ಪ್ರಧಾನಿ ಮೋದಿಯವರು ಯುಎಸ್ ಪ್ರವಾಸ(PM Modi US Visit)ದಲ್ಲಿ ಇದ್ದಾರೆ. ಅಲ್ಲಿ ವಿವಿಧ ಕಾರ್ಯಕ್ರಮಗಳ ಜತೆ ಅವರು ಭರ್ಜರಿ ಔತಣಕೂಟದಲ್ಲಿ ಪಾಲ್ಗೊಂಡು ವೈವಿಧ್ಯಮಯ ಖಾದ್ಯಗಳನ್ನು ಸವಿದಿದ್ದಾರೆ. ಈ ವೇಳೆ ಪ್ರಧಾನಿ ಮೋದಿ ಮತ್ತು ಜೋ ಬೈಡೆನ್ ಮಧ್ಯೆ ಹಲವು ಬಗೆಯ ಲಘು ಹಾಸ್ಯಗಳು, ತಮಾಷೆಯುಕ್ತ ಸನ್ನಿವೇಶಗಳು ಎದುರಾದವು.
ವೈಟ್ಹೌಸ್ನಲ್ಲಿ ಔತಣಕೂಟದ ಹೊತ್ತಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಜೋ ಬೈಡೆನ್ (US President Joe Biden) ಅವರು ಆಲ್ಕೋಹಾಲ್ ಇಲ್ಲದ ಗ್ಲಾಸ್ನ್ನು ಪರಸ್ಪರ ಸ್ಪರ್ಶಿಸಿ ಚಿಯರ್ಸ್ ಹೇಳಿದ್ದೂ ಅದರಲ್ಲಿ ಒಂದಾಗಿತ್ತು. ಪ್ರಧಾನಿ ಮೋದಿ ಮತ್ತು ಜೋ ಬೈಡೆನ್ ಇಬ್ಬರೂ ಮದ್ಯಪಾನ ಮಾಡುವುದಿಲ್ಲ. ಹೀಗಾಗಿ ವೈಟ್ಹೌಸ್ ಔತಣ, ಸಂಗೀತದ ವೇಳೆ ಅವರಿಬ್ಬರೂ ಪರಸ್ಪರ ಗ್ಲಾಸನ್ನು ಸ್ಪರ್ಶಿಸಿ, ಚಿಯರ್ಸ್ ಹೇಳಿ ಅದರಲ್ಲಿದ್ದ ದ್ರವವನ್ನು ಹೀರಿದರು. ಆದರೆ ಅದರಲ್ಲಿ ಆಲ್ಕೋಹಾಲ್ ಇರಲಿಲ್ಲ. ಜೋ ಬೈಡೆನ್ ಅವರ ಈ ಐಡಿಯಾಕ್ಕೆ ಪ್ರಧಾನಿ ಮೋದಿ ದೊಡ್ಡದಾಗಿ ನಕ್ಕರು.
ಮದ್ಯದ ಪಾರ್ಟಿ ವೇಳೆ ಅತಿಥಿಗಳು ಪರಸ್ಪರ ಗೌರವದಿಂದ ತಾವು ಕೈಯಲ್ಲಿ ಹಿಡಿದ್ದ ಮದ್ಯದ ಗ್ಲಾಸ್ಗಳನ್ನು ಸ್ಪರ್ಶಿಸಿ, ಚಿಯರ್ಸ್ ಎನ್ನುವುದಕ್ಕೆ ಟೋಸ್ಟ್ ಎಂದೂ ಕರೆಯುತ್ತಾರೆ. ಆದರೆ ಪ್ರಧಾನಿ ಮೋದಿಗಾಗಿ ಏರ್ಪಡಿಸಿದ್ದ ಔತಣಕೂಟದಲ್ಲಿ ಅನೇಕ ಅತಿಥಿಗಳು ಪಾಲ್ಗೊಂಡಿದ್ದರು. ಇಲ್ಲಿ ಮದ್ಯ ಇತ್ತು. ಆದರೆ ನರೇಂದ್ರ ಮೋದಿಯಾಗಲೀ, ಜೋ ಬೈಡೆನ್ ಆಗಲೀ ಮದ್ಯಪಾನ ಮಾಡುವವರಲ್ಲ. ಆದರೂ ಶಿಷ್ಟಾಚಾರ, ಪರಸ್ಪರ ಗೌರವ ತೋರ್ಪಡಿಕೆಗಾಗಿ ಇವರಿಬ್ಬರೂ ಕೈಯಲ್ಲಿ ಗ್ಲಾಸ್ ಹಿಡಿದು ಪರಸ್ಪರ ಚಿಯರ್ಸ್ ಹೇಳಿದರು. ಈ ವೇಳೆ ಜೋ ಬೈಡೆನ್ ಮಾತನಾಡಿದ್ದು ಕೇಳಿ ನರೇಂದ್ರ ಮೋದಿಯವರಿಗೆ ನಗು ತಡೆಯಲು ಸಾಧ್ಯವಾಗಲಿಲ್ಲ. ‘ಆಲ್ಕೋಹಾಲ್ ಸೇವನೆ ಮಾಡುವುದಿಲ್ಲ. ಹಾಗಿದ್ದಾಗ್ಯೂ ನೀವು ಅತಿಥಿಗಳಿಗೆ ಟೋಸ್ಟ್ ಕೊಡಬೇಕು ಎಂದರೆ, ಎಡಗೈಯಲ್ಲಿ ಗ್ಲಾಸ್ ಹಿಡಿದು ಚಿಯರ್ಸ್ ಎನ್ನಬೇಕು ಎಂದು ನನ್ನ ಅಜ್ಜ ಆಂಬ್ರೋಸ್ ಫಿನ್ನೆಗನ್ ಹೇಳುತ್ತಿದ್ದರು’ ಎಂದು ಫನ್ನಿಯಾಗಿ ಹೇಳಿದರು. ಹಾಗೇ, ‘ನಾನಿದನ್ನ ಜೋಕ್ ಮಾಡಿದೆ, ಹಾಗೆಲ್ಲ ಮಾಡುವುದಿಲ್ಲ ಎಂದು ಹೇಳಿ ಪ್ರಧಾನಿ ಮೋದಿಯವರಿಗೆ ಬಲಗೈಯಲ್ಲೇ ಚಿಯರ್ಸ್ ಹೇಳಿದರು. ನರೇಂದ್ರ ಮೋದಿಯವರು ಪಕ್ಕದಲ್ಲಿ ನಿಂತು ಜೋರಾಗಿ ನಗುತ್ತಿದ್ದರು. ನರೇಂದ್ರ ಮೋದಿ ಅವರು ಬಲಗೈಯಂತೆ ಎಡಗೈಯನ್ನೂ ಹೆಚ್ಚಾಗಿ ಬಳಸುತ್ತಾರೆ. ರ‍್ಯಾಲಿಗಳಲ್ಲಿ ಅವರು ಸಾಮಾನ್ಯವಾಗಿ ಎಡಗೈಯನ್ನು ಹೆಚ್ಚಾಗಿ ಬೀಸುತ್ತಾರೆ. ಈ ಹಿನ್ನೆಲೆಯಲ್ಲೂ ಮೋದಿಯವರ ನಗು ಗಮನ ಸೆಳೆದಿದೆ.
#WATCH | Prime Minister Narendra Modi and US President Joe Biden, at the State Dinner at the White House. pic.twitter.com/r0LkOADAZ6
— ANI (@ANI) June 23, 2023
ಇದನ್ನೂ ಓದಿ: PM Modi US Visit: ‘ಭಾರತವು ಪ್ರಜಾಪ್ರಭುತ್ವದ ತಾಯಿ’ ಎಂದ ಮೋದಿ; ಯುಎಸ್ ಜಂಟಿ ಸದನದಲ್ಲಿ 2ನೇ ಬಾರಿ ಐತಿಹಾಸಿಕ ಭಾಷಣ