Site icon Vistara News

NIRF Ranking 2023 : ಮೆಡಿಕಲ್‌ ಕಾಲೇಜುಗಳ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ನಿಮಾನ್ಸ್‌ಗೆ 4 ನೇ ಸ್ಥಾನ; ಟಾಪ್‌ ವೈದ್ಯಕೀಯ ಕಾಲೇಜುಗಳಿವು

NIRF Ranking 2023 Nimhans

#image_title

ಬೆಂಗಳೂರು : ನಗರದ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆ (ನಿಮಾನ್ಸ್‌) ಮತ್ತೆ ಬೆಂಗಳೂರಿನ ಹೆಗ್ಗಳಿಕೆಯನ್ನು ಹೆಚ್ಚಿಸಿದೆ. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಸೋಮವಾರ ಬಿಡುಗಡೆ ಮಾಡಿರುವ ರಾಷ್ಟ್ರೀಯ ಸಾಂಸ್ಥಿಕ ರ‍್ಯಾಂಕಿಂಗ್‌ ಚೌಕಟ್ಟಿನ (ಎನ್‌ಐಆರ್‌ಎಫ್‌) ವಾರ್ಷಿಕ ರ‍್ಯಾಂಕಿಂಗ್‌ (NIRF Ranking 2023) ಪಟ್ಟಿಯ ವೈದ್ಯಕೀಯ ರ‍್ಯಾಂಕಿಂಗ್‌ನಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದೆ.

ರಾಜ್ಯದ ವೈದ್ಯಕೀಯ ಕಾಲೇಜುಗಳ (medical colleges) ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ನಿರೀಕ್ಷೆಯಂತೆಯೇ ದಿಲ್ಲಿಯ ಏಮ್ಸ್‌ ಈ ರಾಷ್ಟ್ರೀಯ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಚಂಡೀಗಢದ ಪೋಸ್ಟ್‌ ಗ್ರಾಜ್ಯುವೆಟ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಎಜಿಕೇಷನ್‌ ಆ್ಯಂಡ್‌ ರೀಸರ್ಚ್‌ ಎರಡನೇ ಸ್ಥಾನದಲ್ಲಿದೆ. ತಮಿಳು ನಾಡಿನ ವೆಲ್ಲೂರಿನಲ್ಲಿ ಕ್ರಿಶ್ಚಿನ್‌ ಮೆಡಿಕಲ್‌ ಕಾಲೇಜ್‌ ಮೂರನೇ ಸ್ಥಾನದಲ್ಲಿದೆ. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಾಜ್‌ಕುಮಾರ್‌ ರಾಜನ್‌ ಸಿಂಗ್‌ ಸೋಮವಾರ ವಾರ್ಷಿಕ ರ‍್ಯಾಂಕಿಂಗ್‌ (NIRF Ranking 2023) ಪಟ್ಟಿಯನ್ನು ನವ ದೆಹಲಿಯಲ್ಲಿ ಬಿಡುಗಡೆ ಮಾಡಿದ್ದಾರೆ.

ಮಣಿಪಾಲದ ಕಸ್ತುರ್ಬಾ ಮೆಡಿಕಲ್‌ ಕಾಲೇಜು ಟಾಪ್‌ 10ರ ಪಟ್ಟಿಯಲ್ಲಿದ್ದು, 9ನೇ ಸ್ಥಾನ ಪಡೆದುಕೊಂಡಿದೆ. ಬೆಂಗಳೂರಿ ಸೆಂಟ್‌ ಜಾನ್ಸ್‌ ಮೆಡಿಕಲ್‌ ಕಾಲೇಜು 14 ನೇ ಸ್ಥಾನ ಪಡೆದುಕೊಂಡಿದೆ. ಮೈಸೂರಿನ ಜೆಎಸ್‌ಎಸ್‌ ಮೆಡಿಕಲ್‌ ಕಾಲೇಜು 20ನೇ ಸ್ಥಾನ, ಮಂಗಳೂರಿನ ಕಸ್ತುರ್ಬಾ ಮೆಡಿಕಲ್‌ ಕಾಲೇಜು 21 ಸ್ಥಾನ ಪಡೆದಿವೆ. ಬೆಂಗಳೂರಿನ ಎಂ ಎಸ್‌ ರಾಮಯ್ಯ ಮೆಡಿಕಲ್‌ ಕಾಲೇಜು 30 ನೇ ಸ್ಥಾನದಲ್ಲಿದೆ. ಮಂಗಳೂರಿನ ಕೆ.ಎಸ್‌. ಹೆಗ್ಡೆ ಮೆಡಿಕಲ್‌ ಅಕಾಡೆಮಿ 36ನೇ ಸ್ಥಾನ ಪಡೆದುಕೊಂಡಿದೆ.

ಎನ್‌ಐಆರ್‌ಎಫ್‌ ರ‍್ಯಾಂಕಿಂಗ್‌ ಪ್ರಕಾರ ಟಾಪ್‌ ಕಾಲೇಜುಗಳು;

ಕ್ರಮ ಸಂಖ್ಯೆವೈದ್ಯಕೀಯ ಕಾಲೇಜುಗಳ ಹೆಸರುರಾಷ್ಟ್ರೀಯ ರ‍್ಯಾಂಕಿಂಗ್‌
1ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆ (ನಿಮಾನ್ಸ್‌), ಬೆಂಗಳೂರು4
2ಕಸ್ತುರ್ಬಾ ಮೆಡಿಕಲ್‌ ಕಾಲೇಜು, ಮಣಿಪಾಲ9
3ಸೆಂಟ್‌ ಜಾನ್ಸ್‌ ಮೆಡಿಕಲ್‌ ಕಾಲೇಜು, ಬೆಂಗಳೂರು14
4ಜೆಎಸ್‌ಎಸ್‌ ಮೆಡಿಕಲ್‌ ಕಾಲೇಜು, ಮೈಸೂರು20
5ಕಸ್ತುರ್ಬಾ ಮೆಡಿಕಲ್‌ ಕಾಲೇಜು, ಮಂಗಳೂರು21
6ಎಂ ಎಸ್‌ ರಾಮಯ್ಯ ಮೆಡಿಕಲ್‌ ಕಾಲೇಜು, ಬೆಂಗಳೂರು30
7ಕೆ.ಎಸ್‌. ಹೆಗ್ಡೆ ಮೆಡಿಕಲ್‌ ಅಕಾಡೆಮಿ, ಮಂಗಳೂರು36

ರಾಜ್ಯದ ಎಂಜಿನಿಯರಿಂಗ್‌ ಕಾಲೇಜುಗಳ ಪಟ್ಟಿಯಲ್ಲಿ ಸುರತ್ಕಲ್‌ನ ಎನ್‌ಐಟಿ (National Institute of Technology) ಮೊದಲ ಸ್ಥಾನ ಪಡೆದುಕೊಂಡಿದೆ. ರಾಷ್ಟ್ರೀಯ ಪಟ್ಟಿಯಲ್ಲಿ ಈ ಕಾಲೇಜು 13ನೇ ಸ್ಥಾನದಲ್ಲಿದೆ. ಮಣಿಪಾಲ್‌ನ ಮಣಿಪಾಲ್‌ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ 45ನೇ ಸ್ಥಾನ ಪಡೆದುಕೊಂಡಿದೆ. ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ 55 ನೇ ಸ್ಥಾನ ಪಡೆದುಕೊಂಡಿದೆ. ಬೆಂಗಳೂರಿನ ಎಂ.ಎಸ್‌. ರಾಮಯ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ 59ನೇ ಸ್ಥಾನದಲ್ಲಿದ್ದರೆ, ಬೆಂಗಳೂರಿನ ಇಂಟರ್‌ನ್ಯಾಷನಲ್‌ ಇನ್‌ಸ್ಟಿಟ್ಯೂಟ್ ಆಫ್ ಇನ್‌ಫಾರ್ಮೆಷನ್‌ ಟೆಕ್ನಾಲಜಿ 62 ಸ್ಥಾನ ಪಡೆದುಕೊಂಡಿದೆ. ಬೆಂಗಳೂರಿನ ಆರ್‌ವಿ ಎಂಜಿನಿಯರಿಂಗ್‌ ಕಾಲೇಜು 70 ನೇ ಸ್ಥಾನದಲ್ಲಿದೆ. ಬಿಎಂಎಸ್‌ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ 73, ತುಮಕೂರಿನ ಸಿದ್ಧಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ 91, ಬೆಂಗಳೂರಿನ ಪಿಇಎಸ್‌ ಯೂನಿರ್ವಸಿಟಿ 93 ನೇ ಸ್ಥಾನ ಪಡೆದುಕೊಂಡಿವೆ.

ಒಟ್ಟಾರೆ ದೇಶದ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc) (ಭಾರತೀಯ ವಿಜ್ಞಾನ ಸಂಸ್ಥೆ) ಎರಡನೇ ಸ್ಥಾನ ಪಡೆದುಕೊಂಡಿದೆ. ಇಂಡಿಯನ್‌ ಇನ್ಸ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ (ಐಐಟಿ) ಮದ್ರಾಸ್‌ ಮೊದಲ ಸ್ಥಾನ ಪಡೆದುಕೊಂಡಿದೆ. ರಾಜ್ಯದ ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಷನ್‌ 14 ಸ್ಥಾನ ಪಡೆದುಕೊಂಡಿದ್ದರೆ, ಸುರತ್ಕಲ್‌ನ ಎನ್‌ಐಟಿ 33 ಸ್ಥಾನ ಪಡೆದುಕೊಂಡಿದೆ. ಕಳೆದ ವರ್ಷ 33 ಸ್ಥಾನ ಪಡೆದುಕೊಂಡಿದ್ದ ಮೈಸೂರು ವಿಶ್ವವಿದ್ಯಾಲಯ ಈ ಬಾರಿ 47 ಸ್ಥಾನಕ್ಕೆ ಕುಸಿದಿದೆ. ಮೈಸೂರಿನ ಜೆಎಸ್‌ಎಸ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಷನ್‌ ಆ್ಯಂಡ್‌ ರೀಸರ್ಚ್‌ 54 ಸ್ಥಾನ ಪಡೆದುಕೊಂಡಿದೆ.

ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ (Click Here) ಕ್ಲಿಕ್‌ ಮಾಡಿ.

ಬೆಸ್ಟ್‌ ವಿವಿಗಳ ಪಟ್ಟಿಯಲ್ಲಿ ಐಐಎಸ್‌ಸಿ ಫಸ್ಟ್‌

ಎನ್‌ಐಆರ್‌ಎಫ್‌ ವಿವಿಗಳ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ಸೈನ್ಸ್‌ ಎಂದಿನಂತೆ ಮೊದಲ ಸ್ಥಾನ ಪಡೆದುಕೊಂಡಿದೆ. ರಾಜ್ಯದ ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಷನ್‌ 8ನೇ ಸ್ಥಾನದಲ್ಲಿದೆ. ಮೈಸೂರು ವಿವಿ 27ನೇ ಸ್ಥಾನ ಪಡೆದುಕೊಂಡಿದೆ. ಮೈಸೂರಿನ ಜೆಎಸ್‌ಎಸ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಷನ್‌ ಆ್ಯಂಡ್‌ ರೀಸರ್ಚ್‌ 33 ಸ್ಥಾನದಲ್ಲಿದ್ದರೆ, ಬೆಂಗಳೂರು ವಿವಿ 68, ಬೆಳಗಾವಿಯ ಕೆಎಲ್‌ಇ ಅಕಾಡೆಮಿ ಆಫ್‌ ಹೈಯರ್‌ ಎಜುಕೇಷನ್‌ ಆ್ಯಂಡ್‌ ರಿಸರ್ಚ್‌ 70, ಕುವೆಂಪು ವಿವಿ 73, ಮಂಗಳೂರಿನ ಎನ್‌ಐಟಿಟಿಇ 74, ವಿಶ್ವೇಶ್ವರಯ್ಯ ತಾಂತ್ರಿಕ ವಿವಿ 80, ಬೆಂಗಳೂರಿನ ಜೈನ್‌ ವಿವಿ 85, ಮಂಗಳೂರಿನ ಯಾನೆಪೋಯ ವಿವಿ 86 ನೇ ಸ್ಥಾನ ಪಡೆದುಕೊಂಡಿವೆ.

ಈ ಬಾರಿ ದೇಶದ 8,686 ಶಿಕ್ಷಣ ಸಂಸ್ಥೆಗಳು ಈ ರ‍್ಯಾಂಕಿಂಗ್‌ ಪೈಪೋಟಿಯಲ್ಲಿ ಭಾಗಿಯಾಗಿದ್ದವು. ಒಟ್ಟು 12 ವಿಭಾಗಗಳಲ್ಲಿ ರ‍್ಯಾಂಕಿಂಗ್‌ ನೀಡಲಾಗಿದೆ.

ಇದನ್ನೂ ಓದಿ : NIRF Ranking 2023 : ರಾಜ್ಯದ ಬೆಸ್ಟ್‌ ಎಂಜಿನಿಯರಿಂಗ್‌ ಕಾಲೇಜುಗಳ ಪಟ್ಟಿ ಪ್ರಕಟ; ಇವು ಟಾಪ್‌ 10 ಕಾಲೇಜುಗಳು!

Exit mobile version