Site icon Vistara News

Delhi Murder: ಸಾಹಿಲ್‌ನನ್ನು ನೋಡೇ ಇಲ್ಲ, ನನ್ನ ಮಗಳಿಗೆ ನ್ಯಾಯ ಕೊಡಿಸಿ; ಹತ್ಯೆಗೀಡಾದ ಹಿಂದು ಬಾಲಕಿ ಪೋಷಕರ ಆಗ್ರಹ

Delhi Murder: Arrested Accused Sahil

Delhi Murder: Friend Deepak claims minor was his girlfriend, promised to marry him

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ 16 ವರ್ಷದ ಹಿಂದು ಬಾಲಕಿ ಸಾಕ್ಷಿಯ ಭೀಕರ (Delhi Murder) ಹತ್ಯೆ ಪ್ರಕರಣದಲ್ಲಿ ಪೊಲೀಸರು ಆರೋಪಿ ಮೊಹಮ್ಮದ್‌ ಸಾಹಿಲ್‌ನನ್ನು ಬಂಧಿಸಿ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಹಾಗೆಯೇ, ಪ್ರಕರಣದ ಹಿಂದೆ ಲವ್‌ ಜಿಹಾದ್‌ ಷಡ್ಯಂತ್ರ ಇರುವ ಕುರಿತು ಕೂಡ ಆರೋಪಗಳು ಕೇಳಿಬರುತ್ತಿವೆ. ಇದರ ಬೆನ್ನಲ್ಲೇ, “ನನ್ನ ಮಗಳ ಸಾವಿಗೆ ನ್ಯಾಯ ಕೊಡಿಸಿ” ಎಂದು ಸಾಕ್ಷಿಯ ಪೋಷಕರು ಆಗ್ರಹಿಸಿದ್ದಾರೆ.

“ನಾವು ಮೊಹಮ್ಮದ್‌ ಸಾಹಿಲ್‌ನ ಮುಖವನ್ನೇ ನೋಡಿಲ್ಲ. ಅವರಿಬ್ಬರ ಮಧ್ಯೆ ಸಂಬಂಧ ಇದೆ ಎಂಬುದು ನಮಗೆ ಗೊತ್ತಿಲ್ಲ. ಆಕೆಯ ಗೆಳತಿಯರು ಕೂಡ ಇದರ ಬಗ್ಗೆ ನಮಗೆ ಗೊತ್ತಿಲ್ಲ. ನನ್ನ ಮಗಳನನ್ನು ಆತ ಭೀಕರವಾಗಿ ಹತ್ಯೆ ಮಾಡಿದ್ದಾನೆ. ಚಾಕು ಇರಿದು, ಕಲ್ಲು ಎತ್ತಿಹಾಕಿ ರಕ್ತದ ಮಡುವಿನಲ್ಲಿ ಆಕೆ ಮಲಗುವಂತೆ ಮಾಡಿದ್ದಾನೆ. ಆತನಿಗೆ ಕಠಿಣ ಶಿಕ್ಷೆಯಾಗಬೇಕು” ಎಂದು ಹತ್ಯೆಗೀಡಾದ ಸಾಕ್ಷಿಯ ತಂದೆ ಆಗ್ರಹಿಸಿದ್ದಾರೆ.

16 ವರ್ಷದ ಹಿಂದು ಬಾಲಕಿಗೆ ಆಕೆಯ ಬಾಯ್‌ಫ್ರೆಂಡ್‌ ಸುಮಾರು 40 ಬಾರಿ ಚಾಕು ಇರಿದು, 20ಕ್ಕೂ ಹೆಚ್ಚು ಬಾರಿ ಕಲ್ಲು ಎತ್ತಿಹಾಕಿ, ಒದ್ದು ಭೀಕರವಾಗಿ ಹತ್ಯೆಗೈದಿದ್ದಾನೆ. ಕ್ರೂರವಾಗಿ ಹತ್ಯೆ ಮಾಡಿರುವ ವಿಡಿಯೊ ಈಗ ವೈರಲ್‌ ಆಗಿದೆ. ಉತ್ತರ ದೆಹಲಿಯ ರೋಹಿಣಿ ಪ್ರದೇಶದಲ್ಲಿ ಭೀಕರ ಘಟನೆ ನಡೆದಿದೆ. 16 ವರ್ಷದ ಸಾಕ್ಷಿ ಹಾಗೂ 20 ವರ್ಷದ ಸಾಹಿಲ್‌ ಪ್ರೀತಿಸುತ್ತಿದ್ದರು. ಆದರೆ, ಇತ್ತೀಚೆಗೆ ಇಬ್ಬರ ಮಧ್ಯೆ ಜಗಳವಾಗಿತ್ತು. ಭಾನುವಾರ (May 28) ಸಾಕ್ಷಿಯು ಬರ್ತ್‌ಡೇ ಪಾರ್ಟಿಗೆಂದು ಗೆಳತಿಯ ಮನೆಗೆ ತೆರಳುತ್ತಿದ್ದಳು. ಇದೇ ವೇಳೆ ಸಾಕ್ಷಿಯನ್ನು ಅಡ್ಡಹಾಕಿದ ಸಾಹಿಲ್‌ ಭೀಕರವಾಗಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಇದನ್ನೂ ಓದಿ: Delhi Murder: ಹಿಂದು ಬಾಲಕಿಗೆ 40 ಬಾರಿ ಇರಿದು, 20 ಸಲ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಂದ ಮುಸ್ಲಿಂ ಯುವಕ

ವಿಡಿಯೊ ವೈರಲ್‌ ಆಗಿ ಜನರಿಂದ ಆಕ್ರೋಶ ವ್ಯಕ್ತವಾಗುತ್ತಲೇ ಪೊಲೀಸರು ತಂಡವನ್ನು ರಚಿಸಿ, ಆರೋಪಿ ಸಾಹಿಲ್‌ನನ್ನು ಬಂಧಿಸಿದ್ದಾರೆ. ಪ್ರಕರಣ ಬೆಳಕಿಗೆ ಬರುತ್ತಲೇ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲಿವಾಲ್‌ ಅವರು ದೆಹಲಿ ಪೊಲೀಸರಿಗೆ ನೋಟಿಸ್‌ ನೀಡಿದ್ದಾರೆ. ಇದಾದ ಬಳಿಕ ಸಾಹಿಲ್‌ನನ್ನು ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಬಂಧಿಸಲಾಗಿದೆ.

Exit mobile version