Site icon Vistara News

Rahul Gandhi ಭದ್ರತೆ ಕುರಿತು ಯಾವುದೇ ರಾಜಿ ಇಲ್ಲ ಎಂದ ಜೈರಾಮ್ ರಮೇಶ್

Jairam Ramesh

ನವದೆಹಲಿ: ಭಾರತ್ ಜೋಡೋ ಯಾತ್ರೆ (Bharat Jodo Yatra) ವೇಳೆ ರಾಹುಲ್ ಗಾಂಧಿ (Rahul Gandhi) ಅವರ ಭದ್ರತೆಗೆ ಸಂಬಂಧಿಸಿದಂತೆ ಯಾವುದೇ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಹೇಳಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಹಟ್ಲಿ ಮೋರ್‌ನಿಂದ ದುಗ್ಗರ್ ಹವೇಲಿ ತನಕದ ಪಾದಯಾತ್ರೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜೈರಾಮ್ ರಮೇಶ್ ಅವರು, ನಾವು ಭದ್ರತಾ ಸಲಹೆ ಹಾಗೂ ಸೂಚನೆಗಳನ್ನು ಪಾಲಿಸಲಿದ್ದೇವೆ ಎಂದು ತಿಳಿಸಿದರು.

ಭಾನುವಾರದ ಪಾದಯಾತ್ರೆ ವೇಳೆ ಪೊಲೀಸರು, ಜನರಿಗೆ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲು ಅವಕಾಶ ನೀಡಿಲ್ಲ. ಇದರ ಹೊರತಾಗಿಯೂ ಪಾದಯಾತ್ರೆಗೆ ಅದ್ಭುತ ಪ್ರತಿಕ್ರಿಯೆ ದೊರೆತಿದೆ. ಅದೇ ರೀತಿಯ ಪ್ರತಿಕ್ರಿಯೆ ಜಮ್ಮು ಮತ್ತು ಕಾಶ್ಮೀರದಲ್ಲೂ ದೊರೆಯಲಿದೆ ಎಂಬ ಭರವಸೆ ಇದೆ. ರಾಹುಲ್ ಗಾಂಧಿ ಅವರು ಶಾಂತಿ ಮತ್ತು ಪ್ರೀತಿ ಸಂದೇಶವನ್ನು ಜನರಿಗೆ ಇಷ್ಟವಾಗುತ್ತಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ Viral Video: ಕಾಶ್ಮೀರದ ಚಳಿಗೆ ನಡುಗಿದ ರಾಹುಲ್ ಗಾಂಧಿ; ಕೊನೆಗೂ ಜಾಕೆಟ್​ ಧರಿಸಿಯೇ ಪಾದಯಾತ್ರೆ ನಡೆಸಿದರು!

ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರ ವಿರುದ್ಧ ವಾಗ್ದಾಳಿ ನಡೆಸಿದ ಜೈರಾಮ್ ರಮೇಶ್ ಅವರು, ಪಾದಯಾತ್ರೆಯ 128 ದಿನಗಳ ಬಳಿಕ ಅವರಿಗೆ(ಜಿತೇಂದ್ರ ಸಿಂಗ್) ಈಗ ನೆನಪಾಗಿ, ಯಾವುದೇ ತಾರ್ಕಿಕ ಕಾರಣಗಳಿಲ್ಲದೇ ಟೀಕೆ ಮಾಡುತ್ತಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ದೊರೆಯುತ್ತಿರುವ ಅದ್ಭುತ ಪ್ರತಿಕ್ರಿಯೆ ಕಂಡು ಹೊಟ್ಟೆಕಿಚ್ಚಾಗಿದೆ ಅವರಿಗೆ. ಆದರೆ, ಆ ವ್ಯಕ್ತಿ ಧ್ರವೀಕರಣ, ರಾಜಕೀಯ ಸರ್ವಾಧಿಕಾರ, ಸಾಮಾಜಿ ಅಸಮಾನತೆಗಳ ಬಗ್ಗೆ ಒಂದೇ ಒಂದು ಮಾತು ಆಡಿಲ್ಲ ಎಂದು ಹೇಳಿದರು.

Exit mobile version