Site icon Vistara News

NMML Renamed: ‘ನೆಹರು’ ಬದಲಿಗೆ ‘ಪಿಎಂ’! ಕಾಂಗ್ರೆಸ್-ಬಿಜೆಪಿ ಮಧ್ಯೆ ‘P’ ಜಟಾಪಟಿ!

neh

ನವದೆಹಲಿ: ನೆಹರು ಸ್ಮಾರಕ ವಸ್ತುಸಂಗ್ರಾಹಲಯ ಮತ್ತು ಗ್ರಂಥಾಲಯ (Nehru Memorial Museum and Library – NMML)ವನ್ನು ಅಧಿಕೃತವಾಗಿ ಪಿಎಂ ಸ್ಮಾರಕ ವಸ್ತುಸಂಗ್ರಾಹಲಯ ಮತ್ತು ಗ್ರಂಥಾಲಯ ಎಂದು ಮರುನಾಮಕರಣ ಮಾಡಲಾಗಿದೆ. ಈ ಮಧ್ಯೆ, ಕಾಂಗ್ರೆಸ್ (Congress Party) ಮತ್ತು ಬಿಜೆಪಿಗಳೆರಡೂ (Bhartiya Janata Party -BJP) ಈ ಮರುನಾಮಕರಣಕ್ಕೆ ಸಂಬಂಧಿಸಿದಂತೆ ಕೆಸರೆರಚಾಟದಲ್ಲಿ ತೊಡಗಿವೆ. ದೇಶದ ಮೊದಲ ಪ್ರಧಾನಿ ಪಂಡಿತ ಜವಾಹರ್ ಲಾಲ್ ನೆಹರು (Pandit Jawahar Lal Nehru) ಅವರು ಪರಂಪರೆಯನ್ನು ಅಳಿಸುವ ಹಾಕುವ ದುರುದ್ದೇಶ ಈ ಮರುನಾಮಕರಣದ ಹಿಂದೆ ಇದೆ ಎಂದು ಕಾಂಗ್ರೆಸ್ ಉಗ್ರವಾಗಿ ಟೀಕಿಸಿದೆ. ಬಿಜೆಪಿ ಕೂಡ ಪ್ರತಿ ದಾಳಿ ನಡೆಸಿ, ವಂಶಪಾರಂಪರ್ಯಕ್ಕೆ (Parivarvad) ಅವಕಾಶ ಎಂದು ಹೇಳಿದೆ(NMML Renamed).

ಕೇಂದ್ರ ದಿಲ್ಲಿಯ ತೀನ್ ಮೂರ್ತಿ ಮಾರ್ಗದಲ್ಲಿ ನೆಹರು ಮೆಮೋರಿಯಲ್ ಮ್ಯೂಸಿಯಂ ಮತ್ತು ಲೈಬ್ರರಿ ಇದ್ದು, ಆಗಸ್ಟ್ 15ರಂದು ಅಧಿಕೃತವಾಗಿ ಈ ಸಂಸ್ಥೆಯ ಹೆಸರನ್ನು ಪಿಎಂ ಮೆಮೋರಿಯಲ್ ಮ್ಯೂಸಿಯಂ ಮತ್ತು ಲೈಬ್ರರಿ ಎಂದು ಮರುನಾಮಕರಣ ಮಾಡಲಾಗಿದೆ. ಈ ಕುರಿತು ಕಳೆದ ಜೂನ್‌ ತಿಂಗಳಲ್ಲಿ ಕೇಂದ್ರ ಸರ್ಕಾರ ನಿರ್ಧಾ ಕೈಗೊಂಡಿತ್ತು.

ಬ್ರಿಟಿಷ್ ಆಡಳಿತದ ವೇಳೆ ಫ್ಲ್ಯಾಗ್‌ಸ್ಟಾಫ್ ಹೌಸ್ ಎಂದು ಕರೆಯಲಾಗುತ್ತಿದ್ದ ಈ ಕಟ್ಟಡವನ್ನು ಬ್ರಿಟಿಷ್ ಪಡೆಗಳ ಮುಖ್ಯ ದಂಡನಾಯಕನ ವಾಸಸ್ಥಾನವಾಗಿಯೂ ಬಳಸಲಾಗುತ್ತಿತ್ತು. ಸ್ವತಂತ್ರ ದೊರೆತ ಬಳಿಕ ಮೊದಲ ಪ್ರಧಾನಿ ಪಂಡಿತ ಜವಾಹರ್ ಲಾಲ್ ನೆಹರು ಅವರು ಈ ಕಟ್ಟಡವನ್ನು ತಮ್ಮ ವಾಸಸ್ಥಾನವನ್ನಾಗಿ ಮಾಡಿಕೊಂಡರು. ಅವರ ನಿಧನದ ಬಳಿಕ, ಅವರು ವಾಸವಿದ್ದ ಈ ಕಟ್ಟಡವನ್ನು ಅವರ ಹೆಸರಿನಲ್ಲಿ ಮ್ಯೂಸಿಯಂ ಮತ್ತು ಗ್ರಂಥಾಲಯವನ್ನಾಗಿ ಮಾಡಲಾಯಿತು.

ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗ, ಜವಾಹರಲಾಲ್ ನೆಹರೂ ಅವರಿಂದ ಪ್ರಾರಂಭಿಸಿ ಪ್ರಧಾನಿ ಮೋದಿಯವರವರೆಗಿನ ಎಲ್ಲಾ ಪ್ರಧಾನ ಮಂತ್ರಿಗಳ ದೀರ್ಘಕಾಲೀನ ಸಾಧನೆಗಳಿಗಾಗಿ ಪ್ರಧಾನಮಂತ್ರಿ ಸಂಗ್ರಹಾಲಯವನ್ನು ಆವರಣದಲ್ಲಿ ಸ್ಥಾಪಿಸಲಾಯಿತು. ಈ ವಸ್ತುಸಂಗ್ರಹಾಲಯವನ್ನು ಕಳೆದ ವರ್ಷ ಉದ್ಘಾಟಿಸಲಾಯಿತು.

ಸರ್ಕಾರದ ವಿರುದ್ಧ ಮುಗಿಬಿದ್ದ ಕಾಂಗ್ರೆಸ್

ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಬಗ್ಗೆ ಹಾಲಿ ಪ್ರಧಾನಿ ಮೋದಿಗೆ ಅಭದ್ರತೆ ಕಾಡುತ್ತಿದೆ. ಅವರು ನೆಹರು ಮತ್ತು ನೆಹರು ಪರಂಪರೆಯನ್ನು ನಿರಾಕರಿಸುವ, ವಿರೂಪಗೊಳಿಸುವ, ಮಾನಹಾನಿ ಮಾಡುವ ಮತ್ತು ನಾಶಮಾಡುವ ಏಕೈಕ ಅಜೆಂಡಾವನ್ನು ಹೊಂದಿದ್ದಾರೆ. ಅವರು NMML ಹೆಸರಿನಲ್ಲಿ N ತೆಗೆದು ಅದರ ಬದಲಿಗೆ P ಸೇರಿದ್ದಾರೆ. ನಿಜವಾಗಿಯೂ ಆ P ಅವರ ಸಣ್ಣತನ ಮತ್ತು ಅ ಅನ್ನು ಹಾಕಿದ್ದಾರೆ. ಆ P ನಿಜವಾಗಿಯೂ ಮೋದಿಯ ಸಣ್ಣತನ ಕೊರಗನ್ನು ಸೂಚಿಸುತ್ತದೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಟ್ವೀಟ್ ಮಾಡಿದ್ದಾರೆ.

ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ನೆಹರೂ ಅವರ ದೈತ್ಯ ಕೊಡುಗೆಗಳನ್ನು ಮತ್ತು ಭಾರತೀಯ ರಾಷ್ಟ್ರ-ರಾಜ್ಯದ ಪ್ರಜಾಸತ್ತಾತ್ಮಕ, ಜಾತ್ಯತೀತ, ವೈಜ್ಞಾನಿಕ ಮತ್ತು ಉದಾರವಾದಿ ಅಡಿಪಾಯಗಳನ್ನು ನಿರ್ಮಿಸುವಲ್ಲಿ ಅವರ ಅತ್ಯುನ್ನತ ಸಾಧನೆಗಳನ್ನು ಅವರು(ಮೋದಿ) ಎಂದಿಗೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಈ ಎಲ್ಲ ಸಂಗತಿಗಳನ್ನು ಮೋದಿ ಹಾಗೂ ಅವರ ಹಿಂಬಾಲಕರ ಆಕ್ರಮಣಕ್ಕೆ ಒಳಗಾಗುತ್ತಿವೆ ಎಂದು ಜೈರಾಮ್ ರಮೇಶ್ ಅವರು ಹೇಳಿದ್ದಾರೆ. ಜೈರಾಮ್ ರಮೇಶ್ ಅವರ ಅಭಿಪ್ರಾಯವನ್ನು ಇಂಡಿಯಾ ಕೂಟದ ಎಲ್ಲ ಪಕ್ಷಗಳು ಬೆಂಬಲಿಸಿವೆ.

ಈ ಸುದ್ದಿಯನ್ನೂ ಓದಿ: ಮತ್ತೊಂದು ಸರ್ಕಾರಿ ಸಂಸ್ಥೆಯಿಂದ ‘ನೆಹರು’ ಹೆಸರು ಕೈ ಬಿಟ್ಟ ‘ಮೋದಿ’ ಸರ್ಕಾರ!

ತಿರುಗೇಟು ನೀಡಿದ ಬಿಜೆಪಿ ವಕ್ತಾರ

ಕಾಂಗ್ರೆಸ್ ಪಕ್ಷದ P ಟೀಕೆಗೆ ತಿರುಗೇಟು ನೀಡಿರುವ ಬಿಜೆಪಿ ಪರಿವಾರವಾದದ ಟೀಕೆ ಮಾಡಿದೆ. ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲ್ ಅವರು ಟ್ವಿಟರ್‌ನಲ್ಲಿ ವಿಡಿಯೋ ಸಂದೇಶವೊಂದನ್ನು ಪೋಸ್ಟ್ ಮಾಡಿ, P ಎಂದರೆ ಪರಿವಾರ (ಕುಟುಂಬ) ಮಾತ್ರವೇ ಹೊರತು ಜನರಲ್ಲ ಎಂದು ಹೇಳಿದ್ದಾರೆ.

ಮೊದಲ ಪ್ರಧಾನಿಯಿಂದ ಈಗಿನ ಪ್ರಧಾನಿಯವರೆಗೆ, ಲಾಲ್ ಬಹದ್ದೂರ್ ಶಾಸ್ತ್ರಿಯಿಂದ ಪಿವಿ ನರಸಿಂಹರಾವ್, ಎಚ್‌ಡಿ ದೇವೇಗೌಡರಿಂದ ಇಂದರ್‌ಕುಮಾರ್ ಗುಜ್ರಾಲ್‌ವರೆಗೆ ಈ ದೇಶದ ಎಲ್ಲಾ ಪ್ರಧಾನಿಗಳ ಸಾಧನೆಗಳನ್ನು ಈ ವಸ್ತು ಸಂಗ್ರಾಲಯವು ಪ್ರದರ್ಶಿಸುತ್ತದೆ. ಆದರೆ, ಕಾಂಗ್ರೆಸ್ ಪಕ್ಷವು ವಿರೋಧಿಸುತ್ತಿದೆ. ಒಂದು ಕುಟುಂಬದ ಒಬ್ಬ ಪ್ರಧಾನಿ ಹೆಸರನ್ನು ಮಾತ್ರ ಹೆಸರಿಸಬೇಕೆಂದು ಹೇಳುತ್ತಿದೆ ಎಂದು ಶೆಹಜಾದ್ ಪೂನಾವಾಲ ಹೇಳಿದ್ದಾರೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version