Site icon Vistara News

Maternity Leave: ಖಾಸಗಿ, ಸರ್ಕಾರಿ ಉದ್ಯೋಗಿಗಳಿಗೆ 9 ತಿಂಗಳವರೆಗೆ ಹೆರಿಗೆ ರಜೆ ಅಗತ್ಯ ಎಂದ ನೀತಿ ಆಯೋಗ ಸದಸ್ಯ

NITI Aayog member said tha, Maternity leave should increase up to 9 months

ನವದೆಹಲಿ: ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಹೆರಿಗೆ ರಜೆ (Maternity Leave) ನೀತಿ ಒಂದೇ ತೆರನಾಗಿಲ್ಲ. ಹಾಗಾಗಿ, ಎರಡೂ ವಲಯಗಳಲ್ಲಿ ಹೆರಿಗೆ ರಜೆಯನ್ನು 9 ತಿಂಗಳವರೆಗೆ ವಿಸ್ತರಿಸುವ ಅಗತ್ಯವಿದೆ ಎಂದು ನೀತಿ ಆಯೋಗವು ಪ್ರತಿಪಾದಿಸಿದೆ. ನೀತಿ ಆಯೋಗದ (NITI Aayog) ಸದಸ್ಯ ವಿ ಕೆ ಪೌಲ್ (VK Paul) ಅವರು ಈ ಬಗ್ಗೆ ಮಾತನಾಡಿದ್ದು, ಸಾರ್ವಜನಿಕ ಮತ್ತು ಖಾಸಗಿ ಕಂಪನಿಗಳು ತಮ್ಮ ಉದ್ಯೋಗಿಗಳ ಹೆರಿಗೆ ರಜೆಯನ್ನು ಗರಿಷ್ಠ 9 ತಿಂಗಳವರೆಗೆ ವಿಸ್ತರಿಸುವ ಬಗ್ಗೆ ಚಿಂತನೆ ನಡೆಸಬೇಕು ಎಂದು ಹೇಳಿದ್ದಾರೆ.

ಭಾರತ ಸರ್ಕಾರವು 2016ರಲ್ಲಿ ಹೆರಿಗೆ ರಜೆ ಪ್ರಯೋಜನ ಕಾಯ್ದೆಯನ್ನು ಜಾರಿಗೆ ತಂದು, 12 ವಾರಗಳವರೆಗೆ ಇದ್ದ ವೇತನ ಸಹಿತ ರಜೆಯನ್ನು 25 ವಾರಗಳಿಗೆ ವಿಸ್ತರಿಸಿದೆ. ಭಾರತೀಯ ಹೆರಿಗೆ ಪ್ರಯೋಜನ ಕಾಯಿದೆಯು ಹೊಸ ತಾಯಂದಿರು ತಮ್ಮ ಮೊದಲ ಎರಡು ಮಕ್ಕಳಿಗೆ ಆರು ತಿಂಗಳು ಅಥವಾ 26 ವಾರಗಳ ವೇತನ ಸಹಿತ ರಜೆಯನ್ನು ತೆಗೆದುಕೊಳ್ಳಲು ಅರ್ಹರಾಗಿರುತ್ತಾರೆ. ಪ್ರತಿ ನಂತರದ ಮಗುವಿಗೆ, ತಾಯಿ ಮೂರು ತಿಂಗಳು ಅಥವಾ 12 ವಾರಗಳ ರಜೆಯನ್ನು ತೆಗೆದುಕೊಳ್ಳಬಹುದು, ಅದನ್ನು ಉದ್ಯೋಗದಾತರು ಸಂಪೂರ್ಣವಾಗಿ ವೇತನವನ್ನು ಪಾವತಿಸಬೇಕಾಗುತ್ತದೆ.

ಫಿಕ್ಕಿ(ಎಫ್‌ಐಸಿಸಿಐ) ಮಹಿಳಾ ಸಂಘಟನೆ(ಎಫ್ಎಲ್ಒ)ಯು ನೀತಿ ಆಯೋಗದ ಸದಸ್ಯ ವಿ ಕೆ ಪೌಲ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಪ್ರತಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದು, ಖಾಸಗಿ ಮತ್ತು ಸಾರ್ವಜನಿಕ ವಲಯುವು ಹೆರಿಗೆ ರಜೆಯನ್ನು 6 ತಿಂಗಳಿಂದ 9 ತಿಂಗಳವರೆಗೆ ವಿಸ್ತರಿಸುವ ಬಗ್ಗೆ ಯೋಚಿಸಬೇಕು ಎಂದು ಹೇಳಿದೆ.

ಖಾಸಗಿ ವಲಯವು ಮಕ್ಕಳ ಸಮಗ್ರ ಆರೈಕೆಯನ್ನು ವಿನ್ಯಾಸಗೊಳಿಸಲು ನೀತಿ ಆಯೋಗಕ್ಕೆ ಸಹಾಯ ಮಾಡಬೇಕೆಂದು ಪೌಲ್ ಹೇಳಿದ್ದಾರೆ. ಉತ್ತಮ ಪಾಲನೆಗಾಗಿ ಮಕ್ಕಳಿಗೆ ಹೆಚ್ಚಿನ ಶಿಶುವಿಹಾರಗಳನ್ನು ತೆರೆಯುವ ಜೊತೆಗೆ ಹಿರಿಯರ ಆರೈಕೆ ಕೈಗೊಳ್ಳಬೇಕಾದ ಅಗತ್ಯವಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಭವಿಷ್ಯದಲ್ಲಿ ಲಕ್ಷಾಂತರ ಆರೈಕೆ ಮಾಡುವ ಕೆಲಸಗಾರರು ಬೇಕಾಗುತ್ತಾರೆ. ಹಾಗಾಗಿ, ಸಾಫ್ಟ್ ಮತ್ತು ಹಾರ್ಡ್ ಕೌಶಲಗಳನ್ನು ಒದಗಿಸುವ ವ್ಯವಸ್ಥಿತ ತರಬೇತಿ ವ್ಯವಸ್ಥೆಯನ್ನು ರೂಪಿಸಬೇಕಾದ ಅಗತ್ಯವಿದೆ ಎಂಬ ಪೌಲ್ ಹೇಳಿಕೆಯನ್ನು ಉಲ್ಲೇಖಿಸಲಾಗಿದೆ.

ಫಿಕ್ಕಿಯ ಲೇಡೀಸ್ ಆರ್ಗನೈಸೇಶನ್ (FLO) ಅಧ್ಯಕ್ಷೆ ಸುಧಾ ಶಿವಕುಮಾರ್, ಜಾಗತಿಕ ಆರೈಕೆ ಆರ್ಥಿಕತೆ, ಮಕ್ಕಳ ಆರೈಕೆ, ಹಿರಿಯ ಆರೈಕೆ ಮತ್ತು ಮನೆಕೆಲಸಗಳಂತಹ ಆರೈಕೆಗೆ ಸಂಬಂಧಿಸಿದ ಪಾವತಿಸಿದ ಮತ್ತು ಪಾವತಿಸದ ಕಾರ್ಮಿಕರು ಆರ್ಥಿಕ ಬೆಳವಣಿಗೆ, ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣವನ್ನು ಹೆಚ್ಚಿಸುವ ನಿರ್ಣಾಯಕ ಕ್ಷೇತ್ರವಾಗಿದೆ. ಆರೈಕೆ ಕೆಲಸವು ಆರ್ಥಿಕವಾಗಿ ಕಾರ್ಯಸಾಧುವಾಗಿದ್ದರೂ ಜಾಗತಿಕವಾಗಿ ಕಡಿಮೆ ಮೌಲ್ಯಯುತವಾಗಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: Women’s Day 2023 : ರಜೆ ಬೇಕೇ, ಬೇಡವೇ ನಡುವೆ ‘ಮುಟ್ಟಿನ ಲಾಭದ ವಿಧೇಯಕ’ವೂ ಚರ್ಚೆಯಾಗಲಿ

ಭಾರತದಲ್ಲಿ, ಆರೈಕೆ ಆರ್ಥಿಕ ಕಾರ್ಮಿಕರನ್ನು ಸರಿಯಾಗಿ ಗುರುತಿಸಲು ನಮಗೆ ವ್ಯವಸ್ಥೆ ಇಲ್ಲದಿರುವುದು ದೊಡ್ಡ ಕೊರತೆಯಾಗಿದೆ. ಇತರ ರಾಷ್ಟ್ರಗಳಿಗೆ ಹೋಲಿಸಿದರೆ, ಆರೈಕೆ ಆರ್ಥಿಕತೆಯ ಮೇಲೆ ಭಾರತದ ಸಾರ್ವಜನಿಕ ಖರ್ಚು ತೀರಾ ಕಡಿಮೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version