ನವದೆಹಲಿ: ಆಟದ ಮೈದಾನ ಇಲ್ಲದೇ ಶಾಲೆ ಇರುವಂತಿಲ್ಲ ಎಂದು ಸುಪ್ರೀಂ ಕೋರ್ಟ್(Supreme Court) ಹೇಳಿದೆ. ಹರ್ಯಾಣದ ಶಾಲಾ ಮೈದಾನ ಒತ್ತುವರಿ ತೆರುವಿಗೆ ಆದೇಶ ನೀಡಿ, ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ಜಸ್ಟೀಸ್ ಎಂ ಆರ್ ಶಾ, ಜಸ್ಟೀಸ್ ಬಿ ವಿ ನಾಗರತ್ನ ಅವರಿದ್ಧ ಪೀಠವು, ನಿರ್ದಿಷ್ಟ ಪ್ರಕರಣವೊಂದರಲ್ಲಿ ಶಾಲೆಯ ಮೈದಾನಕ್ಕೆ ಸಂಬಂಧಿಸಿದಂತೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ 2016 ರ ಆದೇಶವನ್ನು ಅತ್ಯಂತ ಗಂಭೀರ ದೋಷ ಎಂದು ಬಣ್ಣಿಸಿದೆ. ಮೈದಾನವನ್ನು ಅತಿಕ್ರಮಿಸಿರುವವರಿಗೆ ಮಾರುಕಟ್ಟೆ ಬೆಲೆಯ ಪಾವತಿ ಮಾಡಲು ಹೇಳಿ, ಅವರಿಗೆ ಶಾಲಾ ಭೂಮಿಯನ್ನು ಅನಧಿಕೃತವಾಗಿ ವಶಪಡಿಸಿಕೊಳ್ಳುವುದನ್ನು ಕಾನೂನುಬದ್ಧಗೊಳಿಸುವಂತೆ ಅಧಿಕಾರಿಗಳಿಗೆ ಹೈಕೋರ್ಟ್ ನಿರ್ದೇಶನ ನೀಡಿತ್ತು.
ಹೈಕೋರ್ಟ್ ಮತ್ತು ಸಂಬಂಧಿತ ಅಧಿಕಾರಿಗಳ ಎಲ್ಲಾ ಆದೇಶಗಳನ್ನು ಪರಿಶೀಲಿಸಲಾಗಿದ್ದು, ಹೊಸ ಗಡಿರೇಖೆಯ ಪ್ರಕಾರ, ಮೂಲ ರಿಟ್ ಅರ್ಜಿದಾರರು (ಏಳು ಗ್ರಾಮಸ್ಥರು) ಭಗವಾನ್ ಪುರ ಗ್ರಾಮ ಪಂಚಾಯತ್ ಭೂಮಿಯನ್ನು ಅಕ್ರಮ ಮತ್ತು ಅನಧಿಕೃತವಾಗಿ ವಶಪಡಿಸಿಕೊಂಡಿದ್ದಾರೆ ಎಂಬುದಕ್ಕೆ ಯಾವುದೇ ವಿವಾದವಿಲ್ಲ. ಆದರೆ, ಹರಿಯಾಣದ ಯಮುನಾ ನಗರ ಜಿಲ್ಲೆಯಲ್ಲಿ 4 ಮಾರ್ಲಾ ಮತ್ತು 15 ಮರ್ಲಾಗಳನ್ನು ಶಾಲೆಯ ಉದ್ದೇಶಕ್ಕಾಗಿ ಕಾಯ್ದಿರಿಸಲಾಗಿದೆ ಎಂದು ಪೀಠವು ಹೇಳಿತು.
ಇದನ್ನೂ ಓದಿ: ಬಸವನಗುಡಿ ಮೈದಾನದಲ್ಲಿ ಕಾಲೇಜ್ ನಿರ್ಮಾಣ: ರವಿಸುಬ್ರಹ್ಮಣ್ಯ-ಶಂಕರ ಗುಹಾ ವಾಗ್ವಾದ, ಜಟಾಪಟಿ
ಅಲ್ಲಿ ಆಟದ ಮೈದಾನವೇ ಇಲ್ಲ. ಮೂಲ ರಿಟ್ ಅರ್ಜಿದಾರರು ಶಾಲೆಯ ಸುತ್ತಮುತ್ತ ಅನಧಿಕೃತವಾಗಿ ಕಟ್ಟಡಗಳನ್ನು ನಿರ್ಮಾಣ ಮಾಡಿದ್ದಾರೆ. ಆದ್ದರಿಂದ ಶಾಲೆ ಹಾಗೂ ಆಟದ ಮೈದಾನಕ್ಕೆ ಮೀಸಲಿಟ್ಟಿರುವ ಜಮೀನನ್ನು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡು ಒತ್ತುವರಿ ಮಾಡಿಕೊಂಡಿರುವುದನ್ನು ಸಕ್ರಮಗೊಳಿಸುವಂತೆ ನಿರ್ದೇಶನ ನೀಡುವಂತಿಲ್ಲ. ಆಟದ ಮೈದಾನವಿಲ್ಲದೆ ಯಾವುದೇ ಶಾಲೆ ಇರಲು ಸಾಧ್ಯವಿಲ್ಲ. ಇಂತಹ ಶಾಲೆಯಲ್ಲಿ ಓದುವ ವಿದ್ಯಾರ್ಥಿಗಳು ಕೂಡ ಉತ್ತಮ ಪರಿಸರಕ್ಕೆ ಅರ್ಹರು ಎಂದು ಪೀಠ ಹೇಳಿದೆ.