Site icon Vistara News

No Confidence Motion: ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯ ಚರ್ಚೆ ಶುರು, ರಾಹುಲ್ ಗಾಂಧಿ ಏಕೆ ಮಾತನಾಡಲಿಲ್ಲ?

Gaurav Gogoi in Lok Sabha

ನವದೆಹಲಿ: ಸರ್ಕಾರದ ವಿರುದ್ದ ಅವಿಶ್ವಾಸ ನಿರ್ಣಯ ಮಂಡಿಸಿದ್ದ ಕಾಂಗ್ರೆಸ್‌ನ ಗೌರವ್ ಗೊಗೊಯ್ ಅವರ ಮಾತುಗಳ ಮೂಲಕವೇ ಲೋಕಸಭೆಯಲ್ಲಿ ಚರ್ಚೆ ಶುರುವಾಯಿತು(No Confidence Motion). ಸ್ಪೀಕರ್ ಓಂ ಬಿರ್ಲಾ (Speaker Om Birla) ಅವರು ಕಾಂಗ್ರೆಸ್ ನಾಯಕ ಗೌರವ್ ಗೊಗೊಯ್ (Congress Leader Gaurav Gogoi) ಅವರಿಗೆ ಮಧ್ಯಾಹ್ನದ ವೇಳೆಗೆ ಚರ್ಚೆಯನ್ನು ಪ್ರಾರಂಭಿಸಲು ಸೂಚಿಸಿದರು. ಆಗ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ (Minister Prahalad Joshi) ಅವರು ಎದ್ದುನಿಂತು, ಗೌರವ್ ಗೊಗೊಯ್ ಬದಲಿಗೆ ರಾಹುಲ್ ಗಾಂಧಿ ಅವರು ಮಾತನಾಡಲಿದ್ದಾರೆಂದು ಸ್ಪೀಕರ್ ಕಚೇರಿಗೆ 11.55ಕ್ಕೆ ಪತ್ರ ಬಂದಿದೆ ಎಂದು ಮಾಹಿತಿ ನೀಡಿದರು(Monsoon Parliament Session).

ಈ ಐದು ನಿಮಿಷದಲ್ಲಿ ಅಂಥದ್ದೇನಾಯ್ತು? ಏನು ಸಮಸ್ಯೆ? ರಾಹುಲ್ ಗಾಂಧಿ ಮಾತು ಕೇಳಲು ನಾವೆಲ್ಲ ಉತ್ಸುಕರಾಗಿದ್ದೇವೆ ಎಂದು ಸಚಿವ ಪ್ರಹ್ಲಾದ್ ಜೋಶಿ ಅವರು ಕಾಲೆಳೆದರು. ಜೋಶಿ ಅವರು ಈ ಮಾತಿಗೆ ಲೋಕಸಭೆಯಲ್ಲಿ ಗದ್ದಲ ಶುರುವಾಯಿತು. ಹಾಗಾಗಿ, ಗದ್ದಲ ಸಂಪೂರ್ಣವಾಗಿ ನಿಲ್ಲುವವರೆಗೆ ಮುಂದಿನ ಪ್ರಕ್ರಿಯೆಗಳನ್ನು ಸ್ಪೀಕರ್ ಕೈಗೊಳ್ಳಲಿಲ್ಲ.

ಬಳಿಕ ಮಾತು ಆರಂಭಿಸಿದ ಗೌರವ್ ಗೊಗೊಯ್, ಅವಿಶ್ವಾಸ ನಿರ್ಣಯವು ನಂಬರ್‌ಗಳಿಗೆ ಸಂಬಂಧಿಸಿದ್ದಲ್ಲ, ಬದಲಿಗೆ ಇದು ಮಣಿಪುರ ನ್ಯಾಯಕ್ಕಾಗಿ ಸಂಬಂಧಿಸಿದ್ದು ಎಂದು ಹೇಳಿದರು. ಅವಿಶ್ವಾಸ ನಿರ್ಣಯ ನಮ್ಮ ಒತ್ತಾಯ. ಅವಿಶ್ವಾಸ ನಿರ್ಣಯವು ಸಂಖ್ಯೆಗಳ ಬಗ್ಗೆ ಅಲ್ಲ, ಬದಲಿಗೆ ಮಣಿಪುರದ ನ್ಯಾಯಕ್ಕಾಗಿ ಎಂದು ಅವರು ಹೇಳಿದರು.

ಮಣಿಪುರ ನ್ಯಾಯಕ್ಕಾಗಿ ಅಂಗಲಾಚುತ್ತಿದೆ. ಹಾಗಾಗಿಯೇ ಇಂಡಿಯಾ ಕೂಟವು ಈ ಅವಿಶ್ವಾಸ ನಿರ್ಣಯವನ್ನು ಮಂಡಿಸಿದೆ. ಈಗ ನಡೆಯುತ್ತಿರುವ ಘಟನೆಗಳು ಕೇವಲ ಈಶಾನ್ಯ ಭಾರತದ ಮೂಲೆಯೊಂದರಲ್ಲಿ ಮಾತ್ರವೇ ನಡೆಯುತ್ತಿಲ್ಲ. ಬದಲಿಗೆ ಭಾರತದಾದ್ಯಂತ ನಡೆಯುತ್ತಿವೆ. ಒಂದು ವೇಳೆ ಮಣಿಪುರ ಹೊತ್ತಿ ಉರಿಯುತ್ತಿದ್ದರೆ, ಇಡೀ ದೇಶವೇ ಹೊತ್ತಿ ಉರಿದಂತೆ ಎಂದು ಗೊಗೊಯ್ ಹೇಳಿದರು.

ನಮ್ಮ ಬೇಡಿಕೆ ಸ್ಪಷ್ಟವಾಗಿದೆ. ದೇಶದ ಮುಖ್ಯಸ್ಥರಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಗೆ ಆಗಮಿಸಿ ಮಾತನಾಡಬೇಕು. ಅವರಿಗೆ ಎಲ್ಲ ಪಕ್ಷಗಳು ಸಹಾನುಭೂತಿ ವ್ಯಕ್ತಪಡಿಸಲಿವೆ ಮತ್ತು ಎಲ್ಲಾ ಪಕ್ಷಗಳು ತಮ್ಮ ಬೆಂಬಲವನ್ನು ನೀಡುತ್ತವೆ ಮತ್ತು ಈ ಬಿಕ್ಕಟ್ಟಿನ ಸಮಯದಲ್ಲಿ ಸಂಸತ್ತು ತಮ್ಮೊಂದಿಗೆ ಇದೆ ಎಂಬ ಸಂದೇಶವನ್ನು ಮಣಿಪುರ ಪಡೆಯುತ್ತದೆ ಎಂಬುದು ನಮ್ಮ ಬೇಡಿಕೆ ಸ್ಪಷ್ಟವಾಗಿದೆ ಎಂದು ಗೊಗೊಯ್ ಹೇಳಿದರು.

ರಾಹುಲ್ ಗಾಂಧಿ ಏಕೆ ಮಾತನಾಡಲಿಲ್ಲ?

ಇದಕ್ಕೂ ಮೊದಲು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಏಕೆ ಮಾತನಾಡಲಿಲ್ಲ ಎಂದು ಪ್ರಶ್ನಿಸಿದರು. ವಾಸ್ತವದಲ್ಲಿ ಅವಿಶ್ವಾಸ ನಿರ್ಣಯವನ್ನು ರಾಹುಲ್ ಗಾಂಧಿ ಅವರು ಆರಂಭಿಸಬೇಕಿತ್ತು. ಆದರೆ, ಕೊನೆಗಳಿಗೆಯಲ್ಲಿ ಅವರು ಹಿಂದೆ ಸರಿದಿದ್ದಾರೆ ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ: No confidence motion: ಆ.8ರಿಂದ ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಚರ್ಚೆ, 10ರಂದು ಮೋದಿ ಉತ್ತರ

2019ರ ಮೋದಿ ಉಪನಾಮ ಮಾನಹಾನಿ ಪ್ರಕರಣದಲ್ಲಿ 2 ವರ್ಷ ಕಾಲ ಶಿಕ್ಷೆಗೆ ಗುರಿಯಾಗಿದ್ದ ರಾಹುಲ್ ಗಾಂಧಿ ಅವರ ಲೋಕಸಭೆ ಸದಸ್ಯತ್ವ ರದ್ದಾಗಿತ್ತು. ಆದರೆ, ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದ ಹಿನ್ನೆಲೆಯಲ್ಲಿ ಅವರಿಗೆ ಮತ್ತೆ ಸದಸ್ಯತ್ವವನ್ನು ನೀಡಲಾಗಿದೆ. ಹಾಗಾಗಿ, ಅವರು ಲೋಕಸಭೆಯಲ್ಲಿ ಮಾತನಾಡಲಿದ್ದಾರೆಂದು ಹೇಳಲಾಗಿತ್ತು. ಈಗ ಅವರು, ಮೋದಿ ಸದನದಲ್ಲಿದ್ದಾಗಲೇ ಮಾತನಾಡುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version