ನವದೆಹಲಿ: ಮೇ 28ರಂದು ನೂತನ ಸಂಸತ್ ಭವನ ಉದ್ಘಾಟನೆಯಾಗಲಿದೆ(New Parliament Building). ಈ ವೇಳೆ, ಲೋಕಸಭೆ ಸ್ಪೀಕರ್ ಅವರ ಪೀಠದಲ್ಲಿ ಅಧಿಕಾರ ಹಸ್ತಾಂತರ ಸಂಕೇತ ಎಂದು ಹೇಳಲಾಗುತ್ತಿರುವ ರಾಜದಂಡವನ್ನು (Sengol) ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಆದರೆ, ಈ ಬಗ್ಗೆಯೂ ವಿವಾದ ಶುರುವಾಗಿದೆ. ಲಾರ್ಡ್ ಮೌಂಟ್‌ಬ್ಯಾಟನ್, ಸಿ ರಾಜಗೋಪಾಲಾಚಾರಿ ಮತ್ತು ಜವಾಹರಲಾಲ್ ನೆಹರು ಅವರು ರಾಜದಂಡವನ್ನು ಬ್ರಿಟಿಷರು ಭಾರತಕ್ಕೆ ಅಧಿಕಾರ ಹಸ್ತಾಂತರಿಸಿದ ಸಂಕೇತ ಎಂದು ಬಣ್ಣಿಸಿರುವ ಬಗ್ಗೆ ಯಾವುದೇ ಲಿಖಿತ ದಾಖಲೆ ಸಾಕ್ಷ್ಯಗಳಿಲ್ಲ ಎಂದು ಕಾಂಗ್ರೆಸ್ (Congress) ಹೇಳಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ಕಾಂಗ್ರೆಸ್‌ನ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಯಾಕೆ ಯಾವಾಗಲೂ ಭಾರತೀಯ ಸಂಪ್ರದಾಯ, ಸಂಸ್ಕೃತಿಯನ್ನು ಇಷ್ಟೊಂದು ದ್ವೇಷ ಮಾಡುತ್ತದೆ ಎಂದು ಅವರು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಹೇಳುತ್ತಿರವುದೇನು?
ತಮಿಳುನಾಡಿನಲ್ಲಿ ತಮ್ಮ ರಾಜಕೀಯ ಉದ್ದೇಶಗಳನ್ನು ಈಡೇರಿಸಿಕೊಳ್ಳುವುದಕ್ಕಾಗಿ ರಾಜದಂಡವನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಹೇಳಿದ್ದಾರೆ. ತಮ್ಮ ತಿರುಚಿದ ಉದ್ದೇಶಗಳಿಗೆ ಸರಿ ಹೊಂದುವಂತೆ ಸತ್ಯಗಳನ್ನು ತಿರುಚುವ ಕೆಲಸ ಮಾಡುವ ಅವರ ಬ್ರಿಗೇಡ್‌ನ ಕೃತ್ಯವಾಗಿದೆ ಇದು ಎಂದು ವಾಗ್ದಾಳಿ ನಡೆಸಿದ್ದಾರೆ. ರಾಜದಂಡವನ್ನು ಭಾರತಕ್ಕೆ ಬ್ರಿಟಿಷ್ ಅಧಿಕಾರದ ವರ್ಗಾವಣೆಯ ಸಂಕೇತವೆಂದು ವಿವರಿಸುವ ಯಾವುದೇ ದಾಖಲಿತ ಪುರಾವೆಗಳಿಲ್ಲ. ಈ ಸಂಬಂಧ ಹೇಳಿಕೊಳ್ಳುತ್ತಿರುವ ಎಲ್ಲ ಕ್ಲೇಮ್‌ಗಳು ಶುದ್ಧ ಸುಳ್ಳು ಮತ್ತು ಬೋಗಸ್ ಆಗಿವೆ ಎಂದು ಜೈರಾಮ್ ರಮೇಶ್ ಅವರು ಹೇಳಿದರು.
ಮೌಂಟ್‌ಬ್ಯಾಟನ್, ರಾಜಾಜಿ ಮತ್ತು ನೆಹರು ಈ ರಾಜದಂಡವನ್ನು ಭಾರತಕ್ಕೆ ಬ್ರಿಟಿಷ್ ಅಧಿಕಾರದ ವರ್ಗಾವಣೆಯ ಸಂಕೇತವೆಂದು ವಿವರಿಸುವ ಯಾವುದೇ ದಾಖಲಿತ ಪುರಾವೆಗಳಿಲ್ಲ. ಈ ಸಂಬಂಧ ಹೇಳಿಕೊಳ್ಳುತ್ತಿರುವ ಎಲ್ಲ ಕ್ಲೇಮ್‌ಗಳು ಶುದ್ಧ ಸುಳ್ಳು ಮತ್ತು ಬೋಗಸ್ ಆಗಿವೆ ಎಂದು ಜೈರಾಮ್ ರಮೇಶ್ ಅವರು ಹೇಳಿದರು.
ಹಸ್ತಾಂತರದ ಪ್ರತೀಕ ರಾಜದಂಡದ ಕಲ್ಪನೆ ಸಂಪೂರ್ಣವಾಗಿ ಕೆಲವರೇ ಮನಸ್ಸಿನಲ್ಲಿ ತಯಾರಾಗಿದೆ ಮತ್ತು ಕೆಲವರು ಅದನ್ನು ವಾಟ್ಸಾಪ್ ಮೂಲಕ ಪಸರಿಸಿದ್ದಾರೆ. ಈಗ ಮಾಧ್ಯಮದಲ್ಲಿರುವ ಅದೇ ಕತೆಯನ್ನು ಹೊಗಳುತ್ತಿದ್ದಾರೆ. ರಾಜಾಜಿ ಅವರ ಇಬ್ಬರು ಅತ್ಯಂತ ವಿಶ್ವಾಸರ್ಹ ವಿದ್ವಾಂಸರು ಈ ಕುರಿತು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ ಎಂದು ಕಾಂಗ್ರೆಸ್‌ನ ಜೈರಾಂ ರಮೇಶ್ ಅವರು ಹೇಳಿದ್ದಾರೆ.
ಕಾಂಗ್ರೆಸ್‌ಗೆ ಗೃಹ ಸಚಿವ ಅಮಿತ್ ಶಾ ತಿರುಗೇಟು
ರಾಜದಂಡವು ಅಧಿಕಾರದ ಹಸ್ತಾಂತರಕ್ಕೆ ಸಂಬಂಧಿಸಿದ ದಾಖಲಿತ ಸಾಕ್ಷ್ಯಗಳಿಲ್ಲ ಎಂದು ಕಾಂಗ್ರೆಸ್ ಪಕ್ಷಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಪಕ್ಷವು ಭಾರತೀಯ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಏಕೆ ದ್ವೇಷಿಸುತ್ತದೆ? ಭಾರತದ ಸ್ವಾತಂತ್ರ್ಯವನ್ನು ಸಂಕೇತಿಸಲು ತಮಿಳುನಾಡಿನ ಪವಿತ್ರ ಶೈವ ಮಠವು ಪಂಡಿತ್ ನೆಹರು ಅವರಿಗೆ ಪವಿತ್ರ ಸೆಂಗೋಲ್ (ರಾಜದಂಡ) ನೀಡಿತು. ಆದರೆ ಅದನ್ನು ‘ವಾಕಿಂಗ್ ಸ್ಟಿಕ್’ ಎಂದು ಮ್ಯೂಸಿಯಂನಲ್ಲಿ ಇಡಲಾಗಿತ್ತು. ಇದು ಕಾಂಗ್ರೆಸ್ ಪಕ್ಷಕ್ಕೆ ತಾನೇ ಮಾಡಿಕೊಳ್ಳುತ್ತಿರುವ ಮತ್ತೊಂದು ಅವಮಾನ ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ವಿಸ್ತಾರ Explainer: ಹೊಸ ಸಂಸತ್ ಭವನದಲ್ಲಿ ಕಂಗೊಳಿಸಲಿದೆ ತಮಿಳುನಾಡಿನ ಚಿನ್ನದ ಸೆಂಗೋಲ್; ಏನಿದು ರಾಜದಂಡ?
ಪವಿತ್ರ ಶೈವ ಮಠವಾದ ತಿರುವಾಡುತುರೈ ಅಧೀನಂ, ಭಾರತದ ಸ್ವಾತಂತ್ರ್ಯದ ಸಮಯದಲ್ಲಿ ಸೆಂಗೋಲ್‌ನ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದ್ದಾರೆ ಎಂದು ಶಾ ಹೇಳಿದ್ದಾರೆ. ಕಾಂಗ್ರೆಸ್ ಅಧೀನಂನ ಇತಿಹಾಸವನ್ನು “ಬೋಗಸ್” ಎಂದು ಕರೆದಿದೆ ಎಂದು ಅವರು ಆರೋಪಿಸಿದರು.
ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.