Site icon Vistara News

NIA Raids: ಪಂಜಾಬ್, ಹರ್ಯಾಣದ 14 ಕಡೆ ಎನ್ಐಎ ದಾಳಿ! ಕಾರಣ ಏನು?

NIA Raids 14 places in punjab and Haryana

ನವದೆಹಲಿ: ಈ ವರ್ಷದ ಆರಂಭದಲ್ಲಿ ಅಮೆರಿಕದ ಸ್ಯಾನ್‌ ಫ್ರಾನ್ಸಿಸ್ಕೋದಲ್ಲಿರುವ (San Francisco) ಭಾರತೀಯ ರಾಯಭಾರ ಕಚೇರಿ (Indian Consulate) ಮೇಲೆ ದಾಳಿ ನಡೆದಿತ್ತು. ಈ ಘಟನೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ(National Investigation Agency) ಬುಧವಾರ ಪಂಜಾಬ್ ಮತ್ತು ಹರ್ಯಾಣದ (Punjab and Haryana) 14 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆಯನ್ನು ನಡೆಸಿದೆ(NIA Raids). ಈ ವರ್ಷದ ಮಾರ್ಚ್ 19 ಮತ್ತು ಜುಲೈ 2 ರಂದು ಕ್ರಿಮಿನಲ್ ಅತಿಕ್ರಮಣ, ವಿಧ್ವಂಸಕ ಕೃತ್ಯಗಳು, ಸಾರ್ವಜನಿಕ ಆಸ್ತಿಗೆ ಹಾನಿ ಮತ್ತು ಕಾನ್ಸುಲೇಟ್ ಅಧಿಕಾರಿಗಳಿಗೆ ಬೆದರಿಕೆಯ ಪ್ರಯತ್ನಗಳು ಮತ್ತು ಬೆಂಕಿಯ ಕಟ್ಟಡಕ್ಕೆ ಬೆಂಕಿ ಹಚ್ಚುವ ಪ್ರಯತ್ನಗಳನ್ನು ಒಳಗೊಂಡಿರುವ ದಾಳಿಯ ಹಿಂದಿನ ಪಿತೂರಿಯನ್ನು ಬಿಚ್ಚಿಡುವುದು ಎನ್ಐಎ ರೇಡ್‌ನ ಉದ್ದೇಶವಾಗಿದೆ.

ಅಧಿಕೃತ ವಕ್ತಾರರ ಪ್ರಕಾರ, ದಾಳಿಯ ಎಲ್ಲಾ ದುಷ್ಕರ್ಮಿಗಳು ಮತ್ತು ಭಾಗಿಯಾದ ಸಹಚರರನ್ನು ಗುರುತಿಸುವುದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನಿಖೆಯ ಭಾಗವಾಗಿದೆ. ಪಂಜಾಬ್‌ನ ಮೋಗಾ, ಜಲಂಧರ್, ಲೂಧಿಯಾನ, ಗುರುದಾಸ್‌ಪುರ, ಮೊಹಾಲಿ ಮತ್ತು ಪಟಿಯಾಲ ಮತ್ತು ಹರಿಯಾಣದ ಕುರುಕ್ಷೇತ್ರ ಮತ್ತು ಯಮುನಾನಗರ ಜಿಲ್ಲೆಗಳಲ್ಲಿ ದಾಳಿ ನಡೆಸಲಾಗಿದೆ.

ದಾಳಿಯ ಸಂದರ್ಭದಲ್ಲಿ ಆರೋಪಿಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಒಳಗೊಂಡ ಡಿಜಿಟಲ್ ಡೇಟಾ ಮತ್ತು ಇತರ ದೋಷಾರೋಪಣೆ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎನ್ಐಎ ತಿಳಿಸಿದೆ. ಭಯೋತ್ಪಾದನಾ ವಿರೋಧಿ ಏಜೆನ್ಸಿಯು ಅಪರಾಧಿಗಳನ್ನು ಗುರುತಿಸಿ ಕಾನೂನು ಕ್ರಮ ಜರುಗಿಸುವ ಜೊತೆಗೆ ಭಾರತ ವಿರೋಧಿ ದುಷ್ಕರ್ಮಿಗಳಿಗೆ ಬಲವಾದ ಸಂದೇಶವನ್ನು ಕಳುಹಿಸುವ ಉದ್ದೇಶದಿಂದ ಪ್ರಕರಣದ ತನಿಖೆ ನಡೆಸಲಾಗುತ್ತಿದೆ.

ಆಗಸ್ಟ್‌ನಲ್ಲಿ ಸ್ಯಾನ್‌ಫ್ರ್ಯಾನ್ಸಿಸ್ಕೋ ನಗರಕ್ಕೆ ಭೇಟಿ ನೀಡಿದ್ದ ಎನ್ಐಎ ತಂಡವು, ರಾಯಭಾರ ಕಚೇರಿಯ ಮೇಲಿನ ದಾಳಿಯನ್ನು ಪರಿಶೀಲಿಸಿತ್ತು. ತನ್ನ ತನಿಖೆಯ ಭಾಗವಾಗಿ, ಈ ಹಿಂಸಾತ್ಮಕ ಘಟನೆಗಳಲ್ಲಿ ಭಾಗಿಯಾಗಿರುವ ಅಮೆರಿಕ ಆಧಾರಿತ ಸಂಸ್ಥೆಗಳು ಮತ್ತು ವ್ಯಕ್ತಿಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುವುದಕ್ಕಾಗಿ ಎನ್ಐ ಅಮೆರಿಕಕ್ಕೆ ಹೋಗಿತ್ತು.

ಸ್ಯಾನ್‌ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ರಾಯಭಾರ ಕಟ್ಟಡದ ಮೇಲಿನ ದಾಳಿಗೆ ಸಂಬಂಧಿಸಿದಂತೆ ಭಾರತದ ರಾಷ್ಟ್ರೀಯ ತನಿಖಾ ಸಂಸ್ಥೆಯು ಈಗಾಗಲೇ ಕೆಲವು ವ್ಯಕ್ತಗಳನ್ನು ಗುರುತಿಸಿದೆ. ಈ ಪೈಕಿ ಮುಖ್ಯ ಆರೋಪಿಗಳು ಮತ್ತು ಅವರ ನಿಕಟವರ್ತಿಗಳು ಭಾರತ ಮತ್ತು ಅಮೆರಿಕದ ಪ್ರಜೆಗಳಾಗಿದ್ದಾರೆ ಎಂದು ಎನ್ಐಎ ಹೇಳಿಕೊಂಡಿದೆ.

ಈ ಸುದ್ದಿಯನ್ನೂ ಓದಿ: Khalistani Terrorists: ಹಿಂದು ನಾಯಕರು, ಭಾರತದ ರಾಯಭಾರಿಗಳೇ ಖಲಿಸ್ತಾನಿಗಳ ಟಾರ್ಗೆಟ್;‌ ಗುಪ್ತಚರ ಇಲಾಖೆ ಅಲರ್ಟ್

Exit mobile version