Site icon Vistara News

Viksit Bharat Yatra: 5 ರಾಜ್ಯಗಳಲ್ಲಿ ಕೇಂದ್ರದ ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ ಅಂಕುಶ

Narendra Modi

No Viksit Bharat Sankalp Yatra in election bound states till Dec 5: Poll body

ನವದೆಹಲಿ: ನವೆಂಬರ್‌ 15ರಿಂದ ಕೇಂದ್ರ ಸರ್ಕಾರವು ದೇಶಾದ್ಯಂತ ಕೈಗೊಳ್ಳಲು ಉದ್ದೇಶಿಸಿದ್ದ ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ (Viksit Bharat Yatra) ಚುನಾವಣೆ ಆಯೋಗವು ಐದು ರಾಜ್ಯಗಳಲ್ಲಿ ಅಂಕುಶ ಹಾಕಿದೆ. ತೆಲಂಗಾಣ, ಛತ್ತೀಸ್‌ಗಢ, ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಮಿಜೋರಾಂನಲ್ಲಿ ವಿಧಾನಸಭೆ ಚುನಾವಣೆ (Assembly Elections 2024) ಘೋಷಣೆ ಆಗಿರುವುದರಿಂದ ಹಾಗೂ ಈಗಾಗಲೇ ನೀತಿ ಸಂಹಿತೆ ಜಾರಿಗೆ ಬಂದಿರುವುದರಿಂದ ಯಾತ್ರೆಗೆ ಅವಕಾಶವಿಲ್ಲ ಎಂದು ಚುನಾವಣೆ ಆಯೋಗ ತಿಳಿಸಿದೆ.

ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ದೇಶದ ಜನರಿಗೆ ಕೇಂದ್ರ ಸರ್ಕಾರದ ಯೋಜನೆಗಳು ಹಾಗೂ ಸಾಧನೆಗಳನ್ನು ತಿಳಿಸುವ ದಿಸೆಯಲ್ಲಿ ಕೇಂದ್ರ ಸರ್ಕಾರವು ಯಾತ್ರೆ ಕೈಗೊಳ್ಳಲು ತೀರ್ಮಾನಿಸಿದೆ. ಆದರೆ, ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಯಾತ್ರೆಗೆ ಆಯೋಗವು ತಡೆಯೊಡ್ಡಿದೆ. ಸಂಪುಟ ಕಾರ್ಯದರ್ಶಿ ರಾಜೀವ್‌ ಗೌಬಾ ಅವರಿಗೆ ಚುನಾವಣೆ ಆಯೋಗವು ಪತ್ರ ಬರೆದಿದ್ದು, “ಐದು ರಾಜ್ಯಗಳು ಹಾಗೂ ನಾಗಾಲ್ಯಾಂಡ್‌ನ ತಾಪಿ (ಉಪ ಚುನಾವಣೆ) ವಿಧಾನಸಭೆ ಕ್ಷೇತ್ರದಲ್ಲಿ ಜಿಲ್ಲಾ ರಥ ಪ್ರಭಾರಿಗಳನ್ನು ನೇಮಿಸಬಾರದು” ಎಂದು ಸೂಚಿಸಿದೆ.

ಏನಿದು ಯಾತ್ರೆ?

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜನಕಲ್ಯಾಣ ಯೋಜನೆಗಳ ಯಾವುದೇ ಸೌಕರ್ಯಗಳು, ಸೌಲಭ್ಯಗಳು ಜನರಿಗೆ ವಿಳಂಬವಾಗಬಾರದು. ಆರು ತಿಂಗಳಲ್ಲಿ ಅರ್ಹ ಫಲಾನುಭವಿಗಳಿಗೆ ಸಕಲ ಸೌಲಭ್ಯಗಳು ಕೂಡ ದೊರೆತಿರಬೇಕು ಎಂಬುದಾಗಿ ನರೇಂದ್ರ ಮೋದಿ ಅವರು ಸಚಿವರು, ಸಂಸದರು, ಅಧಿಕಾರಿಗಳಿಗೆ ಗಡುವು ನೀಡಿದ್ದಾರೆ. ಅಷ್ಟೇ ಅಲ್ಲ, ದೇಶಾದ್ಯಂತ 2.7 ಲಕ್ಷ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕೈಗೊಳ್ಳುವ ಮೂಲಕ ಜನರಿಗೆ ಯೋಜನೆಗಳ ಮಾಹಿತಿ, ಯೋಜನೆಗಳ ಸೌಲಭ್ಯ ಪಡೆಯುವ ಕುರಿತು ಜಾಗೃತಿ ಮೂಡಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಮತ್ತೊಂದೆಡೆ, ಕೇಂದ್ರದ ಯೋಜನೆಗಳನ್ನು ಜನರಿಗೆ ತಿಳಿಸುವ ಯಾತ್ರೆಗೆ ಅಧಿಕಾರಿಗಳನ್ನು (ಜಿಲ್ಲಾ ರಥ ಪ್ರಭಾರಿಗಳನ್ನಾಗಿ ನೇಮಿಸುವುದು) ನೇಮಿಸುವ ಕುರಿತು ಆಕ್ರೋಶ ವ್ಯಕ್ತವಾಗಿದೆ.

ಇದನ್ನೂ ಓದಿ: ಲೋಕಸಭೆ ಚುನಾವಣೆಗೆ ಮೋದಿ ಮಾಸ್ಟರ್‌ ಪ್ಲಾನ್;‌ ಜನರ ಮನೆ ಬಾಗಿಲಿಗೇ ಬರಲಿದೆ ಸರ್ಕಾರ!

ಯೋಜನೆ ಜಾರಿಗೆ ಗಡುವು

ಪ್ರಮುಖ 10 ಜನಕಲ್ಯಾಣ ಯೋಜನೆಗಳ ಜಾರಿಗೆ ಮೋದಿ ಗಡುವು ನೀಡಿದ್ದಾರೆ. ಪ್ರಧಾನಮಂತ್ರಿ ಜನಧನ್‌ ಯೋಜನೆ (PMJDY), ಪ್ರಧಾನಮಂತ್ರಿ ಉಜ್ವಲ ಯೋಜನೆ (PMUY), ಪ್ರಧಾನಮಂತ್ರಿ ಆವಾಸ್‌ ಯೋಜನೆ (PMAY), ಪ್ರಧಾನಮಂತ್ರಿ ಗ್ರಾಮ ಸಡಕ್‌ ಯೋಜನೆ (PMGSY), ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆ (PM-KISAN), ಸ್ವಚ್ಛ ಭಾರತ ಮಿಷನ್‌ (ಗ್ರಾಮೀಣ)… ಹೀಗೆ ಜನರಿಗೆ ನೀರು, ಬ್ಯಾಂಕ್‌ ಖಾತೆ, ಉದ್ಯೋಗ, ನಗದು ಸೇರಿ ಹಲವು ಸೌಕರ್ಯಗಳು ಸಿಗುವ ಜನಕಲ್ಯಾಣ ಯೋಜನೆಗಳ ಜಾರಿಗೆ ಮೋದಿ ಡೆಡ್‌ಲೈನ್‌ ನೀಡಿದ್ದಾರೆ.

Exit mobile version