Site icon Vistara News

Solar Plant : ನಾಗ್ಪುರದಲ್ಲಿ ಸೋಲಾರ್ ಉತ್ಪನ್ನಗಳ ಕಂಪನಿಯಲ್ಲಿ ಸ್ಫೋಟ: 9 ಮಂದಿ ಸಾವು

Nagapura Solar plant blast

ನಾಗ್ಪುರ: ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯಲ್ಲಿ ಸೋಲಾರ ಸ್ಫೋಟಕ ತಯಾರಿಕಾ ಕಂಪನಿಯಲ್ಲಿ (Solar Plant ) ಸ್ಫೋಟ ಸಂಭವಿಸಿದ್ದು, 9 ಮಂದಿ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಕ್ಯಾಸ್ಟ್ ಬೂಸ್ಟರ್ ಪ್ಲಾಂಟ್​ನಲ್ಲಿ ಪ್ಯಾಕಿಂಗ್ ಸಮಯದಲ್ಲಿ ಈ ಘಟನೆ ನಡೆದಿದೆ ಎಂದು ನಾಗ್ಪುರ (ಗ್ರಾಮೀಣ) ಪೊಲೀಸ್ ವರಿಷ್ಠಾಧಿಕಾರಿ ಹರ್ಷ್ ಪೊದ್ದಾರ್ ತಿಳಿಸಿದ್ದಾರೆ.

ಭಾನುವಾರವಾದರೂ ಉತ್ಪಾದನಾ ಘಟಕದಲ್ಲಿ ಕೆಲಸ ನಡೆಯುತ್ತಿತ್ತು. ಬೆಳಗ್ಗೆ 9 ಗಂಟೆ ವೇಳೆ ಭಾರೀ ಸದ್ದಿನೊಂದಿಗೆ ಸ್ಫೋಟ ನಡೆದಿದೆ. ಈ ವೇಳೆ ಸ್ಥಳದಲ್ಲಿದ್ದ 9 ಮಂದಿ ಅಲ್ಲಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಇನ್ನೂ ಅನೇಕರು ಗಾಯಗೊಂಡಿರುವ ಅನುಮಾನಗಳು ವ್ಯಕ್ತವಾಗಿವೆ. ಸ್ಫೋಟದ ಬಳಿಕ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೀಗಾಗಿ ಎಷ್ಟು ಮಂದಿ ಮೃತಪಟ್ಟಿದ್ದಾರೆ ಎಂಬುದರ ಕುರಿತು ಪೂರ್ಣ ಮಾಹಿತಿ ಸಿಕ್ಕಿಲ್ಲ.

ಪೊಲೀಸರು ಹಾಗೂ ಸಂಬಂಧಿತ ಇಲಾಖೆ ಅಧಿಕಾರಿಗಳು ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಪರಿಶೀಲನೆ ಬಳಿಕ ಎಲ್ಲ ಮಾಹಿತಿ ಲಭ್ಯವಾಗಲಿದೆ ಎಂದು ಸ್ಥಳೀಯ ಪೊಲೀಸರು ಹೇಳಿದ್ದಾರೆ.

ಉನ್ನತ ಸಮಿತಿಯಿಂದ ಸಂಸತ್​ ಭದ್ರತೆ ಉಲ್ಲಂಘನೆಯ ಪ್ರಕರಣ ತನಿಖೆ

ಸಂಸತ್ತಿನ ಭದ್ರತಾ (Lok Sabha ) ಉಲ್ಲಂಘನೆಯ ಬಗ್ಗೆ ಆಳವಾದ ತನಿಖೆಗಾಗಿ ಉನ್ನತ ಮಟ್ಟದ ವಿಚಾರಣಾ ಸಮಿತಿಯನ್ನು ರಚಿಸಲಾಗಿದೆ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ (Om Birla) ಶನಿವಾರ ಹೇಳಿದ್ದಾರೆ. ಸಮಿತಿಯು ಕೆಲಸ ಮಾಡಲು ಪ್ರಾರಂಭಿಸಿದೆ ಮತ್ತು ಮಾಹಿತಿಯನ್ನು ಶೀಘ್ರದಲ್ಲೇ ಸದನದೊಂದಿಗೆ ಹಂಚಿಕೊಳ್ಳಲಾಗುವುದು ಎಂದು ಲೋಕಸಭಾ ಸ್ಪೀಕರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

“ಸದನದ ಒಳಗೆ ನಡೆದ ಘಟನೆಯ ಬಗ್ಗೆ ಆಳವಾದ ತನಿಖೆಗಾಗಿ ಉನ್ನತ ಮಟ್ಟದ ವಿಚಾರಣಾ ಸಮಿತಿಯನ್ನು ರಚಿಸಲಾಗಿದೆ. ಸಮಿತಿಯು ಕೆಲಸ ಮಾಡಲು ಪ್ರಾರಂಭಿಸಿದೆ. ಈ ಸಮಿತಿಯ ವರದಿಯನ್ನು ಶೀಘ್ರದಲ್ಲೇ ಸದನದೊಂದಿಗೆ ಹಂಚಿಕೊಳ್ಳಲಾಗುವುದು” ಎಂದು ಲೋಕಸಭಾ ಸ್ಪೀಕರ್ ತಮ್ಮ ಹೇಳಿಕೆಯಲ್ಲಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನಾನು ಉನ್ನತಾಧಿಕಾರ ಸಮಿತಿಯನ್ನು ಸಹ ರಚಿಸಿದ್ದೇನೆ, ಅದು ಸಂಸತ್ತಿನ ಸಂಕೀರ್ಣದಲ್ಲಿ ಭದ್ರತೆಯ ವಿವಿಧ ಅಂಶಗಳನ್ನು ಪರಿಶೀಲಿಸುತ್ತದೆ. ಅಂತಹ ಘಟನೆಗಳು ಪುನರಾವರ್ತನೆಯಾಗದಂತೆ ಖಚಿತಪಡಿಸಿಕೊಳ್ಳಲು ದೃಢವಾದ ಕ್ರಿಯಾ ಯೋಜನೆಯನ್ನು ರೂಪಿಸುತ್ತದೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ : ಸೂರತ್ ವಜ್ರ ಸಂಕೀರ್ಣ ಇಂದು ಉದ್ಘಾಟನೆ; ಅದ್ಭುತ ಫೋಟೊಗಳನ್ನು ಹಂಚಿಕೊಂಡ ಮೋದಿ

6ನೇ ಆರೋಪಿ ಮಹೇಶ್ ಕುಮಾವತ್ ಸೆರೆ
ಲೋಕ ಸಭೆಯಲ್ಲಿ (Lok Sabha) ಭದ್ರತೆಯ ಉಲ್ಲಂಘನೆ ಪ್ರಕರಣದಲ್ಲಿ ದೆಹಲಿ ಪೊಲೀಸರು ಶನಿವಾರ ಆರನೇ ಆರೋಪಿಯನ್ನು ಬಂಧನವನ್ನು ಮಾಡಿದ್ದಾರೆ, ಇಬ್ಬರು ವ್ಯಕ್ತಿಗಳು ಸದನಕ್ಕೆ ಹಾರಿ ಬಣ್ಣದ ಹೊಗೆಯನ್ನು ಸ್ಫೋಟಿಸುವ ಮೂಲಕ ಅಪರಾಧ ಎಸಗಿದ್ದರು. ಈ ಕೃತ್ಯದ ‘ಮಾಸ್ಟರ್ ಮೈಂಡ್’ ಲಲಿತ್ ಝಾಗೆ ದೆಹಲಿಯಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಿದ ಆರೋಪದ ಮೇಲೆ ಮಹೇಶ್ ಕುಮಾವತ್ ನನ್ನು ಪೊಲೀಶರು ವಶಕ್ಕೆ ತೆಗೆದುಕೊಂಡಿದ್ದಾರೆ.

2001ರ ಸಂಸತ್​ ದಾಳಿಗೆ 10 ವರ್ಷವಾದ ಡಿಸೆಂಬರ್ 13 ರಂದು ನಡೆದ ಆರೋಪಿಗಳು ಲೋಕಸಭೆಗೆ ಮೇಲೆ ದಾಳಿ ನಡೆಸಿ ಭಯ ಸೃಷ್ಟಿಸಿದ್ದರು. ಪಶ್ಚಿಮ ಬಂಗಾಳ ಮೂಲದ ಲಲಿತ್ ಝಾ ಅವರನ್ನು ಕಳೆದ ರಾತ್ರಿ ಬಂಧಿಸಿದ ನಂತರ ಶುಕ್ರವಾರ ಏಳು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ. ಸಂಸತ್ತಿನ ಭದ್ರತೆಯನ್ನು ಉಲ್ಲಂಘಿಸಲು ಪಿತೂರಿ ನಡೆಸಲು ಆರೋಪಿಗಳು ಅನೇಕ ಬಾರಿ ಭೇಟಿಯಾದರು ಎಂದು ಅವರು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಪಟಿಯಾಲ ಹೌಸ್ ನ್ಯಾಯಾಲಯದಲ್ಲಿ ಹೇಳಿದ್ದಾರೆ.

Exit mobile version