Site icon Vistara News

Study Report: ಮೋದಿ ಸರ್ಕಾರದ ನೀತಿಗಳಲ್ಲಿ ತಾರತಮ್ಯ ಇಲ್ಲ, ಅಲ್ಪಸಂಖ್ಯಾತರಿಗೇ ಹೆಚ್ಚು ಲಾಭ!

Narendra Modi To Meet NDA Leaders

ನರೇಂದ್ರ ಮೋದಿ

ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಅಲ್ಪಸಂಖ್ಯಾತರನ್ನು ತುಚ್ಛವಾಗಿ ಕಾಣುತ್ತಿದೆ ಎಂಬ ಆರೋಪ ಮೊದಲಿನಿಂದಲೂ ಇದೆ. ಆದರೆ, ಇತ್ತೀಚಿನ ಅಧ್ಯಯನ ವರದಿಯೊಂದು ಆರೋಪವನ್ನು ಹುಸಿ ಮಾಡಿದೆ. ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಸಮಿತಿ(Economic Advisory Council) ಅಧ್ಯಯನ ವರದಿ ಬಿಡುಗಡೆಯಾಗಿದ್ದು, ಮೋದಿ ನೇತೃತ್ವದ ಸರ್ಕಾರವು 2015-16ರಿಂದ 2019-21ರವರೆಗೆ ಕೇವಲ ಒಂದು ಸಮುದಾಯ ಅಥವಾ ಧರ್ಮದ ಪರವಾಗಿದೆ ಎಂಬುದಕ್ಕೆ ಸಾಕ್ಷ್ಯಗಳಿಲ್ಲ. ಕೆಲವು ಪ್ರಕರಣಗಳಲ್ಲಿ ಬಹುಸಂಖ್ಯಾತರಿಗಿಂತಲೂ ಅಲ್ಪಸಂಖ್ಯಾತರೇ ಸರ್ಕಾರಿ ನೀತಿಗಳ ಹೆಚ್ಚಿನ ಲಾಭವನ್ನು ಪಡೆದುಕೊಂಡಿದ್ದಾರೆ ಎಂದು ಹೇಳಿದೆ(Study Report).

A Secular Democracy in Practice: Objective Assessment of Amenities Programs in India ಯಶೀರ್ಷಿಕೆಯಡಿ ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಸಮಿತಿಯ ಸದಸ್ಯೆ ಮತ್ತು ಅರ್ಥಶಾಸ್ತ್ರಜ್ಞೆ ಶಮಿಕಾ ರವಿ ನಡೆಸಿದ ಅಧ್ಯಯನವು ವಿದ್ಯುತ್, ಬ್ಯಾಂಕ್ ಖಾತೆಗಳು, ಮೊಬೈಲ್‌ಗಳು ಮತ್ತು ಶೌಚಾಲಯ ನಿರ್ಮಾಣ ಲಾಭಗಳನ್ನು ಪರಿಶೀಲಿಸಿದೆ. ಭಾರತದಲ್ಲಿ ಪ್ರಜಾಪ್ರಭುತ್ವವು ಕ್ಷೀಣಿಸುತ್ತಿದೆ ಎಂಬ ಪ್ರತಿಪಕ್ಷಗಳ ಆರೋಪವನ್ನು ಈ ಡೇಟಾ ಅಲ್ಲಗಳೆದಿದೆ.

ಧರ್ಮಗಳು, ಸಾಮಾಜಿಕ ಗುಂಪುಗಳು ಮತ್ತು ನಂಬಿಕೆಯ ಆಧಾರದ ಮೇಲೆ ಪ್ರಾದೇಶಿಕವಾಗಿ ಸೌಕರ್ಯಗಳನ್ನು ಒದಗಿಸುವಲ್ಲಿನ ಬದಲಾವಣೆಗಳನ್ನು ಪ್ರಮಾಣೀಕರಿಸುವ ಮೂಲಕ, ಈ ವರದಿಯು 2014ರಿಂದ ಭಾರತದಲ್ಲಿ ಪ್ರಜಾಪ್ರಭುತ್ವವು ಕ್ಷೀಣಿಸುತ್ತಿದೆ ಎಂಬ ಜನಪ್ರಿಯ ಗ್ರಹಿಕೆ ಆಧಾರಿತ ನಿರೂಪಣೆಗೆ ಸವಾಲು ಹಾಕುತ್ತದೆ. ಇದಕ್ಕೆ ವಿರುದ್ಧವಾದ ಸತ್ಯ ಸಂಗತಿಗಳು ಅಧ್ಯಯನ ವರದಿಯಲ್ಲಿ ಬಹಿರಂಗಗೊಂಡಿವೆ. ಇದಕ್ಕೆ ತದ್ವಿರುದ್ಧ ಸತ್ಯ ಸಂಗತಿಗಳು ವರದಿಯಲ್ಲಿ ವ್ಯಕ್ತವಾಗಿವೆ. ಧರ್ಮ, ಜಾತಿ ಅಥವಾ ಪ್ರದೇಶವನ್ನು ಲೆಕ್ಕಿಸದೆ ಸಮಾಜದ ಅಂಚಿನಲ್ಲಿರುವ ವರ್ಗದ ಅಗತ್ಯಗಳಿಗೆ ಸರ್ಕಾರವು ಸ್ಪಂದಿಸುತ್ತಾ ಬಂದಿದೆ. ಇದು ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಬಲಪಡಿಸುವ ಪರ್ಯಾಯ ಮತ್ತು ಹೆಚ್ಚು ದೃಢವಾದ ಸೂಚಕವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಒಟ್ಟು 155 ಲಕ್ಷ ಕೋಟಿ ರೂ. ಸಾಲ ಇದೆ ಎಂದ ಸೀತಾರಾಮನ್, ಮೋದಿ ಸರ್ಕಾರದಿಂದಲೇ 100 ಲಕ್ಷ ಕೋಟಿ ಸಾಲ?

ಈ ಅಧ್ಯಯನ ವರದಿ ರೂಪಿಸಲು 2025-16 ಮತ್ತು 2019-21ರಲ್ಲಿ ಸುಮಾರು 1.2 ಮಿಲಿಯನ್ ಮನೆಗಳಿಂದ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಸರ್ಕಾರವು ಕೇವಲ ಒಂದು ಸಮುದಾಯಕ್ಕೆ (ಹಿಂದೂ) ಮೀಸಲಾಗಿರದೇ ಅಥವಾ ಒಂದು ಧಾರ್ಮಿಕ ಸಮುದಾಯವು ಪ್ರಬಲವಾಗಿರುವ ಜಿಲ್ಲೆಗಳ ಆಧಾರದ ಮೇಲೆ ಮನೆಗಳಲ್ಲಿ ತಾರತಮ್ಯವನ್ನು ಹೊಂದಿದೆ ಎಂಬುದಕ್ಕೆ ಯಾವುದೇ ಪುರಾವೆಗಳು ನಮಗೆ ಕಂಡುಬಂದಿಲ್ಲ. ವಿದ್ಯುತ್, ಬ್ಯಾಂಕ್ ಖಾತೆಗಳು, ಮೊಬೈಲ್‌ಗಳು ಮತ್ತು ಶೌಚಾಲಯ ನಿರ್ಮಾಣಕ್ಕೆ ಸಂಬಂಧಿಸಿದಂತೆ, ಲಾಭಗಳು ಧರ್ಮಗಳು ಮತ್ತು ಸಾಮಾಜಿಕ ಗುಂಪುಗಳಾದ್ಯಂತ ವ್ಯಾಪಕವಾಗಿವೆ. ವಾಸ್ತವವಾಗಿ, ಕೆಲವು ಸಂದರ್ಭಗಳಲ್ಲಿ, ಅಲ್ಪಸಂಖ್ಯಾತರು ಬಹು ಸಂಖ್ಯಾತರಗಿಂತಲೂ ಹೆಚ್ಚನ ಲಾಭವನ್ನು ಪಡೆದುಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.

Exit mobile version