Site icon Vistara News

New JNU Rules: ಜೆಎನ್‌ಯುನಲ್ಲಿ ಪ್ರತಿಭಟನೆ ಮಾಡಿದರೆ 20 ಸಾವಿರ ರೂ., ದುರ್ವರ್ತನೆಗೆ 50 ಸಾವಿರ ರೂ. ದಂಡ

New JNU Rules: Rs 20,000 fine for taking part in hunger strikes, dharnas at JNU Campus

New JNU Rules

ನವದೆಹಲಿ: ಸಂಶೋಧನೆ, ಅಧ್ಯಯನ ಹಾಗೂ ಅಂಕ ಸಾಧನೆಗಿಂತ ಪ್ರತಿಭಟನೆ, ಗಲಾಟೆ, ಸಾರ್ವಜನಿಕ ಆಸ್ತಿಗೆ ಧ್ವಂಸದಂತಹ ಪ್ರಕರಣಗಳಿಂದಲೇ ಸುದ್ದಿಯಲ್ಲಿರುವ ದೆಹಲಿಯ ಜೆಎನ್‌ಯುನಲ್ಲಿ ಹೊಸ ಕಠಿಣ (New JNU Rules) ನಿಯಮ ಜಾರಿಗೊಳಿಸಲಾಗಿದೆ. “ಜೆಎನ್‌ಯುನಲ್ಲಿ ಉಪವಾಸ ನಿರಶನ, ಧರಣಿ ಅಥವಾ ಪ್ರತಿಭಟನೆ ನಡೆಸಿದರೆ 20 ಸಾವಿರ ರೂ. ದಂಡ ವಿಧಿಸಲಾಗುತ್ತದೆ” ಎಂದು ವಿವಿ ಆಡಳಿತ ಮಂಡಳಿ ಅಧಿಸೂಚನೆ ಹೊರಡಿಸಿದೆ.

ವಿಶ್ವವಿದ್ಯಾಲಯದ ಶಿಸ್ತು ನಿಯಮಗಳನ್ನು ಜೆಎನ್‌ಯು ಕಾರ್ಯಕಾರಿ ಸಮಿತಿಯು ಬದಲಾಯಿಸಿದೆ. ಅದರಂತೆ, “ಪ್ರತಿಭಟನೆ ನಡೆಸದಿರುವ ಜತೆಗೆ ದುರ್ವರ್ತನೆ ತೋರಿದವರಿಗೂ ದಂಡ ವಿಧಿಸಲಾಗುತ್ತದೆ. ವಿಶ್ವವಿದ್ಯಾಲಯದ ಆವರಣದಲ್ಲಿ ದುರ್ವರ್ತನೆ ತೋರಿದರೆ, ಶಿಸ್ತು ನಿಯಮ ಉಲ್ಲಂಘಿಸಿದರೆ 5 ಸಾವಿರ ರೂಪಾಯಿಯಿಂದ 50 ಸಾವಿರ ರೂಪಾಯಿವರೆಗೆ ದಂಡ ವಿಧಿಸಲಾಗುತ್ತದೆ” ಎಂದು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.

ಉಪವಾಸ ನಿರಶನ, ಧರಣಿ, ಗುಂಪು ಸೇರಿ ಘೋಷಣೆ ಕೂಗುವುದು, ಪ್ರವೇಶ ಅಥವಾ ನಿರ್ಗಮನ ದ್ವಾರಗಳನ್ನು ಬಂದ್‌ ಮಾಡಿದರೆ 20 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ವಿವಿ ಆಸ್ತಿಪಾಸ್ತಿಗೆ ಹಾನಿ ಮಾಡುವುದು, ಸಿಬ್ಬಂದಿ ಜತೆ ಅನುಚಿತವಾಗಿ ವರ್ತಿಸುವುದು, ಅವರ ಮೇಲೆ ಹಲ್ಲೆ ಮಾಡುವುದು, ಬೈಯುವುದು, ಬೇರೆ ವಿದ್ಯಾರ್ಥಿಗಳಿಗೆ ಬೈಯುವುದು, ಹಲ್ಲೆ ಮಾಡುವುದು ಸೇರಿ ಯಾವುದೇ ಅಹಿತಕರ ಚಟುವಟಿಕೆಯನ್ನು ಅಶಿಸ್ತು ಎಂಬುದಾಗಿ ಪರಿಗಣಿಸಲಾಗುತ್ತದೆ. ಇದು ಅತಿಯಾದರೆ ವಿವಿಯಿಂದಲೇ ವಜಾಗೊಳಿಸಲಾಗುವುದು ಎಂದು ಎಚ್ಚರಿಸಿದೆ. ಇತ್ತೀಚೆಗೆ ಬಿಬಿಸಿ ಡಾಕ್ಯುಮೆಂಟರಿ ವೀಕ್ಷಣೆ ಹಾಗೂ ಶಿವಾಜಿ ಜಯಂತಿ ದಿನ ವಿವಿ ಆವರಣದಲ್ಲಿ ಗಲಾಟೆ ನಡೆದಿದ್ದವು. ಇಂತಹ ಗಲಾಟೆಗಳು ವಿವಿಯಲ್ಲಿ ಸಾಮಾನ್ಯವಾದ ಕಾರಣ ಕಠಿಣ ನಿಯಮ ಜಾರಿಗೆ ತರಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: JNU Clash: ಜೆಎನ್‌ಯುನಲ್ಲಿ ಶಿವಾಜಿ ಭಾವಚಿತ್ರ ಧ್ವಂಸ, ವಿದ್ಯಾರ್ಥಿ ಸಂಘಟನೆಗಳ ಮಧ್ಯೆ ಸಂಘರ್ಷ

Exit mobile version