Site icon Vistara News

Nagaland Election Result: ನಾಗಾಲ್ಯಾಂಡ್‌ ಅಸೆಂಬ್ಲಿಯಲ್ಲಿ ಪ್ರತಿಪಕ್ಷವೇ ಇಲ್ಲ! ಇದು ಎಲ್ಲ ಪಕ್ಷಗಳ ಸರ್ಕಾರ

No opposition in Nagaland Assembly and there will all party government

ನವದೆಹಲಿ: ಇತ್ತೀಚೆಗಷ್ಟೇ ನಾಗಾಲ್ಯಾಂಡ್‌ನಲ್ಲಿ ವಿಧಾನಸಭೆ ಚುನಾವಣೆ ಮುಕ್ತಾಯವಾಗಿದೆ. ಈಶಾನ್ಯ ಭಾರತದ ಈ ರಾಜ್ಯದಲ್ಲಿ ಬಹಳಷ್ಟು ರಾಜಕೀಯ ಪಕ್ಷಗಳಿವೆ. ಆದರೆ, ಈ ಬಾರಿ ಅಧಿಕೃತ ಪ್ರತಿಪಕ್ಷವೇ ಇಲ್ಲದಂಥ ಸ್ಥಿತಿ ನಿರ್ಮಾಣವಾಗಿದೆ! ಹೌದು, ಚುನಾವಣೆಯಲ್ಲಿ ಎನ್‌ಡಿಪಿಪಿ ಮತ್ತು ಬಿಜೆಪಿಗಳೆರಡೂ ಮೈತ್ರಿ ಮಾಡಿಕೊಂಡಿದ್ದು, ಕ್ರಮವಾಗಿ 25 ಮತ್ತು 12 ಸ್ಥಾನಗಳನ್ನು ಗೆದ್ದುಕೊಂಡಿವೆ. ನಾಗಾಲ್ಯಾಂಡ್ ವಿಧಾನಸಭೆ ಬಲ 60. ಸರ್ಕಾರ ರಚಿಸಲು 31 ಸದಸ್ಯರ ಬಲ ಬೇಕು. ಎನ್‌ಡಿಪಿಪಿ ಮತ್ತು ಬಿಜೆಪಿ ಬಳಿ 37 ಸದಸ್ಯರಿದ್ದಾರೆ. ಹಾಗಾಗಿ, ಯಾವುದೇ ತೊಂದರೆ ಇಲ್ಲದೇ ಸರ್ಕಾರ ರಚಿಸಬಹುದು(Nagaland Election Result).

ಇನ್ನು ಎನ್‌ಸಿಪಿ 7, ಎನ್‌ಪಿಪಿ 5, ಎಲ್‌ಜೆಪಿ(ರಾಮ್ ವಿಲಾಸ್), ಎನ್‌ಪಿಎಫ್, ಆರ್‌ಪಿಐ ತಲಾ ಎರಡು ಹಾಗೂ ಜೆಡಿಯು 1 ಮತ್ತು ನಾಲ್ವರು ಪಕ್ಷೇತರರು ಗೆದ್ದಿದ್ದಾರೆ. ಎನ್‌ಡಿಪಿ ಮತ್ತು ಬಿಜೆಪಿಗಳು ಸರ್ಕಾರ ರಚಿಸಲು ಇನ್ನಷ್ಟೇ ಹಕ್ಕು ಮಂಡಿಸಬೇಕಿದೆ. ಆದರೆ, ಆಗಲೇ ಹಲವು ಪಕ್ಷಗಳು ತಮ್ಮ ಬೆಂಬಲವನ್ನು ಈ ಕೂಟಕ್ಕೆ ನೀಡಿವೆ.

ಎಲ್‌ಜೆಡಿ ಮತ್ತು ಆರ್‌ಪಿಐಗಳೆರಡೂ ತಮ್ಮ ಬೆಂಬಲ ಪತ್ರವನ್ನು ಎನ್‌ಡಿಪಿಪಿ-ಬಿಜೆಪಿಗೆ ನೀಡಿವೆ. ಹಾಗೆಯೇ, ಮೂರನೇ ಅತಿದೊಡ್ಡ ಪಕ್ಷವಾಗಿರುವ ಎನ್‌ಸಿಪಿ ಕೂಡ ಎನ್‌ಡಿಪಿಪಿಗೆ ಬೆಂಬಲ ವ್ಯಕ್ತಪಡಿಸಿದೆ. ಮತ್ತೊಂದೆಡೆ, ಎನ್‌ಫಿಎಫ್ ಕೂಡ ಬೆಂಬಲ ನೀಡುವ ಬಗ್ಗೆ ಯೋಚನೆ ಮಾಡುತ್ತಿದೆ. ಎನ್‌ಪಿಎಫ್ ಕೂಡ ಇಬ್ಬರು ಸದಸ್ಯರನ್ನು ಹೊಂದಿದೆ. ಎಲ್ಲ ಪಕ್ಷಗಳು ತಮ್ಮ ಬೆಂಬಲವನ್ನು ನೀಡುತ್ತಿರುವುದರಿಂದ ನಾಗಾಲ್ಯಾಂಡ್‌ನಲ್ಲಿ ಎಲ್ಲ ಪಕ್ಷಗಳ ಸರ್ಕಾರ ರಚನೆಯಾಗುವ ಸಾಧ್ಯತೆಗಳಿವೆ.

ಇದನ್ನೂ ಓದಿ: Meghalaya Election Result: ಎನ್‌ಪಿಪಿ ನಾಯಕ ಸಂಗ್ಮಾಗೆ 45 ಶಾಸಕರ ಬೆಂಬಲ, ನೂತನ ಎಂಎಲ್‌ಎಗಳ ಅಧಿಕಾರ ಸ್ವೀಕಾರ

2015 ಮತ್ತು 2021ರಲ್ಲೂ ಇದೇ ರೀತಿಯ ಸರ್ಕಾರ ರಚನೆಯಾಗಿದ್ದವು. ಆದರೆ, ಇದೇ ಮೊದಲ ಬಾರಿಗೆ ಪ್ರತಿಪಕ್ಷವಿಲ್ಲದೇ ಸರ್ಕಾರ ರಚನೆಯಾಗುವ ಸಾಧ್ಯತೆಗಳು ಹೆಚ್ಚಾಗಿವೆ. ವಿಶೇಷ ಎಂದರೆ, ಆಯ್ಕೆಯಾಗಿರುವ ಶಾಸಕರು ಪ್ರತಿಜ್ಞಾವಿಧಿ ಸ್ವೀಕರಿಸುವ ಮೊದಲೇ ಇಂಥದೊಂದು ಪ್ರಕ್ರಿಯೆಗೆ ವೇದಿಕೆ ಸಿದ್ಧವಾಗುತ್ತಿದೆ.

Exit mobile version