ನವ ದೆಹಲಿ: ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc) (ಭಾರತೀಯ ವಿಜ್ಞಾನ ಸಂಸ್ಥೆ) ದೇಶದ ಎರಡನೇ ಅತ್ಯುತ್ತಮ ಶಿಕ್ಷಣ ಸಂಸ್ಥೆ ಎಂಬ ಹಿರಿಮೆಗೆ (NIRF Ranking 2023) ಪಾತ್ರವಾಗಿದೆ. ಕಳೆದ ಕೆಲವು ವರ್ಷಗಳಿಂದ ಮೊದಲ ಸ್ಥಾನದಲ್ಲಿದ್ದ ಈ ಶಿಕ್ಷಣ ಸಂಸ್ಥೆ ಈ ಬಾರಿ ಎರಡನೇ ಸ್ಥಾನ ಪಡೆದುಕೊಂಡಿದ್ದು, ಇಂಡಿಯನ್ ಇನ್ಸ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಮದ್ರಾಸ್ ಮೊದಲ ಸ್ಥಾನ ಪಡೆದುಕೊಂಡಿದೆ.
ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಾಜ್‌ಕುಮಾರ್ ರಾಜನ್ ಸಿಂಗ್ ಸೋಮವಾರ ರಾಷ್ಟ್ರೀಯ ಸಾಂಸ್ಥಿಕ ರ‍್ಯಾಂಕಿಂಗ್ ಚೌಕಟ್ಟಿನ (ಎನ್‌ಐಆರ್‌ಎಫ್) ವಾರ್ಷಿಕ ರ‍್ಯಾಂಕಿಂಗ್ (NIRF Ranking 2023) ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ದೇಶದ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ದೆಹಲಿ ಐಐಟಿ ಪಡೆದುಕೊಂಡಿದೆ.
IIT Madras ranked best institution followed by IISC Bengaluru and IIT Delhi as per the NIRF Ranking released by the Union Ministry of Education pic.twitter.com/yAKN3uVnuU
— ANI (@ANI) June 5, 2023
ದೇಶದ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ 16 ಸ್ಥಾನ ಪಡೆದುಕೊಂಡಿದ್ದರೆ, ಸುರತ್ಕಲ್‌ನ ಎನ್‌ಐಟಿ 38 ಸ್ಥಾನ ಪಡೆದುಕೊಂಡಿದೆ. ಕಳೆದ ವರ್ಷ 33 ಸ್ಥಾನ ಪಡೆದುಕೊಂಡಿದ್ದ ಮೈಸೂರು ವಿಶ್ವವಿದ್ಯಾಲಯ ಈ ಬಾರಿ 71 ಸ್ಥಾನಕ್ಕೆ ಕುಸಿದಿದೆ. ಮೈಸೂರಿನ ಜೆಎಸ್‌ಎಸ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಆ್ಯಂಡ್ ರೀಸರ್ಚ್ 55 ಸ್ಥಾನ ಪಡೆದುಕೊಂಡಿದೆ.
ಕಾನೂನು ಸಂಶೋಧನೆಯಲ್ಲಿ ಬೆಂಗಳೂರು ಫಸ್ಟ್
ಎನ್‌ಐಆರ್‌ಎಫ್ ಕಾನೂನು ರ‍್ಯಾಂಕಿಂಗ್‌ನಲ್ಲಿ ಬೆಂಗಳೂರಿನ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ಮೊದಲ ಸ್ಥಾನ ಪಡೆದುಕೊಂಡಿದೆ. ಸಂಶೋಧನಾ ರ‍್ಯಾಂಕಿಂಗ್‌ನಲ್ಲಿ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ಮೊದಲ ಸ್ಥಾನವನ್ನು ಕಾಪಾಡಿಕೊಂಡಿದೆ.
ಬೆಸ್ಟ್ ವಿವಿಗಳ ಪಟ್ಟಿಯಲ್ಲಿ ಐಐಎಸ್‌ಸಿ ಫಸ್ಟ್
ಎನ್‌ಐಆರ್‌ಎಫ್ ವಿವಿಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ಸೈನ್ಸ್ ಎಂದಿನಂತೆ ಮೊದಲ ಸ್ಥಾನ ಪಡೆದುಕೊಂಡಿದೆ. ರಾಜ್ಯದ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ 8ನೇ ಸ್ಥಾನದಲ್ಲಿದೆ. ಮೈಸೂರು ವಿವಿ 27ನೇ ಸ್ಥಾನ ಪಡೆದುಕೊಂಡಿದೆ. ಮೈಸೂರಿನ ಜೆಎಸ್‌ಎಸ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಆ್ಯಂಡ್ ರೀಸರ್ಚ್ 33 ಸ್ಥಾನದಲ್ಲಿದ್ದರೆ, ಬೆಂಗಳೂರು ವಿವಿ 68, ಬೆಳಗಾವಿಯ ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಆ್ಯಂಡ್ ರಿಸರ್ಚ್ 70, ಕುವೆಂಪು ವಿವಿ 73, ಮಂಗಳೂರಿನ ಎನ್‌ಐಟಿಟಿಇ 74, ವಿಶ್ವೇಶ್ವರಯ್ಯ ತಾಂತ್ರಿಕ ವಿವಿ 80, ಬೆಂಗಳೂರಿನ ಜೈನ್ ವಿವಿ 85, ಮಂಗಳೂರಿನ ಯಾನೆಪೋಯ ವಿವಿ 86 ನೇ ಸ್ಥಾನ ಪಡೆದುಕೊಂಡಿವೆ.
ಮ್ಯಾನೇಜ್‌ಮೆಂಟ್ ರ‍್ಯಾಂಕಿಂಗ್‌ನಲ್ಲಿ ಬೆಂಗಳೂರು ಐಐಎಂಗೆ ಸೆಕೆಂಡ್
ಎನ್‌ಐಆರ್‌ಎಫ್ ಮ್ಯಾನೇಜ್‌ಮೆಂಟ್ (ಬಿಸ್ಕೂಲ್) ರ‍್ಯಾಂಕಿಂಗ್‌ನಲ್ಲಿ ಬೆಂಗಳೂರು ಐಐಎಂ ಎರಡನೇ ಸ್ಥಾನ ಪಡೆದುಕೊಂಡಿದೆ. ಅಲಹಾಬಾದ್ ಐಐಎಂ ಮೊದಲ ಸ್ಥಾನ ಪಡೆದುಕೊಂಡಿದೆ.
ದೇಶದ ಅತ್ಯುತ್ತಮ ಡೆಂಟಲ್ ಕಾಲೇಜುಗಳ ಪಟ್ಟಿಯಲ್ಲಿ ಮಣಿಪಾಲದ ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸೈನ್ಸ್ ಎರಡನೇ ಸ್ಥಾನ ಪಡೆದುಕೊಂಡಿದ್ದರೆ, ಮಂಗಳೂರಿನ ಎ.ಬಿ.ಶೆಟ್ಟಿ ಮೆಮೋರಿಯಲ್ ಇನ್ಸ್‌ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್ ಐದನೇ ಸ್ಥಾನ ಪಡೆದುಕೊಂಡಿದೆ. ಮಂಗಳೂರಿನ ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸೈನ್ಸ್ 8 ನೇ ಸ್ಥಾನದಲ್ಲಿವೆ. ಒಟ್ಟು ಮೂರು ಕಾಲೇಜುಗಳು ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ (Click Here) ಕ್ಲಿಕ್ ಮಾಡಿ.
ಈ ಬಾರಿ ದೇಶದ 8,686 ಶಿಕ್ಷಣ ಸಂಸ್ಥೆಗಳು ಈ ರ‍್ಯಾಂಕಿಂಗ್ ಪೈಪೋಟಿಯಲ್ಲಿ ಭಾಗಿಯಾಗಿದ್ದವು. ಒಟ್ಟು 12 ವಿಭಾಗಗಳಲ್ಲಿ ರ‍್ಯಾಂಕಿಂಗ್ ನೀಡಲಾಗಿದೆ.
ಇದನ್ನೂ ಓದಿ : ಒಡಿಶಾ ರೈಲು ದುರಂತದಲ್ಲಿ ಮಡಿದವರಿಗೆ ಮಿಡಿದ ಸೆಹ್ವಾಗ್, ಸಂತ್ರಸ್ತರ ಮಕ್ಕಳಿಗೆ ಶಿಕ್ಷಣ ಕೊಡಿಸುವ ಭರವಸೆ