ಶಿಮ್ಲಾ: ಅರುಣಾಚಲ ಪ್ರದೇಶದ ಗಡಿಯಲ್ಲಿ ಭಾರತ ಹಾಗೂ ಚೀನಾ ಸೈನಿಕರ ಮಧ್ಯೆ ಸಂಘರ್ಷ ನಡೆದ ಬೆನ್ನಲ್ಲೇ, “ನಾನು ಯಾವುದೇ ಕಾರಣಕ್ಕೂ ಚೀನಾಗೆ ತೆರಳುವುದಿಲ್ಲ” ಎಂದು ಟಿಬೆಟ್ ಬೌದ್ಧ ಧರ್ಮಗುರು ದಲಾಯಿ ಲಾಮಾ (Dalai Lama) ಸ್ಪಷ್ಟಪಡಿಸಿದ್ದಾರೆ.
“ನಾನು ಯಾವುದೇ ಕಾರಣಕ್ಕೂ ಚೀನಾಗೆ ಭೇಟಿ ನೀಡುವುದಿಲ್ಲ. ನನ್ನ ಕೊನೆಯ ಉಸಿರಿರುವವರೆಗೂ ಭಾರತದಲ್ಲಿಯೇ ಇರಲು ಇಷ್ಟಪಡುತ್ತೇನೆ. ಹಿಮಾಚಲ ಪ್ರದೇಶದ ಕಾಂಗ್ರಾದಲ್ಲಿಯೇ ನನ್ನ ಕಾಯಂ ವಾಸ” ಎಂದರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಗಡಿಯಲ್ಲಿ ಭಾರತದ ಜತೆ ಸಂಘರ್ಷಕ್ಕೆ ಇಳಿದ ಚೀನಾಗೆ ಯಾವ ಸಂದೇಶ ರವಾನಿಸುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಪರಿಸ್ಥಿತಿ ಸುಧಾರಣೆಯಾಗುತ್ತಿದೆ. ಯುರೋಪ್, ಆಫ್ರಿಕಾ ಹಾಗೂ ಏಷ್ಯಾದಲ್ಲಿ ಚೀನಾ ಉದಾರ ನೀತಿ ಅನುಸರಿಸುತ್ತಿದೆ” ಎಂದಷ್ಟೇ ಹೇಳಿದ್ದಾರೆ.
ದಲಾಯಿ ಲಾಮಾ ಅವರು ಟಿಬೆಟ್ ಸ್ವಾತಂತ್ರ್ಯದ ಕುರಿತು ಜಗತ್ತಿನಾದ್ಯಂತ ಪ್ರತಿಪಾದನೆ ಮಾಡುವುದು ಚೀನಾಗೆ ಇಷ್ಟವಿಲ್ಲ. ಹಾಗಾಗಿಯೇ, ಕಳೆದ ಬಾರಿ ದಲಾಯಿ ಲಾಮಾ ಜನ್ಮದಿನಕ್ಕೆ ಮೋದಿ ಶುಭಾಶಯ ಕೋರಿದರೆ, ಅದಕ್ಕೆ ಚೀನಾ ವಿರೋಧ ವ್ಯಕ್ತಪಡಿಸಿತ್ತು.
ಇದನ್ನೂ ಓದಿ | ಸಂಪಾದಕೀಯ | ಚೀನಾದ ಉದ್ಧಟತನಕ್ಕೆ ತಕ್ಕ ಪ್ರತ್ಯುತ್ತರ ಅಗತ್ಯ