Site icon Vistara News

ಬೆಂಗಾಲಿ ಮುಸ್ಲಿಮರು ಬಹುಪತ್ನಿತ್ವ ತ್ಯಜಿಸಬೇಕು; ಹಿಮಂತ ಬಿಸ್ವಾ ಶರ್ಮಾ ಕಂಡಿಷನ್ಸ್‌ ಹೀಗಿವೆ

Himanta Biswa Sarma

Marry Again Now If You Want, Or Face Jail After UCC: Himanta Biswa Sarma To AIUDF Chief

ದಿಸ್ಪುರ: ದೇಶದಲ್ಲಿ ಮುಸ್ಲಿಮರಲ್ಲಿ ಆಚರಣೆಯಲ್ಲಿರುವ ಬಹುಪತ್ನಿತ್ವ (Polygamy) ರದ್ದುಗೊಳಿಸಬೇಕು ಎಂಬ ಒತ್ತಾಯ ಕೇಳಿಬರುತ್ತಿರುವ, ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫಘಾನಿಸ್ತಾನದ ಅಲ್ಪಸಂಖ್ಯಾತರಿಗೆ ಭಾರತದ ಪೌರತ್ವ ನೀಡುವ ಸಿಎಎ ಜಾರಿಗೆ ಬಂದಿರುವ ಬೆನ್ನಲ್ಲೇ, ಅಸ್ಸಾಂನಲ್ಲಿ ವಾಸಿಸುತ್ತಿರುವ ಬೆಂಗಾಲಿ ಮುಸ್ಲಿಮರಿಗೆ (Bengali speaking Bangladeshi Muslims) ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ಅವರು ಕೆಲ ಷರತ್ತುಗಳನ್ನು ವಿಧಿಸಿದ್ದಾರೆ. “ಅಸ್ಸಾಂನಲ್ಲಿರುವ ಬೆಂಗಾಲಿ ಮುಸ್ಲಿಮರು ಬಹುಪತ್ನಿತ್ವ, ಬಾಲ್ಯವಿವಾಹದಂತಹ ಆಚರಣೆಗಳನ್ನು ನಿಲ್ಲಿಸಬೇಕು” ಎಂದು ಹೇಳಿದ್ದಾರೆ.

“ಅಸ್ಸಾಂನಲ್ಲಿ ಬೆಂಗಾಲಿ ಮಾತನಾಡುವ ಬಾಂಗ್ಲಾದೇಶದ ಮುಸ್ಲಿಮರು (Miyas) ಸ್ಥಳೀಯರು ಎಂದು ಹೇಳಿಕೊಳ್ಳುತ್ತಾರೆ. ಅವರು ಅಸ್ಸಾಂನ ಸ್ಥಳೀಯರು ಎಂದು ಹೇಳಿಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ, ಬೆಂಗಾಲಿ ಮಾತನಾಡುವ ಬಾಂಗ್ಲಾದೇಶದ ಮುಸ್ಲಿಮರು ಸ್ಥಳೀಯರು ಎಂದು ಮಾನ್ಯತೆ ಪಡೆಯಬೇಕಾದರೆ ಕೆಲ ಆಚರಣೆಗಳನ್ನು ಬಿಡಬೇಕು. ಹೆಣ್ಣುಮಕ್ಕಳಿಗೆ ಬಾಲ್ಯದಲ್ಲಿಯೇ ಮದುವೆ ಮಾಡುವುದನ್ನು ನಿಲ್ಲಿಸಬೇಕು. ಅವರ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಬಹುಪತ್ನಿತ್ವ ಆಚರಣೆಯನ್ನು ನಿಲ್ಲಿಸಬೇಕು” ಎಂದು ಹೇಳಿದರು.

“ಬೆಂಗಾಲಿ ಮುಸ್ಲಿಮರು ಸ್ಥಳೀಯರು ಹೌದೋ, ಅಲ್ಲವೋ ಎಂಬುದು ಬೇರೆ ವಿಚಾರ. ನೀವು ಸ್ಥಳೀಯರಾಗಲು ಬಯಸುತ್ತಿದ್ದರೂ ಅದಕ್ಕೆ ಯಾವುದೇ ಬೇಸರ ಇಲ್ಲ. ಆದರೆ, ಸ್ಥಳೀಯರಾಗಬೇಕು ಎಂದರೆ ಕೆಲ ಆಚರಣೆಗಳನ್ನು ಬಿಡಬೇಕು. ಒಬ್ಬರು ಇಬ್ಬರು ಅಥವಾ ಮೂವರನ್ನು ಮದುವೆಯಾಗುವುದು ಅಸ್ಸಾಂನ ಸಂಸ್ಕೃತಿ ಅಲ್ಲ. ಅಸ್ಸಾಂನ ಶಾಸ್ತ್ರವನ್ನು ಯಾರೂ ಉಲ್ಲಂಘಿಸುವಂತಿಲ್ಲ. ಹಾಗಾಗಿ, ಬೆಂಗಾಲಿ ಮುಸ್ಲಿಮರು ಎರಡು-ಮೂರು ಮದುವೆಯಾಗುವುದು, ಹೆಚ್ಚಿನ ಮಕ್ಕಳನ್ನು ಹೆರುವುದು ಸರಿಯಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಾಬರ್‌ನನ್ನು ಪ್ರೀತಿಸುವ ಕಾಂಗ್ರೆಸ್‌ ಮಂದಿರಕ್ಕೆ ಬರದಿರುವುದೇ ಸರಿ; ಹಿಮಂತ ಬಿಸ್ವಾ ಟಾಂಗ್

ಕೆಲ ತಿಂಗಳ ಹಿಂದೆಯೂ ಹಿಮಂತ ಬಿಸ್ವಾ ಶರ್ಮಾ ಅವರು ಮುಸ್ಲಿಮರ ಬಗ್ಗೆ ಮಾತನಾಡಿದ್ದರು. “ಬಿಜೆಪಿಯು ಜನ ಕಲ್ಯಾಣ ಯೋಜನೆಗಳನ್ನು ಜಾರಿಗೆ ತರುತ್ತದೆ ಹಾಗೂ ಮುಸ್ಲಿಮರು (ಬಿಸ್ವಾ ಕರೆಯುವುದು ಮಿಯಾ ಎಂದು) ನಮನ್ನು ಬೆಂಬಲಿಸುತ್ತಾರೆ. ಆದರೆ, ಮುಂದಿನ 10 ವರ್ಷಗಳವರೆಗೆ ಮುಸ್ಲಿಮರು ಬಿಜೆಪಿಗೆ ಮತ ಹಾಕಬೇಕಿಲ್ಲ. ನಾವು ಜನಕಲ್ಯಾಣ ಯೋಜೆನೆಗಳನ್ನು ಜಾರಿಗೆ ತಂದು, ಮುಸ್ಲಿಮರು ಕೂಡ ನರೇಂದ್ರ ಮೋದಿ ಜಿಂದಾಬಾದ್‌, ಹಿಮಂತ ಬಿಸ್ವಾ ಜಿಂದಾಬಾದ್‌, ಬಿಜೆಪಿ ಜಿಂದಾಬಾದ್‌ ಎಂಬ ಸಮಯ ಬಂದಾಗ ಅವರು ನಮಗೆ ಮತ ಹಾಕಲಿ” ಎಂದು ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version