Site icon Vistara News

ಮೊದಲ ರಾತ್ರಿಯಲ್ಲಿ ಹೃದಯಾಘಾತದಿಂದ ಮೃತಪಟ್ಟ ನವದಂಪತಿ; ಅಂಥದ್ದೇನಾಯ್ತು ಕೋಣೆಯಲ್ಲಿ!

Newly married couple Died by heart attack in Uttar pradesh

#image_title

ಲಖನೌ: ಅವತ್ತೇ ಈ ಜೋಡಿ ದಾಂಪತ್ಯಕ್ಕೆ ಕಾಲಿಟ್ಟಿದ್ದರು. ಅಂದೇ ಮೊದಲ ರಾತ್ರಿ ಸಂಭ್ರಮವೂ ಅವರದ್ದಾಗಿತ್ತು. ಆದರೆ ಮರುದಿನ ಅವರು ಮಲಗಿದ್ದ ಕೋಣೆಯಲ್ಲಿ ಶವವಾಗಿದ್ದರು. ಇವರಿಬ್ಬರ ಸಾವು ವಿಚಿತ್ರ ಎನ್ನಿಸಲು ಕಾರಣ, ಪೋಸ್ಟ್​ಮಾರ್ಟಮ್​ ರಿಪೋರ್ಟ್​. ಏನೋ ಒಟ್ಟಾಗಿ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂಬ ಅನುಮಾನ ಮೊದಲು ಎಲ್ಲರಿಗೂ ಕಾಡಿತ್ತು. ಆದರೆ ಸತ್ಯ ಬೇರೆಯಿತ್ತು. ಇವರಿಬ್ಬರೂ ಹೃದಯಾಘಾತದಿಂದ (Couple dies Due to Heart Attack) ಮೃತಪಟ್ಟಿದ್ದಾಗಿ ಪೋಸ್ಟ್​ಮಾರ್ಟಮ್​ ವರದಿ ಹೇಳಿತ್ತು.

ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆ, ಗೋಧಿಯಾ ಹಳ್ಳಿಯಲ್ಲಿ, 22ವರ್ಷದ ಪುಷ್ಪಾ ಮತ್ತು 24 ವರ್ಷದ ಪ್ರತಾಪ್​ ಯಾದವ್​ ಮದುವೆ ಮೇ 30ರಂದು ನಡೆದಿತ್ತು. ಅಂದು ಎಲ್ಲ ಕಾರ್ಯಕ್ರಮವೂ ಮುಗಿದ ಬಳಿಕ ಹೊಸಜೋಡಿ ತಮ್ಮ ಕೋಣೆಗೆ ಹೋದರು. ಆದರೆ ಮರುದಿನ ಬೆಳಗ್ಗೆ ಎಷ್ಟೊತ್ತಾದರೂ ಹೊರಗೆ ಬಾರದಾಗ, ಕೋಣೆಯ ಬಾಗಿಲು ಒಡೆದು ನೋಡಿದರೆ ಇಬ್ಬರಿಗೂ ಜೀವ ಇರಲಿಲ್ಲ. ಮನೆಯವರು ಕೂಡಲೇ ಪೊಲೀಸರಿಗೆ ಕರೆಮಾಡಿ ವಿಷಯ ತಿಳಿಸಿ, ಅವರೂ ಬಂದು ಪರಿಶೀಲನೆ ನಡೆಸಿದ್ದಾರೆ. ಬಳಿಕ ಇಬ್ಬರ ಮೃತದೇಹವನ್ನು ಪೋಸ್ಟ್​ಮಾರ್ಟಮ್​​ಗೆ ಕಳಿಸಿದ್ದರು. ಅದರ ವರದಿ ಬಂದಿದ್ದು, ಸಾವಿನ ಕಾರಣ ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇಬ್ಬರಿಗೂ ಒಮ್ಮೆಲೇ ಹೃದಯಾಘಾತವಾಯಿತಾ? ರಾತ್ರಿ ಏನಾಯಿತು? ಎಂಬಿತ್ಯಾದಿ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದುಹೋಗಿವೆ. ಆದರೂ ಪೊಲೀಸರು ಆ ಜೋಡಿಯ ಸಮಬಂಧಿಕರು, ಮನೆಯವರನ್ನೆಲ್ಲ ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Family Dispute: ಪ್ರೀತಿಸಿ ಮದುವೆಯಾದ ಪತ್ನಿಯಿಂದಲೇ ಪ್ರಾಣ ಬಿಟ್ಟನಾ ಪತಿ?; ಕುಟುಂಬಸ್ಥರ ಆರೋಪವೇನು?

’ಈ ದಂಪತಿಯ ಮೈಮೇಲೆ ಎಲ್ಲಿಯೂ ಗಾಯದ ಗುರುತು ಇಲ್ಲ. ಯಾವುದೇ ಜಗಳವಾದಂತೆಯೂ ಇಲ್ಲ. ಆದರೆ ಇಬ್ಬರೂ ಹೇಗೆ ಹೃದಯಾಘಾತದಿಂದ ಮೃತಪಟ್ಟರು ಎಂಬುದು ಅಚ್ಚರಿ ತರಿಸಿದೆ. ಮದುವೆ ದಿನ ಅವರು ಬೆಳಗ್ಗೆಯಿಂದ ರಾತ್ರಿವರೆಗೆ ಏನೇನು ಮಾಡಿದರು? ಏನು ಊಟ ಮಾಡಿದರು ಎಂಬಿತ್ಯಾದಿ ವಿಷಯಗಳನ್ನು ಸಂಗ್ರಹಿಸುತ್ತಿದ್ದೇವೆ. ವಿಧಿವಿಜ್ಞಾನ ತಜ್ಞರು ಪರಿಶೀಲನೆ ನಡೆಸಿದ್ದಾರೆ. ಇವರಿಬ್ಬರ ಸಾವಿನ ಬಗ್ಗೆ ಹಲವು ಅನುಮಾನಗಳು ಇವೆ. ಹಾಗಾಗಿ ತನಿಖೆ ಮುಂದುವರಿಸುತ್ತೇವೆ’ ಎಂದು ಕೈಸರ್​ಗಂಜ್​ ಪೊಲೀಸ್ ಠಾಣೆ ಅಧಿಕಾರಿ ರಾಜನಾಥ್​ ಸಿಂಗ್ ತಿಳಿಸಿದ್ದಾರೆ.

ಎರಡು-ಮೂರು ದಿನ ಎರಡೂ ಕುಟುಂಬಗಳಲ್ಲೂ ಸಂಭ್ರಮ ಮನೆ ಮಾಡಿತ್ತು. ಮದುವೆ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆದಿದ್ದವು. ವಧು-ವರ ಇಬ್ಬರೂ ಬಳಲಿದಂತೆ ಕಂಡರೂ, ತುಂಬ ಖುಷಿಯಾಗಿ ಇದ್ದರು. ಆದರೆ ಈಗ ಇಬ್ಬರೂ ಶವವಾಗಿದ್ದನ್ನು ನೋಡಿ ಮನೆಯವರು/ಬಂಧುಗಳು ಗೋಳಿಡುತ್ತಿದ್ದಾರೆ. ಹುಡುಗ-ಹುಡುಗಿ ಇಬ್ಬರೂ ಆರೋಗ್ಯವಾಗಿಯೇ ಇದ್ದರು. ಈ ಹಿಂದೆ ಕೂಡ ಇವರಿಗೆ ಆರೋಗ್ಯ ಸಮಸ್ಯೆ ಇರಲಿಲ್ಲ ಈ ಸಾವು ಅರ್ಥವೇ ಆಗುತ್ತಿಲ್ಲ ಎನ್ನುತ್ತಿದ್ದಾರೆ. ಇಬ್ಬರಿಗೂ ಒಟ್ಟಿಗೇ ಅಂತ್ಯಕ್ರಿಯೆ ಮಾಡಲಾಗಿದೆ. ಇನ್ನೂ ಚಿಕ್ಕವಯಸ್ಸಿನ ದಂಪತಿ ಹೃದಯಾಘಾತದಿಂದ ಮೃತಪಟ್ಟಿದ್ದು ನೋವಿನ ಜತೆಗೆ, ನಿಗೂಢವೂ ಎನ್ನಿಸಿದೆ.

Exit mobile version