Site icon Vistara News

Air Suvidha | ಮಾಸ್ಕ್‌ ಕಡ್ಡಾಯ ರದ್ದು ಬೆನ್ನಲ್ಲೇ ವಿಮಾನ ಪ್ರಯಾಣಿಕರ ಮತ್ತೊಂದು ನಿಯಮ ಸಡಿಲ, ಏನದು?

Air Suvidha Portal Form

ನವದೆಹಲಿ: ಭಾರತ ಸೇರಿ ಜಗತ್ತಿನಾದ್ಯಂತ ಕೊರೊನಾ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿರುವ ಕಾರಣ ಕೇಂದ್ರ ಸರ್ಕಾರವು ವಿಮಾನ ಪ್ರಯಾಣಿಕರ ಹಲವು ನಿಯಮಗಳನ್ನು ಸಡಿಲಗೊಳಿಸುತ್ತಿದೆ. ಇತ್ತೀಚೆಗಷ್ಟೇ ವಿಮಾನದಲ್ಲಿ ಪ್ರಯಾಣಿಸುವವರು ಮಾಸ್ಕ್‌ ಧರಿಸುವುದು ಕಡ್ಡಾಯ ಎಂಬ ನಿಯಮವನ್ನು ರದ್ದುಗೊಳಿಸಿತ್ತು. ಈಗ ಮತ್ತೊಂದು ನಿಯಮ (Air Suvidha) ಸಡಿಲಗೊಳಿಸಿದೆ.

ಭಾರತಕ್ಕೆ ಬರುವ ಅಂತಾರಾಷ್ಟ್ರೀಯ ಪ್ರಯಾಣಿಕರು ಇನ್ನುಮುಂದೆ ಏರ್‌ ಸುವಿಧಾ ಪೋರ್ಟಲ್‌ನಲ್ಲಿ ಸ್ವಯಂ ದೃಢೀಕರಣ ಫಾರ್ಮ್‌ (Self-Declaration Forms) ತುಂಬುವ ಅವಶ್ಯಕತೆ ಇಲ್ಲ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ. ಇದುವರೆಗೆ ಅಂತಾರಾಷ್ಟ್ರೀಯ ಪ್ರಯಾಣಿಕರು ಪ್ರಯಾಣಕ್ಕೂ ಮೊದಲು ಏರ್‌ ಸುವಿಧಾ ಪೋರ್ಟಲ್‌ನಲ್ಲಿ ತಾವು ಪಡೆದ ಕೊರೊನಾ ಲಸಿಕೆ, ಎಷ್ಟು ಡೋಸ್‌ ಪಡೆಯಲಾಗಿದೆ ಎಂಬುದರ ಮಾಹಿತಿ ನೀಡಬೇಕಿತ್ತು. ಈಗ ಈ ನಿಯಮವನ್ನು ರದ್ದುಗೊಳಿಸಲಾಗಿದೆ.

ಇದನ್ನೂ ಓದಿ | Masks Not Mandatory | ವಿಮಾನದಲ್ಲಿ ಈಗ ಮಾಸ್ಕ್‌ ಧರಿಸುವುದು ಕಡ್ಡಾಯವಲ್ಲ, ಆದರೆ ಕೆಲ ನಿಯಮ ಅನ್ವಯ

Exit mobile version