ನವದೆಹಲಿ: ಪ್ರತಿಪಕ್ಷಗಳು ಮಂಡಿಸಿದ ಅವಿಶ್ವಾಸ ಗೊತ್ತುವಳಿ (No Confidence Motion) ಕುರಿತು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಲೋಕಸಭೆಯಲ್ಲಿ ಮಾತನಾಡಿದ್ದು, ಪ್ರತಿಪಕ್ಷಗಳಿಗೆ ಭಾರಿ ತಿರುಗೇಟು ನೀಡಿದ್ದಾರೆ. “ಅವಿಶ್ವಾಸ ಗೊತ್ತುವಳಿ ಎಂಬುದು ನಮಗಲ್ಲ, ಇದು ಪ್ರತಿಪಕ್ಷಗಳ ವಿಶ್ವಾಸಮತ ಸಾಬೀತಿನ ಪರೀಕ್ಷೆಯಾಗಿದೆ. ಈಗಾಗಲೇ ಜನರ ವಿಶ್ವಾಸ ಗಳಿಸುವಲ್ಲಿ ಪ್ರತಿಪಕ್ಷಗಳು ವಿಫಲವಾಗಿವೆ. ಹಾಗೆಯೇ, ಪ್ರತಿಪಕ್ಷಗಳು ನೋ ಬಾಲ್ ಹಾಕುತ್ತಲೇ ಇವೆ, ನಾವು ಸೆಂಚುರಿ ಮೇಲೆ ಸೆಂಚುರಿ ಹೊಡೆಯುತ್ತಿದ್ದೇವೆ” ಎಂದು ಹೇಳಿದರು.
ಮೋದಿ ಭಾಷಣದ ಲೈವ್
“ಅವಿಶ್ವಾಸ ಗೊತ್ತುವಳಿಯು ನಮಗೆ ವಿಶ್ವಾಸಮತ ಸಾಬೀತುಪಡಿಸಬೇಕು ಎಂಬುದಲ್ಲ. ಇದು ಪ್ರತಿಪಕ್ಷಗಳ ವಿಶ್ವಾಸಮತ ಸಾಬೀತುಪಡಿಸುವ ಕೆಲಸವಾಗಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಎಲ್ಲರೂ ಜನರ ಬಳಿ ಹೋದೆವು. ಆದರೆ, ಪ್ರತಿಪಕ್ಷಗಳ ಮೇಲೆ ಜನ ವಿಶ್ವಾಸ ಇಡಲಿಲ್ಲ. ಜನರು ಬಿಜೆಪಿಗೂ ಹೆಚ್ಚಿನ ಸ್ಥಾನ ನೀಡಿದರು, ಎನ್‌ಡಿಎಗೂ ಹೆಚ್ಚಿನ ಸ್ಥಾನ ನೀಡಿದರು. ಪ್ರತಿಪಕ್ಷಗಳ ಅವಿಶ್ವಾಸ ಗೊತ್ತುವಳಿಯು ನಮಗೆ ಶುಭವಾಗಿದೆ” ಎಂದರು.
ಇದನ್ನೂ ಓದಿ: Manipur Violence: ಮೋದಿ ಭಾಷಣಕ್ಕೆ ಕೆಲವೇ ಗಂಟೆ ಮೊದಲು ಮಣಿಪುರದಲ್ಲಿ ಅನಾಚಾರ; ಮಹಿಳೆ ಮೇಲೆ ಗ್ಯಾಂಗ್‌ರೇಪ್
ಪ್ರತಿಪಕ್ಷಗಳಿಂದ ನೋ ಬಾಲ್ ಎಂದ ಮೋದಿ
ಪ್ರತಿಪಕ್ಷಗಳ ವಿರುದ್ಧ ಹರಿಹಾಯ್ದ ಎಂದ ನರೇಂದ್ರ ಮೋದಿ, “ಅವಿಶ್ವಾಸ ಗೊತ್ತುವಳಿ ಸೇರಿ ಯಾವುದೇ ವಿಷಯದ ಕುರಿತು ಪ್ರತಿಪಕ್ಷಗಳು ತಯಾರಿ ಮಾಡಿಕೊಂಡು ಬರುವುದಿಲ್ಲ. 2018ರಲ್ಲೂ ನಾನು ಇದನ್ನೇ ಹೇಳಿದ್ದೆ. ಐದು ವರ್ಷವಾದರೂ ಪ್ರತಿಪಕ್ಷಗಳು ತಯಾರಿ ಮಾಡಿಕೊಂಡು ಬರುವುದಿಲ್ಲ. ಹಾಗಾಗಿ, ನಾವು ಸೆಂಚುರಿ ಹೊಡೆಯುತ್ತಿದ್ದರೆ, ಪ್ರತಿಪಕ್ಷಗಳು ನೋ ಬಾಲ್ ಹಾಕುತ್ತಿವೆ” ಎಂದು ಕುಟುಕಿದರು.
ಅಭಿವೃದ್ಧಿಯೇ ಈ ಕಾಲದ ಅಗತ್ಯ
“21ನೇ ಶತಮಾನದಲ್ಲಿ ನಮಗೆ ಜವಾಬ್ದಾರಿ ಇದೆ. ನಮ್ಮೆಲ್ಲರ ಒಂದೇ ಗುರಿಯಾಗಿರಬೇಕು. ದೇಶದ ಅಭಿವೃದ್ಧಿಯೇ ಗುರಿಯಾಗಿರಬೇಕು. ಇದು ಈ ಕಾಲದ ಅಗತ್ಯವಾಗಿದೆ. 140 ಕೋಟಿ ದೇಶವಾಸಿಗಳು ಭಾರತೀಯ ಸಮುದಾಯದ ತಾಕತ್ ನಮ್ಮ ಆ ಗುರಿಯತ್ತ ತೆಗೆದುಕೊಂಡು ಹೋಗುತ್ತದೆ. ನಾವು ಯುವಕರ ಮೇಲೆ ಭರವಸೆ ಇಡೋಣ. ಅವರ ಕನಸುಗಳನ್ನು ನಾವು ವಾಸ್ತವ ಮಾಡೋಣ. ಆದ್ದರಿಂದ 2014ರಲ್ಲಿ 30 ವರ್ಷದ ಬಳಿಕ ದೇಶದ ಜನರು ಪೂರ್ಣ ಬಹುಮತ ಸರ್ಕಾರ ನೀಡಿದರು. 2019ರಲ್ಲೂ ದಾಖಲೆಯ ಬಹುಮತ ನೀಡಿದರು. ಅವರ ಸಂಕಲ್ಪವನ್ನು ಸಿದ್ಧಪಡಿಸುವುದಕ್ಕಾಗಿ 2019ರಲ್ಲಿ ಮತ್ತೊಮ್ಮೆ ನಮಗೆ ಸೇವಾ ಮಾಡುವ ಅವಕಾಶವನ್ನು ಕೊಟ್ಟರು” ಎಂದು ಮೋದಿ ಹೇಳಿದರು.