Site icon Vistara News

Ganga Vilas Cruise | ನದಿಯ ಹೂಳಿನಲ್ಲಿ ಸಿಲುಕಿದ ಗಂಗಾ ವಿಲಾಸ ಐಷಾರಾಮಿ ಹಡಗು!

Ganga Vilas Cruise

ಪಟನಾ: ಕೆಲ ದಿನಗಳ ಹಿಂದಷ್ಟೇ ಸಂಚಾರ ಆರಂಭಿಸಿದ ಗಂಗಾ ವಿಲಾಸ ಐಷಾರಾಮಿ ಹಡಗು (Ganga Vilas Cruise) ಬಿಹಾರದ ನದಿಯ ಹೂಳಿನಲ್ಲಿ ಸಿಲುಕಿದೆ. ಚಾಪ್ರಾದ ಡೋರಿಗಂಗ್‌ ಪ್ರದೇಶದ ಗಂಗಾ ನದಿಯ ಹೂಳಿನಲ್ಲಿ ಹಡಗು ಸಿಲುಕಿದೆ. ಎಲ್ಲ ಪ್ರಯಾಣಿಕರು ಹಡಗಿನಲ್ಲಿಯೇ ಕಾಲ ಕಳೆಯುವಂತಾಗಿದೆ ಎಂದು ತಿಳಿದುಬಂದಿದೆ.

ಗಂಗಾ ವಿಲಾಸ ಐಷಾರಾಮಿ ಹಡಗು ಜಗತ್ತಿನ ಅತಿ ಉದ್ದದ ಕ್ರೂಸ್‌ ಎನಿಸಿದ್ದು, ಜನವರಿ 13ರಂದು ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದರು. ವಾರಾಣಸಿಯಿಂದ ಹೊರಟ ಹಡಗು 51 ದಿನ, 27 ಸಣ್ಣ ಹಾಗೂ ದೊಡ್ಡ ನದಿಗಳನ್ನು ಮೂಲಕ 3,210 ಕಿ.ಮೀ ಸಂಚರಿಸಬೇಕಿತ್ತು. ಈಗ ಸಂಚಾರ ಆರಂಭಿಸಿದ ಮೂರನೇ ದಿನಕ್ಕೆ ಹೂಳಿನಲ್ಲಿ ಸಿಲುಕಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ವರದಿ ನಿರಾಕರಿಸಿದ ಪ್ರಾಧಿಕಾರ
ಬಿಹಾರದ ಛಾಪ್ರಾದಲ್ಲಿ ಐಷಾರಾಮಿ ಹಡಗು ಸಿಲುಕಿಕೊಂಡಿದೆ ಎಂಬ ವರದಿಯನ್ನು ಭಾರತೀಯ ಒಳನಾಡು ಜಲ ಮಾರ್ಗಗಳ ಪ್ರಾಧಿಕಾರ (IWAI) ಸ್ಪಷ್ಟಪಡಿಸಿದೆ. “ಗಂಗಾ ವಿಲಾಸ ಕ್ರೂಸ್‌ ಹೂಳಿನಲ್ಲಿ ಸಿಲುಕಿಕೊಂಡಿದೆ ಎಂಬ ವರದಿ ಸತ್ಯಕ್ಕೆ ದೂರವಾಗಿದೆ. ನಿಗದಿತ ಸಮಯಕ್ಕೆ ಹಡಗು ಛಾಪ್ರಾ ತಲುಪಿದೆ” ಎಂದು ಟ್ವೀಟ್‌ ಮಾಡಿದೆ.

ಚಲಿಸುವ ಈ ಪಂಚತಾರಾ ಹೋಟೆಲ್, 36 ಪ್ರವಾಸಿಗರ ಸಾಮರ್ಥ್ಯದ 18 ಸೂಟ್‌ಗಳನ್ನು ಹೊಂದಿದೆ. ಆಧುನಿಕ ಹಡಗು 62 ಮೀಟರ್ ಉದ್ದ ಮತ್ತು 12 ಮೀಟರ್ ಅಗಲವಿದೆ ಮತ್ತು 1.4 ಮೀಟರ್ ಡ್ರಾಫ್ಟ್ ಅಗತ್ಯವಿದೆ ಎಂದು ಕ್ರೂಸ್‌ ನಿರ್ದೇಶಕ ರಾಜ್ ಸಿಂಗ್ ತಿಳಿಸಿದ್ದಾರೆ.

ಇದನ್ನೂ ಓದಿ | PM Narendra Modi | ಜಗತ್ತಿನ ಅತಿ ಉದ್ದದ ರಿವರ್ ಕ್ರೂಸ್‌ ಎಂವಿ ಗಂಗಾ ವಿಲಾಸ್‌ಗೆ ವಾರಾಣಸಿಯಲ್ಲಿ ಪ್ರಧಾನಿ ಚಾಲನೆ

Exit mobile version