ನವದೆಹಲಿ: ನೂತನ ಕ್ರಿಮಿನಲ್ ಕಾನೂನು ವಿಧೇಯಕಗಳು (new criminal law bills) ಭಾರತದಲ್ಲಿ ಭಯೋತ್ಪಾದಕ ಕೃತ್ಯಗಳು ಮತ್ತು ಇತರ ಅಪರಾಧಗಳಿಗಾಗಿ “ಇತರ ದೇಶಗಳಲ್ಲಿ ತಲೆಮರೆಸಿಕೊಂಡಿರುವ”ವರ ಗೈರುಹಾಜರಿಯಲ್ಲಿ ವಿಚಾರಣೆಗೆ ಅವಕಾಶವನ್ನು (trial in absentia) ಒದಗಿಸಲಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Union Minister Amit Shah) ಸೋಮವಾರ ಹೇಳಿದ್ದಾರೆ(Parliament Session).
ಗೈರುಹಾಜರಿಯಲ್ಲಿ ವಿಚಾರಣೆ ನಡೆಸುವ ನಿಬಂಧನೆಗಳಿಗೆ ಹಲವರು ಆಕ್ಷೇಪಣೆಗಳನ್ನು ಹೊಂದಿರಬಹುದು. ಅಪರಾಧ ಮಾಡಿ ದೇಶ ಬಿಟ್ಟು ಓಡಿ ಹೋದವನಿಗೆ ಯಾವ ಅನುಕಂಪ ಇರಲು ಸಾಧ್ಯ? ಅದು ಮುಂಬೈ ಬಾಂಬ್ ಸ್ಫೋಟವಾಗಲಿ ಅಥವಾ ಇನ್ನಾವುದೇ ಭಯೋತ್ಪಾದನಾ ಕೃತ್ಯವಾಗಲಿ. ಅವರು ಅಪರಾಧಗಳನ್ನು ಮಾಡುತ್ತಾರೆ ಮತ್ತು ಪಾಕಿಸ್ತಾನ ಅಥವಾ ಇತರ ದೇಶಗಳಲ್ಲಿ ಆಶ್ರಯ ಪಡೆಯುತ್ತಾರೆ. ಅವರನ್ನು ಶಿಕ್ಷಿಸಬೇಕೇ ಅಥವಾ ಬೇಡವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ ಎಂದು ಮೂರು ಅಪರಾಧ ವಿಧೇಯಕಗಳ ಮಂಡಿಸಿ ಲೋಕಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ಅಪರಾಧ ಮಾಡಿ ಅವರು ಬೇರೆ ದೇಶಗಳಲ್ಲಿ ತಲೆಮರೆಸಿಕೊಂಡಿದ್ದಾರೆ. ಹಾಗಾಗಿ ಆ ಪ್ರಕರಣಗಳ ವಿಚಾರಣೆಗಳು ನಡೆಯುತ್ತಿಲ್ಲ … ಆರೋಪಿಗಳಿಗೆ ನ್ಯಾಯಾಲಯದ ಮುಂದೆ ಹಾಜರಾಗಲು ತೊಂಬತ್ತು ದಿನಗಳ ಕಾಲಾವಕಾಶ ನೀಡಲಾಗುತ್ತದೆ. ಅವರು ಹಾಗೆ ಮಾಡಲು ವಿಫಲವಾದರೆ, ಅವರ ಪ್ರಾಸಿಕ್ಯೂಷನ್ಗಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಅನ್ನು ನೇಮಿಸಲಾಗುತ್ತದೆ. ಈ ವಿಧಾನ ಕಾನೂನು ಪ್ರಕ್ರಿಯೆಯನ್ನು ಚುರುಕುಗೊಳಿಸುವುದು ಮಾತ್ರವಲ್ಲದೆ ಇತರ ದೇಶದಲ್ಲಿ ಕಾನೂನು ಕ್ರಮ ಜರುಗಿಸಿದಾಗ ಅವರ ಸ್ಥಾನಮಾನವನ್ನು ಬದಲಾಯಿಸುತ್ತದೆ. ಇದು ಅವರನ್ನು ಮರಳಿ ಕರೆತರುವ ಪ್ರಕ್ರಿಯೆಯನ್ನು ತ್ವರಿತಗೊಳಿಸುತ್ತದೆ ಎಂದು ಅಮಿತ್ ಶಾ ಅವರು ಹೇಳಿದರು.
Parliament Session: ಅಪರಾಧ ಸಂಹಿತಾ ವಿಧೇಯಕಗಳಿಗೆ ಲೋಕಸಭೆ ಒಪ್ಪಿಗೆ
ಭಾರತದ ವಸಾಹತುಶಾಹಿ ಯುಗದ ಕ್ರಿಮಿನಲ್ ಕಾನೂನುಗಳನ್ನು (colonial-era criminal laws) ಬದಲಿಸುವ ಮೂರು ನಿರ್ಣಾಯಕ ವಿಧೇಯಕಗಳನ್ನು ಬುಧವಾರ ಲೋಕಸಭೆಯಲ್ಲಿ, (Lok Sabha) ಅಕ್ಷರಶಃ ಪ್ರತಿಪಕ್ಷಗಳ ಅನುಪಸ್ಥಿತಿಯಲ್ಲಿ (opposition MPs) ಅನುಮೋದನೆ ಪಡೆದುಕೊಳ್ಳಲಾಯಿತು. ಭಾರತೀಯ ನ್ಯಾಯ (ಎರಡನೇ) ಸಂಹಿತಾ- 2023, ಭಾರತೀಯ ನಾಗರಿಕ ಸುರಕ್ಷಾ (ಎರಡನೇ) ಸಂಹಿತಾ- 2023 ಮತ್ತು ಭಾರತೀಯ ಸಾಕ್ಷಿ (ಎರಡನೇ) ವಿಧೇಯಕ- 2023 ವಿಧೇಯಕಗಳು, 1860ರ ಭಾರತೀಯ ದಂಡ ಸಂಹಿತೆ, ಕ್ರಿಮಿನಲ್ ಪ್ರೊಸೀಜರ್ ಕೋಡ್ (1973) ಮತ್ತು ಕ್ರಿಮಿನಲ್ ಪ್ರೊಸೀಜರ್ ಕೋಡ್ , ಇಂಡಿಯನ್ ಎವಿಡೆನ್ಸ್ ಆಕ್ಟ್ -1872 ಕಾನೂನುಗಳನ್ನು ಬದಲಿಸಲಿವೆ.
ಸಂಸತ್ ಭದ್ರತಾ ಲೋಪ ಚರ್ಚೆಯ ಹಿನ್ನೆಲೆಯಲ್ಲಿ 143 ಸಂಸತ್ ಸದಸ್ಯರನ್ನು ಅಮಾನತು ಮಾಡಲಾಗಿದೆ. ಹಾಗಾಗಿ, ಯಾವುದೇ ಚರ್ಚೆ ಇಲ್ಲದೇ ಲೋಕಸಭೆಯು ಮಹತ್ವದ ಮೂರು ವಿಧೇಯಕಗಳಿಗೆ ಒಪ್ಪಿಗೆ ನೀಡಿತು. ಬುಧವಾರವೂ ಇಬ್ಬರು ಸಂಸದರನ್ನು ಅಮಾನತು ಮಾಡುವ ಮೂಲಕ ಲೋಕಸಭೆಯಿಂದ ಸಸ್ಪೆಂಡ್ ಆದ ಸಂಸದರ ಸಂಖ್ಯೆಯು 97ಕ್ಕೆ ಏರಿಕೆಯಾಯಿತು. ರಾಜ್ಯಸಭೆಯ ಸದಸ್ಯರೂ ಸೇರಿ ಒಟ್ಟಾರೆ ಸಸ್ಪೆಂಡ್ ಆದವರ ಸಂಖ್ಯೆ 143 ದಾಟಿದೆ.
ಈಗಿನ ದಿನಗಳಿಗೆ ಸಂಪೂರ್ಣವಾಗಿ ಸೂಕ್ತವಲ್ಲದ ವಸಾಹತುಶಾಹಿ ಯುಗದ ನಿಯಮಗಳನ್ನು ಹೊಸ ಕಾನೂನುಗಳು ಬದಲಿಸುತ್ತವೆ ಎಂದು ಹೇಳಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಹೊಸ ವಿಧೇಯಕಗಳು ಭಾರತೀಯತೆ, ಭಾರತೀಯ ಸಂವಿಧಾನ ಮತ್ತು ಜನರ ಯೋಗಕ್ಷೇಮಕ್ಕೆ ಹೆಚಚು ಒತ್ತು ನೀಡುತ್ತವೆ ಎಂದು ತಿಳಿಸಿದರು. ಈ ಹೊಸ ಕ್ರಿಮಿನಲ್ ಕಾನೂನಗಳನ್ನು ಸಂಪೂರ್ಣವಾಗಿ ಓದಿದ್ದೇನೆ ಮತ್ತು ಈ ಕಾನೂನುಗಳು ನಮ್ಮ ಸಂವಿಧಾನದ ಮನೋಭಾವಕ್ಕೆ ಅನುಗಣವಾಗಿವೆ ಎಂದು ಶಾ ಹೇಳಿದರು.
ಈ ಸುದ್ದಿಯನ್ನೂ ಓದಿ: Parliament Session: ಪ್ರತಿಪಕ್ಷಗಳ ಅನುಪಸ್ಥಿತಿಯಲ್ಲೇ ಅಪರಾಧ ಸಂಹಿತಾ ವಿಧೇಯಕಗಳಿಗೆ ಲೋಕಸಭೆ ಒಪ್ಪಿಗೆ
ಕೆಲವು ಬದಲಾವಣೆಗಳನ್ನು ಮಾಡಬೇಕಿದ್ದರಿಂದ ಮುಂಗಾರು ಅಧಿವೇಶನದ ನಂತರ ವಿಧೇಯಕಗಳನ್ನು ಸರ್ಕಾರವು ವಾಪಸ್ ಪಡೆದುಕೊಂಡಿತ್ತು. ಬಳಿಕ ಪರಿಷ್ಕೃತ ವಿಧೇಯಕಗಳನ್ನು ಚಳಿಗಾಲದ ಅಧಿವೇಶನದಲ್ಲಿ ಪರಿಚಯಿಸಲಾಯಿತು. ಹೊಸ ವಿಧೇಯಕಗಳ್ನು ಸ್ಥಾಯಿ ಸಮಿತಿ ಪರಿಶೀಲಿಸಿದ್ದು, ಅಧಿಕೃತ ತಿದ್ದುಪಡಿಗಳನ್ನು ತರುವ ಬದಲು ಮತ್ತೆ ವಿಧೇಯಕಗಳನ್ನು ತರಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಈ ಸುದ್ದಿಯ ಬಗ್ಗೆ ನಿಮ್ಮ ಅನಿಸಿಕೆ ಏನು, ಕಮೆಂಟ್ ಮಾಡಿ ತಿಳಿಸಿ