Site icon Vistara News

ಅಸ್ಸಾಂನಲ್ಲಿ 2ನೇ ಮದುವೆ ನಿಷೇಧಿಸಿದ ಹಿಮಂತ ಬಿಸ್ವಾ ಸರ್ಕಾರ; ಮುಸ್ಲಿಮರಿಗೂ ಅನ್ವಯ!

Second Marriage In Assam

No 2nd Marriage for Assam Govt Workers from Now, Religion's Nod Won't be Applicable: Says Govt

ಗುವಾಹಟಿ: ದೇಶಾದ್ಯಂತ ಏಕರೂಪ ನಾಗರಿಕ ಸಂಹಿತೆ (Uniform Civil Code) ಜಾರಿಗೆ ತರಬೇಕು ಎಂಬ ಒತ್ತಾಯಗಳು ಕೇಳಿಬರುತ್ತಿರುವ, ಕೋರ್ಟ್ ಕೂಡ ಇದನ್ನೇ ನಿರ್ದೇಶಿಸುತ್ತಿರುವ ಬೆನ್ನಲ್ಲೇ ಅಸ್ಸಾಂ ಸರ್ಕಾರವು ಮಹತ್ವದ ತೀರ್ಮಾನ ತೆಗೆದುಕೊಂಡಿದೆ. “ಅಸ್ಸಾಂನಲ್ಲಿ ಸರ್ಕಾರಿ ನೌಕರರು ಎರಡನೇ ಮದುವೆಯಾಗುವಂತಿಲ್ಲ. ಆಯಾ ಧರ್ಮದಲ್ಲಿ ಎರಡನೇ ಮದುವೆಯಾಗಲು ಅನುಮತಿ ಇದ್ದರೂ, ಸರ್ಕಾರಿ ನೌಕರರು (Government Employees) ಎರಡನೇ (Second Marriage) ಮದುವೆಯಾಗುವಂತಿಲ್ಲ” ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ಹೇಳಿದ್ದಾರೆ.

“ಸರ್ಕಾರಿ ಉದ್ಯೋಗದಲ್ಲಿರುವ ಮುಸ್ಲಿಂ ಪುರುಷರು ಮೊದಲ ಪತ್ನಿ ಜೀವಂತವಾಗಿದ್ದರೂ ಸರ್ಕಾರಕ್ಕೆ ಮಾಹಿತಿಯನ್ನೇ ನೀಡದೆ ಎರಡನೇ ಮದುವೆಯಾಗುತ್ತಾರೆ. ಇದಾದ ಬಳಿಕ ಪಿಂಚಣಿಗಾಗಿ ಆ ನೌಕರನ ಇಬ್ಬರು ಪತ್ನಿಯರೂ ಜಗಳ ಆಡುತ್ತಾರೆ. ಸರ್ಕಾರಿ ನೌಕರರು ಎರಡನೇ ಮದುವೆಯಾಗಲು ಸರ್ಕಾರದ ಅನುಮತಿ ಪಡೆಯಬೇಕು ಎಂಬ ನಿಯಮ ಈಗಾಗಲೇ ಇದೆ. ಆದರೆ, ನಾವು ಇದನ್ನು ಸಮರ್ಪಕವಾಗಿ ಜಾರಿಗೆ ತರುತ್ತಿದ್ದೇವೆ. ಯಾವುದೇ ಸರ್ಕಾರಿ ನೌಕರರು ಎರಡನೇ ಮದುವೆಯಾಗಬೇಕು ಎಂದರೆ ಸರ್ಕಾರದ ಅನುಮತಿ ಪಡೆಯುವುದು ಕಡ್ಡಾಯ” ಎಂದಿದ್ದಾರೆ.

ಅಧಿಸೂಚನೆಯಲ್ಲಿ ಏನಿದೆ?

ಇಸ್ಲಾಂ ಸೇರಿ ಯಾವುದೇ ಧರ್ಮದ ಹೆಸರು ಉಲ್ಲೇಖಿಸದೆಯೇ ಎರಡನೇ ಮದುವೆ ಕುರಿತು ರಾಜ್ಯ ಸರ್ಕಾರವು ಅಧಿಸೂಚನೆ ಹೊರಡಿಸಿದೆ. “ರಾಜ್ಯ ಸರ್ಕಾರಿ ನೌಕರರು ಎರಡನೇ ಮದುವೆಯಾಗುವಂತಿಲ್ಲ. ಆಯಾ ಧರ್ಮಗಳಲ್ಲಿ ಎರಡನೇ ಮದುವೆಗೆ ಅನುಮತಿ ಇದ್ದರೂ, ನೌಕರರು ಎರಡನೇ ಮದುವೆಯಾಗಬೇಕು ಎಂದರೆ ಸರ್ಕಾರದ ಅನುಮತಿ ಪಡೆಯಲೇಬೇಕು” ಎಂಬುದಾಗಿ ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ. ಹಾಗಾಗಿ, ಈ ನಿಯಮ ಎಲ್ಲ ಧರ್ಮೀಯರಿಗೂ ಅನ್ವಯವಾಗಲಿದೆ.

ಇದನ್ನೂ ಓದಿ: Amala Paul: ‘ಹೆಬ್ಬುಲಿ’ ನಟಿ ಅಮಲಾ ಪೌಲ್ ಎರಡನೇ ಮದುವೆಗೆ ರೆಡಿ; ನಿಶ್ಚಿತಾರ್ಥ ಫೋಟೊ ವೈರಲ್‌!

ಅಸ್ಸಾಂನಲ್ಲಿ ಸುಮಾರು 4 ಲಕ್ಷ ಸರ್ಕಾರಿ ನೌಕರರಿದ್ದು, ಮುಸ್ಲಿಮರು ಸೇರಿ ಯಾವುದೇ ಧರ್ಮದ ನೌಕರರು ಎರಡನೇ ಮದುವೆಯಾದರೆ ಸರ್ಕಾರಕ್ಕೆ ಪಿಂಚಣಿ ನೀಡಲು ಕಷ್ಟವಾಗುತ್ತಿದೆ. ಇಂತಹ ಪ್ರಕರಣಗಳನ್ನು ಮನಗಂಡ ರಾಜ್ಯ ಸರ್ಕಾರವು ಎರಡನೇ ಮದುವೆಯಾಗಲು ರಾಜ್ಯ ಸರ್ಕಾರದ ಸಮ್ಮತಿ ಕಡ್ಡಾಯ ಎಂಬ ನಿಯಮ ಜಾರಿಗೆ ತಂದಿದೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಇಸ್ಲಾಂ ಧರ್ಮದಲ್ಲಿ ಅಸ್ತಿತ್ವದಲ್ಲಿರುವ ಬಹುಪತ್ನಿತ್ವ ಪದ್ಧತಿಯನ್ನು ರದ್ದುಗೊಳಿಸಬೇಕು ಎಂಬ ಆಗ್ರಹಗಳು ಕೇಳಿಬರುತ್ತಿವೆ. ಇದರ ಬೆನ್ನಲ್ಲೇ, ಅಸ್ಸಾಂ ಸರ್ಕಾರ ದಿಟ್ಟ ಕ್ರಮ ತೆಗೆದುಕೊಂಡಿದೆ.

Exit mobile version