Site icon Vistara News

9 years of PM Modi: ಈ 9 ವರ್ಷದಲ್ಲಿ ಜನರ ಬದುಕು ಹಸನಾಗಿಸುವ ಕೆಲಸ ಮಾಡಿದ್ದೇವೆ; ಪ್ರಧಾನಿ ಮೋದಿ ಟ್ವೀಟ್

PM Narendra Modi

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವು ಇಂದಿಗೆ 9 ವರ್ಷಗಳನ್ನು ಪೂರೈಸಿ 10 ವರ್ಷಕ್ಕೆ ಕಾಲಿಟ್ಟಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ (PM Narendra Modi) ಅವರು ಟ್ವೀಟ್ ಮಾಡಿ, ತಮ್ಮ ಸಾಧನೆಗಳನ್ನು ಬರೆದುಕೊಂಡಿದ್ದಾರೆ. ಮೋದಿ ಅವರು ಈ 9 ವರ್ಷಗಳನ್ನು 9 ವರ್ಷಗಳ ಸೇವೆಯ ಎಂದು ಬಣ್ಣಿಸಿದ್ದಾರೆ. ಅಲ್ಲದೇ, ಈ 9 ವರ್ಷಗಳಲ್ಲಿ ತೆಗೆದುಕೊಳ್ಳಲಾದ ಎಲ್ಲ ನಿರ್ಧಾರಗಳು ಜನರ ಬದುಕು ಸುಧಾರಣೆ ಮಾಡುವುದೇ ಆಗಿದೆ ಎಂದು ಹೇಳಿಕೊಂಡಿದ್ದಾರೆ(9 years of PM Modi).

ನಾವು ಇಂದು, ರಾಷ್ಟ್ರದ ಸೇವೆಯಲ್ಲಿ 9 ವರ್ಷಗಳನ್ನು ಪೂರೈಸಿದ್ದೇವೆ. ಕೃತಜ್ಞೆ ಮತ್ತು ನಮ್ರತೆ ಭಾವನೆಗಳು ತುಂಬಿ ಬಂದಿವೆ. ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರ, ತೆಗೆದುಕೊಳ್ಳುವ ಪ್ರತಿಯೊಂದು ಕೆಲಸವು ಜನರ ಜೀವನವನ್ನು ಸುಧಾರಿಸುವ ಬಯಕೆಯಿಂದ ಮಾಡಲಾಗಿದೆ. ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ನಾವು ಇನ್ನೂ ಹೆಚ್ಚು ಶ್ರಮಿಸುತ್ತೇವೆ ಎಂದು ಅವರು ಟ್ವೀಟ್ ಮಾಡಿದ್ದಾರೆ. 9 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಬಿಜೆಪಿಯು ಇಂದಿನ ವಿಶೇಷ ಸಂಪರ್ಕ ಅಭಿಯಾನವನ್ನು ದೇಶಾದ್ಯಂತ ಕೈಗೊಳ್ಳುತ್ತಿದೆ.

ಕಳೆದ ಒಂಬತ್ತು ವರ್ಷಗಳಲ್ಲಿ ರಾಷ್ಟ್ರವೇ ಮೊದಲು ಎಂಬ ಮಂತ್ರದೊಂದಿಗೆ ದೇಶವು ಪ್ರತಿಯೊಂದು ಕ್ಷೇತ್ರದಲ್ಲೂ ಅಭೂತಪೂರ್ವ ಅಭಿವೃದ್ಧಿಯನ್ನು ಕಂಡಿದೆ ಎಂದು ಬಿಜೆಪಿ ಟ್ವೀಟ್ ಮಾಡಿದೆ. ಸರ್ಕಾರದ ಸರ್ವತೋಮುಖ ಅಭಿವೃದ್ಧಿಯಿಂದಾಗಿ ಪ್ರಪಂಚದಾದ್ಯಂತದ ಪ್ರಮುಖ ಅರ್ಥಶಾಸ್ತ್ರಜ್ಞರು ಮತ್ತು ವಿಶ್ಲೇಷಕರು “21 ನೇ ಶತಮಾನವು ಭಾರತಕ್ಕೆ ಸೇರಿದ್ದು” ಎಂದು ಅಭಿಪ್ರಾಯಪಟ್ಟಿದ್ದಾರೆ ಎಂದು ಬಿಜೆಪಿಯ ತನ್ನ ಟ್ವೀಟ್‌ನಲ್ಲಿ ತಿಳಿಸಿದೆ.

ಈ ಸುದ್ದಿಯನ್ನೂ ಓದಿ: 9 Years of PM Modi: ಮೋದಿ ಸರ್ಕಾರಕ್ಕೆ ಇಂದು 9 ವರ್ಷದ ಸಂಭ್ರಮ; ಪ್ರಮುಖ ಸಾಧನೆ ಏನೇನು?

ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಮೊದಲ ಬಾರಿಗೆ 2014 ಮೇ 26ರಂದು ಪ್ರಮಾಣ ವಚನ ಸ್ವೀಕರಿಸಿದ್ದರು. ಬಳಿಕ ಎರಡನೇ ಬಾರಿಗೆ ಪ್ರಧಾನಿಯಾಗಿ 2019ರ ಮೇ 20ರಂದು ಅಧಿಕಾರದ ಗದ್ದುಗೆಗೆ ಏರಿದ್ದರು. ಮುಂದಿನ ವರ್ಷ ಅಂದರೆ 2024ರಲ್ಲಿ ಮತ್ತೆ ಲೋಕಸಭೆ ಚುನಾವಣೆ ನಡೆಯಲಿದೆ.

ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version