Site icon Vistara News

New Education Policy: ವರ್ಷಕ್ಕೆ ಎರಡು ಬಾರಿ ಬೋರ್ಡ್ ಪರೀಕ್ಷೆ, 11- 12ನೇ ತರಗತಿಗಳಿಗೆ 2 ಭಾಷೆ

board exams

ಹೊಸದಿಲ್ಲಿ: ಹೊಸ ಶಿಕ್ಷಣ ನೀತಿಗೆ (New Education Policy – NEP) ಅನುಗುಣವಾಗಿ ಶಿಕ್ಷಣ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ಕೆಲವು ಪ್ರಮುಖ ಬದಲಾವಣೆಗಳನ್ನು ಪ್ರಕಟಿಸಿದ್ದು, ವರ್ಷಕ್ಕೆ ಎರಡು ಬಾರಿ ಬೋರ್ಡ್‌ ಪರೀಕ್ಷೆಗಳನ್ನು (board exams) ನಡೆಸಲಾಗುತ್ತದೆ ಎಂದು ಪ್ರಕಟಿಸಿದೆ.

ಹೊಸ ಪಠ್ಯಕ್ರಮದ ಚೌಕಟ್ಟನ್ನು (education curriculum) ಕೇಂದ್ರ ಶಿಕ್ಷಣ ಸಚಿವಾಲಯ ಪ್ರಕಟಿಸಿದೆ. 2024ರ ಶೈಕ್ಷಣಿಕ ಅವಧಿಗೆ ಪಠ್ಯಪುಸ್ತಕಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ವರ್ಷಕ್ಕೆ ಎರಡು ಬಾರಿ ಬೋರ್ಡ್ ಪರೀಕ್ಷೆಗಳನ್ನು ನಡೆಸಲಾಗುವುದು. ಎರಡು ಪರೀಕ್ಷೆಗಳನ್ನು ನಡೆಸಿ, ಗರಿಷ್ಠ ಅಂಕಗಳನ್ನು ಉಳಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗುತ್ತದೆ ಎಂದು ಸಚಿವಾಲಯ ಹೇಳಿದೆ.

11 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳು ಎರಡು ಭಾಷೆಗಳನ್ನು ಅಧ್ಯಯನ ಮಾಡಬೇಕಾಗುತ್ತದೆ ಮತ್ತು ಅವುಗಳಲ್ಲಿ ಕನಿಷ್ಠ ಒಂದು ಭಾರತೀಯ ಭಾಷೆಯಾಗಿರಬೇಕು ಎಂದು ಅದರಲ್ಲಿ ಹೇಳಿದೆ. ಬೋರ್ಡ್ ಪರೀಕ್ಷೆಗಳನ್ನು ಪ್ರಸ್ತುತ ಹೆಚ್ಚಿನ ಒತ್ತಡದ ಅಭ್ಯಾಸಕ್ಕಿಂತ ಸುಲಭ ಮಾಡಲು, ತಿಂಗಳುಗಟ್ಟಲೆ ತರಬೇತಿ ಮತ್ತು ಕಂಠಪಾಠದ ಬದಲಿಗೆ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವನ್ನು ಆಧರಿಸಿರಲಿದೆ.

“ವಿದ್ಯಾರ್ಥಿಗಳು ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಕಷ್ಟು ಸಮಯ ಮತ್ತು ಅವಕಾಶವನ್ನು ಖಚಿತಪಡಿಸಿಕೊಳ್ಳಲು ವರ್ಷಕ್ಕೆ ಕನಿಷ್ಠ ಎರಡು ಬಾರಿ ಬೋರ್ಡ್ ಪರೀಕ್ಷೆಗಳನ್ನು ಮಾಡಲಾಗುತ್ತದೆ. ವಿದ್ಯಾರ್ಥಿಗಳು ನಂತರ ತಾವು ಪರಿಣತಿ ಪಡೆದ ವಿಷಯಗಳಲ್ಲಿ ಬೋರ್ಡ್ ಪರೀಕ್ಷೆಗೆ ಹಾಜರಾಗಬಹುದು. ತಮ್ಮ ಅತ್ಯುತ್ತಮ ಅಂಕಗಳನ್ನು ಉಳಿಸಿಕೊಳ್ಳಬಹುದು” ಎಂದು ಸಚಿವಾಲಯ ತಿಳಿಸಿದೆ.

ನವೀಕರಿಸಿದ ಪಠ್ಯಕ್ರಮದ ಚೌಕಟ್ಟಿನ ಪ್ರಕಾರ, ವಿದ್ಯಾರ್ಥಿಗಳಿಗೆ ಹೆಚ್ಚಿನ ಆಯ್ಕೆಗಳಿವೆ. 11 ಮತ್ತು 12ನೇ ತರಗತಿಗಳಲ್ಲಿ ವಿಷಯಗಳ ಆಯ್ಕೆಯು ಕಲೆ, ವಿಜ್ಞಾನ ಮತ್ತು ವಾಣಿಜ್ಯಗಳಿಗೆ ಸೀಮಿತವಾಗಿರುವುದಿಲ್ಲ.

ಶಾಲಾ ಬೋರ್ಡ್‌ಗಳು ವಿದ್ಯಾರ್ಥಿಗಳ ʼಬೇಡಿಕೆ’ಯ ಪರೀಕ್ಷೆಗಳನ್ನು ಒದಗಿಸುವ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಬೇಕು. ಬೋರ್ಡ್ ಪರೀಕ್ಷೆಗೆ ಅವುಗಳನ್ನು ಅಭಿವೃದ್ಧಿಪಡಿಸುವವರ ಜತೆಗೆ ವಿಶ್ವವಿದ್ಯಾಲಯದ ಪ್ರಮಾಣೀಕೃತ ಕೋರ್ಸ್‌ಗಳನ್ನೂ ಪರಿಗಣಿಸಬೇಕು. ಹೊಸ ಚೌಕಟ್ಟು ತರಗತಿಯಲ್ಲಿ ಪಠ್ಯಪುಸ್ತಕಗಳನ್ನು ʼಕವರ್ ಮಾಡುವʼ ಪ್ರಸ್ತುತ ಅಭ್ಯಾಸವನ್ನು ತಪ್ಪಿಸಲಿದೆ. ಪಠ್ಯಪುಸ್ತಕಗಳ ಬೆಲೆಯನ್ನೂ ತಗ್ಗಿಸಲಿದೆ.

ಇದನ್ನೂ ಓದಿ: New Education Policy: ಕರ್ನಾಟಕಕ್ಕೆ ಪ್ರತ್ಯೇಕ ಶಿಕ್ಷಣ ನೀತಿ: ಎನ್‌ಇಪಿ ತಿರಸ್ಕಾರ ಎಂದ ಡಿಸಿಎಂ ಡಿ.ಕೆ. ಶಿವಕುಮಾರ್‌

Exit mobile version