಯಂ ಆ್ಯಂಡ್ ಲೈಬ್ರರಿ(Nehru Memorial Museum and Library – NMML) ಅಧಿಕೃತವಾಗಿ 2023 ಆಗಸ್ಟ್ 15, ಮಂಗಳವಾರದಿಂದ ಪ್ರಧಾನ ಮಂತ್ರಿ ಮ್ಯೂಸಿಯಮ್ ಆ್ಯಂಡ್ ಲೈಬ್ರರಿ (Pradhan Mantri Memorial Museum and Library) ಎಂದು ಮರುನಾಮಕಣಗೊಂಡಿದೆ. ಇದು ಭಾರತದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರು (Jawahar Lal Nehru) ಅವರ ಜೀವನ, ಪರಂಪರೆ, ಕಾರ್ಯಗಳನ್ನು ರಕ್ಷಿಸುವ ಹಾಗೂ ಪ್ರದರ್ಶಿಸಲು ಮೀಸಲಾಗಿರುವ ಸಂಸ್ಥೆಯಾಗಿದೆ. ನರೇಂದ್ರ ಮೋದಿ (Narendra Modi Government) ನೇತೃತ್ವದ ಕೇಂದ್ರ ಸರ್ಕಾರವು ಈಗ ನೆಹರು ಹೆಸರು ಬದಲಿಗೆ ಪ್ರಧಾನ ಮಂತ್ರಿ ಹೆಸರನ್ನು ಸೇರಿಸಿದೆ(NMML Renamed).
ನೆಹರು ಮೆಮೋರಿಯಲ್ ಮ್ಯೂಸಿಯಮ್ ಮತ್ತು ಲೈಬ್ರರಿ ಸಂಸ್ಥೆಯ ಹೆಸರನ್ನು ಮರುನಾಮಕರಣಗೊಳಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರವು 2023ರ ಜೂನ್ 17ರಂದು ಕೈಗೊಂಡಿತ್ತು. ಈ ಸಂಸ್ಥೆಯ ಉಪಾಧ್ಯಕ್ಷರೂ ಆಗಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ನಡೆದ ವಿಶೇಷ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿತ್ತು. ನೆಹರು ಮೆಮೋರಿಯಲ್ ಮ್ಯೂಸಿಯಮ್ ಮತ್ತು ಲೈಬ್ರರಿ ಸಂಸ್ಥೆಯ ಹೆಸರನ್ನು ಪ್ರಧಾನ ಮಂತ್ರಿ ಮೆಮೋರಿಯಲ್ ಮ್ಯೂಸಿಯಮ್ ಮತ್ತು ಲೈಬ್ರರಿ ಎಂದು ಮರುನಾಮಕರಣಗೊಳಿಸುವ ಸಂಬಂಧ ಅವಿರೋಧವಾಗಿ ನಿರ್ಣಯ ಕೈಗೊಳ್ಳಲಾಗಿತ್ತು.
ಸಂಸ್ಕೃತಿ ಸಚಿವಾಲಯದ ಮಾಹಿತಿಯ ನಂತರ ನಂತರ ಎನ್‌ಎಂಎಂಎಲ್‌ನ ಕಾರ್ಯಕಾರಿ ಮಂಡಳಿಯು 2016 ರಲ್ಲಿ ತೀನ್ ಮೂರ್ತಿ ಎಸ್ಟೇಟ್‌ನಲ್ಲಿ ಎಲ್ಲಾ ಪ್ರಧಾನ ಮಂತ್ರಿಗಳನ್ನು ಒಳಗೊಂಡ ವಸ್ತುಸಂಗ್ರಹಾಲಯವನ್ನು ಸ್ಥಾಪಿಸಲು ಮಂಜೂರಾತಿ ನೀಡಿರುವ ಮಾಹಿತಿಯನ್ನು ಬಹಿರಂಗೊಳಿಸಿತು. ಈ ಯೋಜನೆಯನ್ನು 2022ರ ಏಪ್ರಿಲ್ 21ರಂದು ಅನಾವರಣ ಮಾಡಲಾಯಿತು. ಪ್ರಸ್ತುತ ಅಗತ್ಯಗಳಿಗೆ ಅನುಗುಣವಾಗಿ ಸಂಸ್ಥೆಯ ಹೆಸರನ್ನು ಬದಲಾಯಿಸುವುದು ಅಗತ್ಯವಾಗಿತ್ತು. ಹೆಸರಿನ ಪರಿಷ್ಕರಣೆಯು ಭಾರತದ ಎಲ್ಲ ಪ್ರಧಾನಿಗಳನ್ನು ಪ್ರತಿನಿಧಿಸುತ್ತದೆ ಮತ್ತು ಇದು ಸಂಸ್ಥೆಯನ್ನು ಪ್ರಜಾಪ್ರಭುತ್ವೀಕರಣಗೊಳಿಸುತ್ತದೆ.
ಈ ಸುದ್ದಿಯನ್ನೂ ಓದಿ: Kerala: ‘ಕೇರಳ’ ರಾಜ್ಯ ಮರುನಾಮಕರಣಕ್ಕೆ ವಿಧಾನಸಭೆ ನಿರ್ಣಯ! ಹೊಸ ಹೆಸರೇನು?
ಎನ್‌ಎಂಎಂಎಲ್ ಕಾರ್ಯಕಾರಿ ಸಮಿತಿಯ ಚೇರ್ಮನ್ ಆಗಿದ್ದ ನೃಪೇಂದ್ರ ಮಿಶ್ರಾ ಅವರು ಪ್ರಧಾನ ಮಂತ್ರಿಗಳ ವಸ್ತುಸಂಗ್ರಹಾಲಯವು ಪ್ರಜಾಪ್ರಭುತ್ವಕ್ಕೆ ರಾಷ್ಟ್ರದ ಸಮರ್ಪಣೆಯನ್ನು ಸಾಕಾರಗೊಳಿಸುತ್ತದೆ ಮತ್ತು ಪರಿಷ್ಕೃತ ಹೆಸರು ಈ ನವೀಕೃತ ಪಾತ್ರವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.
ನೆಹರು ಮೆಮೋರಿಯಲ್ ಮ್ಯೂಸಿಯಮ್ ಮತ್ತು ಲೈಬ್ರರಿಗೆ ಮರುನಾಮಕರಣಗೊಳಿಸುವ ಕೇಂದ್ರ ಸರ್ಕಾರದ ಕ್ರಮವನ್ನು ಕಾಂಗ್ರೆಸ್ ಪಾರ್ಟಿಯು ತೀವ್ರವಾಗಿ ವಿರೋಧಿಸಿದೆ. ನೆಹರ ಪರಂಪರೆಯನ್ನು ಹಾಳು ಮಾಡುವ, ಕೀಳಾಗಿ ಕಾಣುವ ಉದ್ದೇಶವೊಂದೇ ಇದರಲ್ಲಿ ಅಡಗಿದೆ ಎಂದು ಹೇಳಿದೆ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.