ನವದೆಹಲಿ: ಇಂಡಿಯಾ ವರ್ಸಸ್ ಭಾರತ್ (India Vs Bharat) ಚರ್ಚೆ ಉತ್ತುಂಗದಲ್ಲೇ ಇರುವಾಗಲೇ ಬಿಜೆಪಿಗೆ ದೊಡ್ಡ ಹೊಡೆತ ಬಿದ್ದಿದೆ. 2024ರ ಲೋಕಸಭೆ ಚುನಾವಣೆಗೆ (Lok Sabha Election 2024) ಸಂಬಂಧಿಸಿದಂತೆ ಉಂಟಾದ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ನೇತಾಜಿ ಸುಭಾಶ್ ಚಂದ್ರ ಬೋಸ್ (Netaji Sumbash Chandra Bose) ಅವರ ಮೊಮ್ಮಗ ಚಂದ್ರ ಕುಮಾರ್ ಬೋಸ್ (Chandra Kumar Bose) ಅವರು ಭಾರತೀಯ ಜನತಾ ಪಾರ್ಟಿ(BJP)ಯಿಂದ ಹೊರ ಬಂದಿದ್ದು, ಪಕ್ಷಕ್ಕೆ ಬುಧವಾರ ರಾಜೀನಾಮೆ ನೀಡಿದ್ದಾರೆ. ಚಂದ್ರ ಕುಮಾರ್ ಬೋಸ್ ಅವರು 2016ರಲ್ಲಿ ಪಶ್ಚಿಮ ಬಂಗಾಳದ (West Bengal) ಬಿಜೆಪಿ ಘಟಕದ (BJP Vice President) ಉಪಾಧ್ಯಕ್ಷರಾಗಿ ನೇಮಕವಾಗಿದ್ದರು ಮತ್ತು 2020ರಲ್ಲಿ ಅವರನ್ನು ಆ ಹುದ್ದೆಯಿಂದ ಕೈ ಬಿಡಲಾಗಿತ್ತು.
ಬೋಸ್ ಸಹೋದರರಾದ ಸುಭಾಷ್ ಚಂದ್ರ ಬೋಸ್ ಮತ್ತು ಶರತ್ ಚಂದ್ರ ಬೋಸ್ ಅವರ ಸಿದ್ಧಾಂತವನ್ನು ಪ್ರಚಾರ ಮಾಡಲು ಕೇಂದ್ರ ಅಥವಾ ರಾಜ್ಯ ಮಟ್ಟದಲ್ಲಿ ಬಿಜೆಪಿಯಿಂದ ಯಾವುದೇ ಬೆಂಬಲವನ್ನು ದೊರೆಯುತ್ತಿಲ್ಲ ಎಂದು ಚಂದ್ರ ಕುಮಾರ್ ಬೋಸ್ ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: India vs Bharat : ಭಾರತದಲ್ಲಿ ಹಲ್ಲುಜ್ಜಲು ಬೇವಿನ ಕಡ್ಡಿ, ಇಂಡಿಯಾದಲ್ಲಿ ಪೇಸ್ಟ್! ಹೀಗೆಂದ ಇಂಡಿಯಾ ನಾಯಕ ಯಾರು ಗೊತ್ತೇ?
ಬೋಸ್ ಸಹೋದರರ ಉದ್ದೇಶಗಳನ್ನು ಸಾಧಿಸುವ ನನ್ನ ಸ್ವಂತ ಪ್ರಚಾರದ ಪ್ರಯತ್ನಗಳು ಬಿಜೆಪಿಯಿಂದ ಕೇಂದ್ರ ಅಥವಾ ಪಶ್ಚಿಮ ಬಂಗಾಳದ ರಾಜ್ಯ ಮಟ್ಟದಲ್ಲಿ ಯಾವುದೇ ಬೆಂಬಲವನ್ನು ಪಡೆದಿಲ್ಲ. ಜನರನ್ನು ತಲುಪಲು ಬಂಗಾಳದ ಕಾರ್ಯತಂತ್ರವನ್ನು ಸೂಚಿಸುವ ವಿವರವಾದ ಪ್ರಸ್ತಾಪವನ್ನು ನಾನು ಮುಂದಿಟ್ಟಿದ್ದೆ. ಆದರೆ, ಬಂಗಾಳದ ಕುರಿತಂತೆ ನನ್ನ ಪ್ರಸ್ತಾಪಗಳನ್ನು ನಿರ್ಲಕ್ಷಿಸಲಾಗಿದೆ, ಈ ದುರದೃಷ್ಟಕರ ಪರಿಸ್ಥಿತಿಗಳನ್ನು ಗಮನಿಸಿದರೆ, ನಾನು ಬಿಜೆಪಿಯ ಸದಸ್ಯನಾಗಿ ಎಲ್ಲ ಆತ್ಮಸಾಕ್ಷಿಯಲ್ಲೂ ಮುಂದುವರಿಯುವುದು ಅಸಾಧ್ಯವಾಗಿದೆ ಎಂದು ಚಂದ್ರ ಕುಮಾರ್ ಬೋಸ್ ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.
ಇದೇ ವೇಳೆ, ಇಂಡಿಯಾ ವರ್ಸಸ್ ಭಾರತ್ ಕುರಿತು ಪ್ರತಿಕ್ರಿಯಿರುವ ಚಂದ್ರ ಕುಮಾರ್ ಬೋಸ್ ಅವರು ಇದೊಂದು ಚರ್ಚಿಸಬೇಕಾದ ವಿಷಯವೇ ಅಲ್ಲ. ಇಂಡಿಯಾ ಎಂದರ ಭಾರತ ಎಂದು ಸಂವಿಧಾನದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ ಎಂದು ಹೇಳಿದರು.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.