ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ (Bill Gates) ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ದೆಹಲಿಯಲ್ಲಿರುವ ಪ್ರಧಾನಿ ನಿವಾಸದಲ್ಲಿ ಇಬ್ಬರೂ ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದು, ಭಾರತದ ಅಭಿವೃದ್ಧಿ, ಕೃತಕ ಬುದ್ಧಿಮತ್ತೆಯ ಬಳಕೆ, ತಂತ್ರಜ್ಞಾನದ ಬಳಕೆ ಸೇರಿ ಹಲವು ವಿಷಯಗಳ ಕುರಿತು ಮಾತನಾಡಿದರು. ಇದೇ ವೇಳೆ ನರೇಂದ್ರ ಮೋದಿ ಅವರು ಬಿಲ್ ಗೇಟ್ಸ್ ಅವರಿಗೆ ನೀಲಗಿರಿ ಚಹಾ ಸೇರಿ ಹಲವು ದೇಶೀಯ ವಸ್ತುಗಳನ್ನು, ಮೂರ್ತಿಗಳನ್ನು ಉಡುಗೊರೆ ನೀಡಿದ್ದಾರೆ. ದ
ನರೇಂದ್ರ ಮೋದಿ ಅವರು ಬಿಲ್ ಗೇಟ್ಸ್ ಅವರಿಗೆ ದಕ್ಷಿಣ ಭಾರತದ ಖ್ಯಾತ ನೀಲಗಿರಿ ಚಹಾ, ಮುತ್ತುಗಳು, ತಮಿಳುನಾಡಿನ ಸಾಂಪ್ರದಾಯಿಕ ಟೆರಾಕೊಚ್ಚ ಮೂರ್ತಿಗಳು, ಪುಸ್ತಕಗಳು, ಕರಕುಶಲ ವಸ್ತುಗಳು, ಪಶ್ಮಿನಾ ಶಾಲು, ಜಮ್ಮು-ಕಾಶ್ಮೀರದ ಕೇಸರಿ, ಡಾರ್ಜಿಲಿಂಗ್ ಟೀ ಸೇರಿ ಹಲವು ವಸ್ತುಗಳನ್ನು ಉಡುಗೊರೆ ನೀಡಿದ್ದಾರೆ. ಭಾರತದ ವೈವಿಧ್ಯತೆ, ಸಂಪ್ರದಾಯ, ಕರಕುಶಲತೆ ಸೇರಿ ಹಲವು ದೇಶೀಯತೆಯನ್ನು ಸಾರುವ ವಸ್ತುಗಳನ್ನು ನರೇಂದ್ರ ಮೋದಿ ಅವರು ಬಿಲ್‌ಗೇಟ್ಸ್‌ಗೆ ಉಡುಗೊರೆ ನೀಡಿದ್ದಾರೆ. ಉಡುಗೊರೆ ನೀಡುವಾಗ ಅವುಗಳ ವೈಶಿಷ್ಟ್ಯವನ್ನು ಕೂಡ ವಿವರಿಸಿದ್ದು ವಿಶೇಷವಾಗಿತ್ತು.
#WATCH | After their interaction, Bill Gates presents a few nutrition books to PM Modi as gifts.
— ANI (@ANI) March 29, 2024
PM Modi gifts him 'Vocal for Local' gift hampers. pic.twitter.com/JYGj10BzU1
ಎಐ ಬಳಕೆಯ ಮಹತ್ವ ವಿವರಿಸಿದ ಮೋದಿ
ಭಾರತದಲ್ಲಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಬಳಕೆ, ಪ್ರಾಮುಖ್ಯತೆ ಕುರಿತು ನರೇಂದ್ರ ಮೋದಿ ಅವರು ಬಿಲ್ ಗೇಟ್ಸ್ ಅವರಿಗೆ ವಿವರಿಸಿದರು. “ಭಾರತದಲ್ಲಿ ಜನಿಸುವ ಮಕ್ಕಳೀಗ ಆಯ್ (Aai) ಎಂದು ಹೇಳುವ ಜತೆಗೆ ಎಐ (AI) ಎಂದು ಕೂಡ ಹೇಳುತ್ತವೆ. ಇನ್ನು ಜಿ-20 ಶೃಂಗಸಭೆಯಲ್ಲಿ ಭಾಷಾಂತರಕ್ಕಾಗಿ ನಾವು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿದೆವು. ಇದರಿಂದ ಉತ್ತಮ ಸಂವಹನ ಸಾಧ್ಯವಾಯಿತು” ಎಂದು ತಿಳಿಸಿದರು.
ಡಿಜಿಟಲ್ ಕ್ರಾಂತಿಗೆ ಬಿಲ್ ಗೇಟ್ಸ್ ಮೆಚ್ಚುಗೆ
ಭಾರತದಲ್ಲಿ ಡಿಜಿಟಲ್ ಮೂಲ ಸೌಕರ್ಯಗಳ ಹೆಚ್ಚಳದಿಂದ ಉಂಟಾಗಿರುವ ಡಿಜಿಟಲ್ ಕ್ರಾಂತಿಯ ಕುರಿತು ಬಿಲ್ ಗೇಟ್ಸ್ ಶ್ಲಾಘನೆ ವ್ಯಕ್ತಪಡಿಸಿದರು. “ಭಾರತವು ಡಿಜಿಟಲ್ ಮೂಲ ಸೌಕರ್ಯಗಳನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿದೆ. ಮಹಿಳೆಯರು ಕೂಡ ಆನ್‌ಲೈನ್ ಪಾವತಿ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದಾರೆ. ತಂತ್ರಜ್ಞಾನದ ಅಳವಡಿಕೆಯಲ್ಲಿ ಭಾರತವು ಮುಂದಿದೆ” ಎಂದು ಹೇಳಿದರು. ಹಾಗೆಯೇ, ಕೃತಕ ಬುದ್ಧಿಮತ್ತೆಯಿಂದ ಎದುರಾಗುವ ಸವಾಲುಗಳ ಕುರಿತು ಕೂಡ ಬಿಲ್ ಗೇಟ್ಸ್ ಪ್ರಸ್ತಾಪಿಸಿದರು.
ಇದನ್ನೂ ಓದಿ: Narendra Modi: ಮೋದಿ ಜತೆ ಚಾಟ್; ಭಾರತದ ಡಿಜಿಟಲ್ ಕ್ರಾಂತಿಗೆ ಬಿಲ್ ಗೇಟ್ಸ್ ಶ್ಲಾಘನೆ
ಬಿಲ್ ಗೇಟ್ಸ್ ಜತೆಗಿನ ಮಾತುಕತೆ ವೇಳೆ ನರೇಂದ್ರ ಮೋದಿ ಅವರು ತಂತ್ರಜ್ಞಾನದ ಬಳಕೆ ಕುರಿತು ಮಾತನಾಡಿದರು. “ನನಗೆ ತಂತ್ರಜ್ಞಾನದ ಬಗ್ಗೆ ಹೆಚ್ಚು ಆಸಕ್ತಿ ಇದೆ. ಗ್ಯಾಜೆಟ್‌ಗಳು ಸೇರಿ ಹಲವು ಡಿವೈಸ್‌ಗಳನ್ನು ಬಳಸುವುದು ನನಗೆ ರೂಢಿಯಾಗಿದೆ. ನಾನು ಅಮೆರಿಕಕ್ಕೆ ಹೋದಾಗ ಮಾಲ್‌ಗಳಿಗೆ ಹೋಗಿ ಗ್ಯಾಜೆಟ್‌ಗಳನ್ನು ಖರೀದಿಸುತ್ತಿದ್ದೆ. ಭಾರತದಲ್ಲೂ ಈ ತಂತ್ರಜ್ಞಾನ ಬರಬೇಕು ಎಂದು ಬಯಸುತ್ತಿದ್ದೆ. ಈಗ ಅದು ಸಾಕಾರವಾಗುತ್ತಿದೆ. ಹಾಗಂತ, ನಾನು ತಂತ್ರಜ್ಞಾನದ ಗುಲಾಮನಲ್ಲ. ಬಹೋಪಯೋಗಿ ಕಾರಣಗಳಿಗಾಗಿ ಟೆಕ್ನಾಲಜಿಯನ್ನು ಬಳಸುತ್ತೇನೆ” ಎಂದು ತಿಳಿಸಿದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ