Site icon Vistara News

Prashant Kishor: ರಾಹುಲ್ ಗಾಂಧಿ ನ್ಯಾಯ ಯಾತ್ರೆಗೆ ಲಾಜಿಕ್ಕೇ ಇಲ್ಲ! ಪ್ರಶಾಂತ್ ಕಿಶೋರ್ ಟೀಕೆ

No logic in Rahul Gandhi nyay yatra Says Prashant Kishor

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress Leader Rahul Gandhi) ಅವರು ಕೈಗೊಂಡಿರುವ ಭಾರತ್ ಜೋಡೋ ನ್ಯಾಯ್ ಯಾತ್ರೆಯ (Bharat Jodo Nyay Yatra) ಸಮಯದ ಬಗ್ಗೆ ಚುನಾವಣಾ ನಿಪುಣ ತಂತ್ರಜ್ಞ ಹಾಗೂ ಕಾರ್ಯಕರ್ತ ಪ್ರಶಾಂತ್ ಕಿಶೋರ್ (Prashant Kishor) ಅವರು ಟೀಕಿಸಿದ್ದಾರೆ. ಅಲ್ಲದೇ, ಅವರು ಕೈಗೊಂಡಿರುವ ಯಾತ್ರೆಗೆ ಯಾವುದೇ ಲಾಜಿಕ್ (No Logic) ಇಲ್ಲ ಎಂದು ಹೇಳಿದ್ದಾರೆ.

ಯಾತ್ರೆಗಳ ಪ್ರಯತ್ನಕ್ಕೆ ಸಮಯವು ಸೂಕ್ತವಲ್ಲ ಎಂದು ಅವರು ಒತ್ತಿಹೇಳಿ ಪ್ರಶಾಂತ್ ಕಿಶೋರ್, “ಯಾರು ಅವರಿಗೆ ಸಲಹೆ ನೀಡುತ್ತಿದ್ದಾರೆಂದು ನೋಡಿ. ನೀವು ಪ್ರಧಾನ ಕಚೇರಿಯನ್ನು ಬಿಟ್ಟು ಯಾತ್ರೆಗೆ ಹೋಗಲು ಇದು ಅತ್ಯಂತ ಕೆಟ್ಟ ಸಮಯವಾಗಿದೆ” ಎಂದು ತಿಳಿಸಿದರು.

ಯಾತ್ರೆ ಕೈಗೊಳ್ಳಲು ಇದ ಸೂಕ್ತ ಸಮಯವಲ್ಲ. ಯಾರು ಅವರಿಗೆ ಸಲಹೆ ನೀಡುತ್ತಿದ್ದಾರೆ ಗೊತ್ತಿಲ್ಲ. ಈ ಸಮಯದಲ್ಲಿ ನೀವು ಪಕ್ಷದ ಪ್ರಧಾನ ಕಚೇರಿಯಲ್ಲಿರಬೇಕು. ಚುನಾವಣೆ ಹತ್ತಿರ ಇರುವಾಗ ಇದು ಯಾತ್ರೆ ಕೈಗೊಳ್ಳಲು ಅತ್ಯಂತ ಕೆಟ್ಟ ಸಮಯವಾಗಿದೆ ಎಂದು ಪ್ರಶಾಂತ್ ಕಿಶೋರ್ ಅವರು ಹೇಳಿದ್ದಾರೆ.

ಜನವರಿ 14 ರಂದು ಮಣಿಪುರದಲ್ಲಿ ಆರಂಭವಾದ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ 67 ದಿನಗಳಲ್ಲಿ 6,713 ಕಿಲೋಮೀಟರ್ ಕ್ರಮಿಸಲಿದ್ದು, 15 ರಾಜ್ಯಗಳ 110 ಜಿಲ್ಲೆಗಳ ಮೂಲಕ ಹಾದುಹೋಗಲಿದ್ದು, ಮಾರ್ಚ್ 20 ರಂದು ಮುಂಬೈನಲ್ಲಿ ಮುಕ್ತಾಯಗೊಳ್ಳಲಿದೆ. ಸಾರ್ವತ್ರಿಕ ಚುನಾವಣೆಯು ಏಪ್ರಿಲ್ ಮತ್ತು ಮೇ ತಿಂಗಳ ನಡುವೆ ನಡೆಯುವ ಸಾಧ್ಯತೆ ಇದೆ.

ಅಲ್ಲದೇ ಈ ಯಾತ್ರೆಯ ಹಿಂದಿನ ಲಾಜಿಕ್ ಕೂಡ ಅರ್ಥವಾಗುತ್ತಿಲ್ಲ ಎಂದು ಪ್ರಶಾಂತ್ ಕಿಶೋರ್ ಅವರು ಟೀಕಿಸಿದ್ದಾರೆ. ರಾಜಕೀಯ ನಡೆಯುವ ಸಮಯದಲ್ಲಿ ಪ್ರಧಾನವಾಗಿ ಇರಬೇಕಾದ ಸಂದರ್ಭವಿದು. ಆದರೆ, ಅವರು ಈಶಾನ್ಯದಲ್ಲಿ ಯಾತ್ರೆಯಲ್ಲಿ ನಿರತರಾಗಿದ್ದಾರೆ. ಪ್ರದೇಶಗಳಿಗೆ ಭೇಟಿ ನೀಡುವುದು ಉತ್ತಮ. ಆದರೆ ಪ್ರಧಾನ ಕಛೇರಿಯನ್ನು ಬಿಡುವುದು ಖಂಡಿತವಾಗಿಯೂ ಬುದ್ಧಿವಂತ ಕ್ರಮವಲ್ಲ. ಈ ವಿಚಾರಗಳಲ್ಲಿ ಅವರಿಗೆ ಯಾರು ಸಲಹೆ ನೀಡುತ್ತಿದ್ದಾರೆಂದು ನನಗೆ ತಿಳಿದಿಲ್ಲ ಎಂದು ಪ್ರಶಾಂತ್ ಕಿಶೋರ್ ಅವರು ಹೇಳಿದ್ದಾರೆ.

ಪ್ರಶಾಂತ್ ಕಿಶೋರ್ ಅವರು ‘ಜನ್ ಸುರಾಜ್’ ಬ್ಯಾನರ್ ಅಡಿಯಲ್ಲಿ ಬಿಹಾರದಾದ್ಯಂತ ಪಾದಯಾತ್ರೆ ನಡೆಸುತ್ತಿದ್ದಾರೆ. ಈ ಯಾತ್ರೆಯನ್ನು ಅವರು 2022 ರಲ್ಲಿ ಆರಂಭಿಸಿದ್ದು, ಜನ್ ಸುರಾಜ್ ಅಭಿಯಾನವನ್ನು ರಾಜಕೀಯ ಪಕ್ಷವಾಗಿ ಪರಿವರ್ತಿಸುವ ಬಗ್ಗೆ ಅವರು ಘೋಷಣೆ ಮಾಡುವ ನಿರೀಕ್ಷೆ ಇದೆ.

ಈ ಸುದ್ದಿಯನ್ನೂ ಓದಿ: Budget 2024: ಕೇಂದ್ರ ಬಜೆಟ್‌ನಲ್ಲಿ ಅನ್ಯಾಯ; ದೆಹಲಿಯಲ್ಲಿ ಫೆ.7ಕ್ಕೆ ರಾಜ್ಯ ಸರ್ಕಾರದ ಪ್ರತಿಭಟನೆ ಎಂದ ಡಿಕೆಶಿ!

Exit mobile version