Site icon Vistara News

no confidence motion: ನಾಳೆಯಿಂದ ಸಂಸತ್ತಿನಲ್ಲಿ ‘ಅವಿಶ್ವಾಸ’ ಕದನ; ಕಾವೇರಿದ ಚರ್ಚೆಗೆ ಸಾಕ್ಷಿಯಾಗಲಿದೆ ಲೋಕಸಭೆ

Parliament

ನವದೆಹಲಿ: ಆಗಸ್ಟ್ 8, ಮಂಗಳವಾರದಿಂದ ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯ ಚರ್ಚೆ (no confidence motion) ಶುರುವಾಗಲಿದೆ. ಮಣಿಪುರ ಹಿಂಸಾಚಾರ (Manipur Violence) ಕುರಿತು ಪ್ರಧಾನಿ ನರೇಂದ್ರ ಮೋದಿ(PM Narendra Modi) ಹೇಳಿಕೆಗೆ ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳು (Opposition Parties) ಸತತವಾಗಿ ಆಗ್ರಹಿಸುತ್ತಿದ್ದವು. ಪ್ರತಿಪಕ್ಷಗಳ ಬೇಡಿಕೆಗೆ ಬಿಜೆಪಿ (BJP) ನೇತೃತ್ವದ ಕೇಂದ್ರ ಸರ್ಕಾರವು ಒಪ್ಪಿರಲಿಲ್ಲ. ಇದರಿಂದಾಗಿ ಉಭಯ ಸದನಗಳಲ್ಲಿ ಕಲಾಪ ನಡೆಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಈ ಕುರಿತು ಚರ್ಚಿಸಲು ಕಾಂಗ್ರೆಸ್ ಪಕ್ಷವು (Congress Party) ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಲೇಬೇಕಾಗುತ್ತದೆ. ಹಾಗಾಗಿ, ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಮಾತಿನ ಕದನ ನಿರೀಕ್ಷಿಸಬಹುದಾಗಿದೆ.

ಅವಿಶ್ವಾಸ ನಿರ್ಣಯ ಚರ್ಚೆಯಲ್ಲಿ ರಾಹುಲ್ ಗಾಂಧಿ ಭಾಗಿ

ಈ ಮಧ್ಯೆ, ಲೋಕಸಭೆ ಸದಸ್ಯತ್ವವನ್ನು ಕಳೆದುಕೊಂಡಿದ್ದ ರಾಹುಲ್ ಗಾಂಧಿ ಅವರಿಗೆ ಮತ್ತೆ ಸದಸ್ಯತ್ವ ಮರಳಿದೆ. ಹಾಗಾಗಿ, ಅವರು ಮಂಗಳವಾರದಿಂದ ಆರಂಭವಾಗಲಿರುವ ಅವಿಶ್ವಾಸ ನಿರ್ಣಯ ಚರ್ಚೆಯಲ್ಲಿ ಪಾಲ್ಗೊಳ್ಳಳಿದ್ದಾರೆ. ಮೋದಿ ಉಪನಾಮ ಮಾನನಷ್ಟ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರಿಗೆ ಸೂರತ್ ಸ್ಥಳೀಯ ನ್ಯಾಯಾಲಯವು ಗರಿಷ್ಠ 2 ವರ್ಷ ಜೈಲು ಶಿಕ್ಷೆಯನ್ನು ವಿಧಿಸಿತ್ತು. ಹಾಗಾಗಿ, ಅವರ ಸದಸ್ಯತ್ವ ಅನರ್ಹಗೊಂಡಿತ್ತು. ಆದರೆ, ಸುಪ್ರೀಂ ಕೋರ್ಟ್ ಈ ಶಿಕ್ಷೆಗೆ ತಡೆ ನೀಡಿದ್ದರಿಂದ ಮತ್ತೆ ಅವರು ಲೋಕಸಭೆ ಸದಸ್ಯರಾಗಿ ಮರಳಿದ್ದಾರೆ.

ಅವಿಶ್ವಾಸ ನಿರ್ಣಯದಲ್ಲಿ ಸೋಲು ಖಚಿತವಿದ್ದರೂ ಪ್ರತಿಪಕ್ಷಗಳು ನಿರ್ಣಯವನ್ನು ಮಂಡಿಸಿವೆ. ಆ ಮೂಲಕ ಸರ್ಕಾರವನ್ನು ಕಾರ್ಯಕ್ರಮಗಳ ವಿರುದ್ದ, ನೀತಿಗಳ ವಿರುದ್ದ, ಮಣಿಪುರ ಹಿಂಸಾಚಾರವನ್ನು ತಡೆಯಲು ವಿಫಲವಾಗಿರುವ ಕುರಿತು ಚಾಟಿ ಬೀಸಲಿವೆ.

ಇನ್ನು ಬಿಜೆಪಿ ನೇತೃತ್ವದ ಎನ್‌ಡಿಎ ಅವಿಶ್ವಾಸ ನಿರ್ಣಯವನ್ನು ಸುಲಭವಾಗಿ ಗೆಲ್ಲಲಿದೆ. ಸ್ವತಃ ಬಿಜೆಪಿಯ ಬಳಿಕ 301 ಸದಸ್ಯರು ಇರುವುದಿರಂದ ಯಾವುದೇ ಕಾರಣಕ್ಕೂ ನಿರ್ಣಯದಲ್ಲಿ ಸೋಲಲು ಸಾಧ್ಯವಿಲ್ಲ. ಆದರೂ, ಪ್ರಧಾನಿ ಮೋದಿ ಅವರು ಚರ್ಚೆಯ ವೇಳೆ, ಪ್ರತಿಪಕ್ಷಗಳ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಬೇಕಾಗುತ್ತದೆ. ಚರ್ಚೆಯಲ್ಲಿ ಪಾಲ್ಗೊಳ್ಳಬೇಕಾಗುತ್ತದೆ.

ನಂಬರ್‌ ಗೇಮ್ ಹೊರತಾಗಿಯೂ ಸಂಸತ್ತು ಮುಂದಿನ ಮೂರು ದಿಗಳ ಕಾಲ ಕಾವೇರಿದ ಚರ್ಚೆಗೆ ಕಾರಣವಾಗಲಿದೆ ಎಂಬುದಂತೂ ಸತ್ಯ. ಹಾಗಾಗಿ, ಎನ್‌ಡಿಎ ಮತ್ತು ಹೊಸದಾಗಿ ರಚನೆಯಾಗಿರುವ ಇಂಡಿಯಾ ಕೂಟದ ನಡುವಿ ಮಾತಿನ ಚಕಮಕಿಯನ್ನು ನಿರೀಕ್ಷಿಸಬಹುದಾಗಿದೆ.

ಈ ಸುದ್ದಿಯನ್ನೂ ಓದಿ: Rahul Gandhi: ರಾಹುಲ್‌ ಗಾಂಧಿ ಈಗ ಮತ್ತೆ ಸಂಸದ; ಬಂಗಲೆ ಸೇರಿ ಸಿಗುವ ಸೌಲಭ್ಯಗಳು ಯಾವವು?

ನಂಬರ್ ಗೇಮ್ ಹೇಗಿದೆ?

ಬಿಜೆಪಿ ಒಂದರ ಬಳಿಯ 301 ಸದ್ಯರಿದ್ದರೆ ಅದರ ಮಿತ್ರ ಪಕ್ಷಗಳು ಸೇರಿ ಒಟ್ಟು ಬಲ 325ಕ್ಕೆ ಏರಿಕೆಯಾಗುತ್ತದೆ. ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳ ಬಳಿ 141 ಸದಸ್ಯರಿದ್ದಾರೆ. ಇನ್ನು ತಟಸ್ಥವಾಗಿ ಉಳಿದಿರುವ ಬಿಆರ್‌ಎಸ್, ವೈಎಸ್ಆರ್‌ಪಿ, ಬಿಜೆಪಿ ಪಕ್ಷಗಳ ಒಟ್ಟು ಸದಸ್ಯರ ಸಂಖ್ಯೆ 41 ಇದೆ. ಉಳಿದರುವ ಸದಸ್ಯರು ಎನ್‌ಡಿಎ ಮತ್ತು ಇಂಡಿಯಾ ಮಧ್ಯೆ ಹಂಚಿಹೋಗಬಹುದು.

Exit mobile version