ಪಾಟ್ನಾ: ಕಾಂಗ್ರೆಸ್ಗೆ ಇಂಡಿಯಾ ಬ್ಲಾಕ್ ಮೈತ್ರಿಗಿಂತ (India Bloc) ಚುನಾವಣೆಯಲ್ಲಿ ಹೆಚ್ಚು ಆಸಕ್ತಿ ಇದೆ ಎಂದು ಹೇಳುವ ಮೂಲಕ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಗುರುವಾರ ಹೇಳಿದ್ದಾರೆ. ಈ ಮೂಲಕ ಅವರು ಆಡಳಿತಾರೂಢ ಬಿಜೆಪಿಗೆ ಪ್ರತಿಪಕ್ಷಗಳ ಒಕ್ಕೂಟದ ವಿರುದ್ಧ ದಾಳಿ ಮಾಡಲು ಹೊಸ ಅಸ್ತ್ರ ನೀಡಿದ್ದಾರೆ. ಪಾಟ್ನಾದಲ್ಲಿ ಮಾತನಾಡಿದ ನಿತೀಶ್ ಕುಮಾರ್ 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಅಲೆಯನ್ನು ಎದುರಿಸಲು ರಚಿಸಲಾದ 28 ಪಕ್ಷಗಳ ಬಣವಾದ ಮೈತ್ರಿಕೂಟದಿಂದ “ಹೆಚ್ಚಿನದೇನೂ ನಡೆಯುತ್ತಿಲ್ಲ” ಎಂದು ಹೇಳಿಕೆ ನೀಡಿದ್ದಾರೆ. ಈ ಮೂಲಕ ಇಂಡಿಯಾ ಬ್ಲಾಕ್ ಚುನಾವಣೆಗೆ ಮೊದಲೇ ಪೀಸ್ಪೀಸ್ ಆಗುವ ಸೂಚನೆ ಕೊಟ್ಟಿದ್ದಾರೆ.
ನಾವು ಎಲ್ಲಾ ಪಕ್ಷಗಳೊಂದಿಗೆ ಮಾತನಾಡಿದ್ದೇವೆ, ದೇಶದ ಇತಿಹಾಸವನ್ನು ಬದಲಾಯಿಸಲು ಪ್ರಯತ್ನಿಸುತ್ತಿರುವವರಿಂದ ದೇಶವನ್ನು ರಕ್ಷಿಸಲು ಒಗ್ಗೂಡುವಂತೆ ಒತ್ತಾಯಿಸಿದ್ದೇವೆ. ಇದಕ್ಕಾಗಿ ಪಾಟ್ನಾ ಮತ್ತು ಇತರ ಕಡೆಗಳಲ್ಲಿ ಸಭೆಗಳನ್ನು ನಡೆಸಲಾಗಿದೆ. ಇಂಡಿಯಾ ಅಲೈಯನ್ಸ್ ರಚಿಸಲಾಗಿದೆ. ಆದರೆ ಅದರಿಂದ ಹೆಚ್ಚಿನದೇನೂ ನಡೆಯುತ್ತಿಲ್ಲ. 5 ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ಇದೆ. ಕಾಂಗ್ರೆಸ್ ಪಕ್ಷವು ಹೆಚ್ಚು ಗಳಿಸುವುದರಲ್ಲಿಯೇ ಆಸಕ್ತಿ ಹೊಂದಿದೆ. ಕಾಂಗ್ರೆಸ್ ಪಕ್ಷಕ್ಕೆ ನೇತೃತ್ವ ನೀಡಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಆದರೆ ಅವರು ಈಗ ಈ ಎಲ್ಲದರ ಬಗ್ಗೆ ಚಿಂತಿಸುತ್ತಿಲ್ಲ. ಅವರು ಇದೀಗ ಐದು ರಾಜ್ಯಗಳ ಚುನಾವಣೆಯಲ್ಲಿ ಬ್ಯುಸಿಯಾಗಿದ್ದಾರೆ. ಆದ್ದರಿಂದ, 5 ರಾಜ್ಯಗಳ ಚುನಾವಣೆಯ ನಂತರ ಅವರು ಸ್ವತಃ ಎಲ್ಲರನ್ನೂ ಕರೆಯಬೇಕಾಗುತ್ತದೆ ಎಂದು ಕುಮಾರ್ ಸಾರ್ವಜನಿಕ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಾ ಹೇಳಿದ್ದಾರೆ.
ವಿರೋಧಭಾಸದ ಬಳಗ ಎಂದ ಬಿಜೆಪಿ
ಇದಕ್ಕೆ ಪೂರಕವಾಗಿ ಬಿಜೆಯು ಇಂಡಿಯಾ ಬಣವನ್ನು ತರಾಟೆಗೆ ತೆಗೆದುಕೊಂಡಿದ್ದು, ‘ತುಕ್ಡೆ-ತುಕ್ಡೆ’ ಮೈತ್ರಿ (ಛಿದ್ರಗೊಂಡಿರುವ ಮೈತ್ರಿ) ಎಂದು ಕರೆದಿದೆ. ಈ ಒಕ್ಕೂಟಕ್ಕೆ ದೂರದೃಷ್ಟಿ ಅಥವಾ ಧ್ಯೇಯವಿಲ್ಲ ಎಂದು ಹೇಳಿದೆ.
“ಈ ಮೈತ್ರಿ ವಾಸ್ತವವಾಗಿ ‘ತುಕ್ಡೆ-ತುಕ್ಡೆ’ ಮೈತ್ರಿಯಾಗಿದೆ. ರಾಹುಲ್ ಗಾಂಧಿ ಇಂಡಿ ಜೋಡೋ ಯಾತ್ರೆ ನಡೆಸಬೇಕೇ ಹೊರತು ಭಾರತ್ ಜೋಡೋ ಯಾತ್ರೆಯಲ್ಲ. ಮಧ್ಯಪ್ರದೇಶದಲ್ಲಿ ಎಸ್ಪಿ ವಿರುದ್ಧ ಕಾಂಗ್ರೆಸ್ ಚುನಾವಣೆಗೆ ನಿಂತಿದೆ. ಇಂದು ಬಿಹಾರ ಸಿಎಂ ನಿತೀಶ್ ಕುಮಾರ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾಋಎ. ಅದಕ್ಕೂ ಮೊದಲು ದೆಹಲಿಯಿಂದ ಪಂಜಾಬ್ನಲ್ಲಿ ಎಎಪಿ ವರ್ಸಸ್ ಕಾಂಗ್ರೆಸ್ ಆಘಿದೆ. ಪಶ್ಚಿಮ ಬಂಗಾಳದಲ್ಲಿ ಅಧೀರ್ ರಂಜನ್ ಚೌಧರಿ ವರ್ಸಸ್ ಮಮತಾ ಎನಿಸಿಕೊಂಡಿದೆ. ಕೇರಳದಲ್ಲಿ ಕಾಂಗ್ರೆಸ್ ಮತ್ತು ಎಡಪಕ್ಷಗಳ ನಡುವೆ ಸ್ಪರ್ಧೆ ನಡೆಯುತ್ತಿದೆ. ಇದರರ್ಥ ಈ ಮೈತ್ರಿಗೆ ಯಾವುದೇ ಧ್ಯೇಯ ಅಥವಾ ದೂರದೃಷ್ಟಿ ಇಲ್ಲ. ಈ ಮೈತ್ರಿಯು ಪರಸ್ಪರರ ವಿರುದ್ಧ ವಿರೋಧಾಭಾಸಗಳು. ಗೊಂದಲ, ಭ್ರಷ್ಟಾಚಾರ, ಮಹತ್ವಾಕಾಂಕ್ಷೆ ಮತ್ತು ಹತಾಶೆಯನ್ನು ಹೊಂದಿದೆ. . ಅದಕ್ಕಾಗಿಯೇ ಅವರು ಪರಸ್ಪರ ನಿಂದಿಸುತ್ತಾರೆ” ಎಂದು ಬಿಜೆಪಿ ಮುಖಂಡ ಶೆಹಜಾದ್ ಪೂನಾವಾಲಾ ಹೇಳಿದರು.
ಇದನ್ನೂ ಓದಿ: Akhilesh Yadav : ಎಸ್ಪಿಗೆ 65 ಸ್ಥಾನ, ಮಿತ್ರಪಕ್ಷಗಳಿಗೆ ಉಳಿದ 15 ಕ್ಷೇತ್ರ ಎಂದ ಅಖಿಲೇಶ್!
ಮಧ್ಯಪ್ರದೇಶದಲ್ಲಿ ಸೀಟು ಹಂಚಿಕೆ ಕುರಿತು ಎನ್ಡಿಎ ಮಿತ್ರಪಕ್ಷಗಳಾದ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ನಡುವೆ ಸಾರ್ವಜನಿಕ ವಾಗ್ವಾದ ನಡೆದ ಕೆಲವೇ ದಿನಗಳಲ್ಲಿ ನಿತೀಶ್ ಕುಮಾರ್ ಈ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ 144 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಎಸ್ಪಿ ಹೆಸರಿಲ್ಲ. ಭಾರತ ಮೈತ್ರಿಕೂಟವು ರಾಷ್ಟ್ರ ರಾಜಕಾರಣಕ್ಕಾಗಿ ಮಾತ್ರ ಎಂದು ಪಕ್ಷವು ನಂತರ ಹೇಳಿದೆ. ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಈ ಹೇಳಿಕೆಯನ್ನು “ದ್ರೋಹ” ಎಂದು ಕರೆದಿದ್ದಾರೆ.
ಆರ್ಜೆಡಿ ವಿರುದ್ಧವೂ ಬೇಸರ
ಬುಧವಾರ, ಮಿತ್ರಪಕ್ಷಗಳಾದ ಜೆಡಿಯು ಮತ್ತು ಆರ್ಜೆಡಿ ನಡುವಿನ ಅಸಮಾಧಾನವನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿದ ನಿತೀಶ್ ಕುಮಾರ್, 2005ರಲ್ಲಿ ತಾವು ಮುಖ್ಯಮಂತ್ರಿಯಾದಾಗಿನಿಂದ ಬಿಹಾರದ ವಿದ್ಯುತ್ ಪೂರೈಕೆ ಪರಿಸ್ಥಿತಿ ಮತ್ತು 2005ಕ್ಕಿಂತ ಮೊದಲು ಲಾಲು ಪ್ರಸಾದ್ ಯಾದವ್ ಅವರ ಆಡಳಿತದ ನಡುವೆ ಹೋಲಿಕೆ ಮಾಡಿದರು.
ಪಾಟ್ನಾದಲ್ಲಿ ನಡೆದ ಬಿಹಾರ ರಾಜ್ಯ ವಿದ್ಯುತ್ ಹೋಲ್ಡಿಂಗ್ ಕಂಪನಿ ಲಿಮಿಟೆಡ್ (ಬಿಎಸ್ಪಿಎಚ್ಸಿಎಲ್) ನ 11 ನೇ ಸಂಸ್ಥಾಪನಾ ದಿನದ ಅಂಗವಾಗಿ ನಡೆದ ಸಮಾರಂಭದಲ್ಲಿ ಮಾತನಾಡಿದ ನಿತೀಶ್ ಕುಮಾರ್, “20 ವರ್ಷಗಳ ಹಿಂದೆ ವಿದ್ಯುತ್ ಸರಬರಾಜಿನ ಸ್ಥಿತಿ ಹೇಗಿತ್ತು, ನಿಮಗೆ ನೆನಪಿದೆಯೇ?” ಎಂದು ಕೇಳುವ ಮೂಲಕ ಆರ್ಜೆಡಿಯ ಆಡಳಿತವನ್ನು ಹೋಲಿಕೆ ಮಾಡಿದ್ದರು.
ಕಳೆದ ತಿಂಗಳು ಕಾರ್ಯಕ್ರಮವೊಂದರಲ್ಲಿ ನಿತೀಶ್ ಕುಮಾರ್ ಅವರು ಬಿಜೆಪಿ ನಾಯಕ ರಾಧಾ ಮೋಹನ್ ಸಿಂಗ್ ಅವರನ್ನು ತಮ್ಮ ಸ್ನೇಹಿತ ಎಂದು ಕರೆದಿದ್ದರು. ನಾಯಕನ ಕಡೆಗೆ ಬೆರಳು ತೋರಿಸುತ್ತಾ, ಇಲ್ಲಿರುವವರೆಲ್ಲರೂ ನಮ್ಮ ಸ್ನೇಹಿತರು. ನಾವು ಬೇರೆ, ನೀವು ಬೇರೆ, ನಮ್ಮ ಸ್ನೇಹ ಕೊನೆಗೊಳ್ಳುತ್ತದೆ ಎಂದರ್ಥವೇ? ನಾನು ಬದುಕಿರುವವರೆಗೂ ನೀವು ನನ್ನೊಂದಿಗೆ ಸಂಪರ್ಕದಲ್ಲಿರುತ್ತೀರಿ ಎಂದಿದ್ದು.