Site icon Vistara News

ಥಾರ್​ಗೆ ಕೇವಲ 700 ರೂಪಾಯಿ; ಮಗುವಿನ ಮಾತಿಗೆ ತಲೆದೂಗಿದ ಮಹೀಂದ್ರಾ ಕಂಪನಿ ಮಾಲೀಕ!

Anand Mahindra

ನವ ದೆಹಲಿ: ಉದ್ಯಮಿ ಆನಂದ್ ಮಹೀಂದ್ರಾ ಸಾಮಾಜಿಕ ಮಾಧ್ಯಮಗಳನ್ನು ಆಗಾಗ ವಿಭಿನ್ನ ಕಾರಣಗಳಿಗೆ ಬಳಸುತ್ತಾರೆ. ಅದರ ಮೂಲಕವೇ ಗಮನ ಸೆಳೆಯುತ್ತಾರೆ. ಅಂತೆಯೇ ಅವರು ಇತ್ತೀಚೆಗೆ ವೈರಲ್ ವಿಡಿಯೊವೊಂದಕ್ಕೆ ನೀಡಿದ ಪ್ರತಿಕ್ರಿಯೆಯೊಂದು ನೆಟ್ಟಿಗರ ಗಮನ ಸೆಳೆದಿದೆ. ಈ ಬಾರಿ ಮಹೀಂದ್ರಾ ಕಂಪನಿಯ ಥಾರ್ (Mahindra Thar) ಕಾರನ್ನು ಕೇವಲ 700 ರೂ.ಗೆ ಖರೀದಿಸಬಹುದು ಎಂದು ಹೇಳುವ ಪುಟ್ಟ ಹುಡುಗನ ಮುದ್ದಾದ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಅವರು ನಿನ್ನ ಮಾತು ಕೇಳಿದ್ರೆ ನಾವು ದಿವಾಳಿಯಾಗುವುದು ಖಚಿತ ಎಂದು ಬರೆದುಕೊಂಡಿದ್ದಾರೆ.

1 ನಿಮಿಷ 29 ಸೆಕೆಂಡುಗಳ ವೀಡಿಯೊದಲ್ಲಿ, ನೋಯ್ಡಾ ಮೂಲದ ಚೀಕು ಯಾದವ್ ಎಂಬ ಪುಟಾಣಿ ತನ್ನ ತಂದೆಯೊಂದಿಗೆ ಪ್ರೀತಿಯ ಸಂಭಾಷಣೆಯನ್ನು ನಡೆಸಿದ್ದಾರೆ. ಅದರಲ್ಲಿ ಅವನು ಮಹೀಂದ್ರಾ ಥಾರ್ ಖರೀದಿಸುವ ಬಯಕೆಯನ್ನು ವ್ಯಕ್ತಪಡಿಸುತ್ತಾನೆ. ಮಹೀಂದ್ರಾ ಕಾರುಗಳಾದ ಥಾರ್ ಮತ್ತು ಎಕ್ಸ್ ಯುವಿ 700 ಒಂದೇ ಆಗಿವೆ, 700 ರೂಪಾಯಿಗೆ ಎರಡನ್ನೂ ಖರೀದಿಸಬಹುದು ಎಂದು ಮುಗ್ಧ ಬಾಲಕ ಹೇಳಿದ್ದಾನೆ.

ಮಗುವಿನ ತಪ್ಪು ತಿಳುವಳಿಕೆ ಸಾಮಾಜಿಕ ಮಾಧ್ಯಮ ಬಳಕೆದಾರರ ಗಮನ ಸೆಳೆದಿದೆ. ಜತೆಗೆ ನಗು ಕೂಡ ಮೂಡಿಸಿದೆ. ಅಂತೆಯೇ ಅದು ಆನಂದ್ ಮಹೀಂದ್ರಾ ಅವರ ಗಮನವನ್ನೂ ಸೆಳೆಯಿತು. ವೀಡಿಯೊವನ್ನು ಹಂಚಿಕೊಂಡಿರು ಅವರು ತಮ್ಮ ಕಂಪನಿಯು ಥಾರ್ ಅನ್ನು 700 ರೂಪಾಯಿಗೆ ಮಾರಾಟ ಮಾಡಿದರೆ ನಾನು ಶೀಘ್ರದಲ್ಲೇ ದಿವಾಳಿಯಾಗುತ್ತಣೆ ಎಂದು ಅವರು ವ್ಯಂಗ್ಯವಾಡಿದ್ದಾರೆ.

ಏನಿದೆ ಆನಂದ್​ ಮಹೀಂದ್ರಾ ಹೇಳಿಕೆ

ನನ್ನ ಸ್ನೇಹಿತ ಸೂನಿ ತಾರಾಪೊರೆವಾಲಾ ಇ ವಿಡಿಯೊವನ್ನು ನನಗೆ ಕಳುಹಿಸಿದರು “ನನಗೆ ಚೀಕು ಅಂದ್ರೆ ಇಷ್ಟ. ಆದ್ದರಿಂದ ನಾನು ಅವರ ಕೆಲವು ಪೋಸ್ಟ್​​ಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ (@cheekuthenoidakid) ನೋಡುತ್ತಿದ್ದೇನೆ. ಈಗಲೂ ಆತ ನನಗೆ ಇಷ್ಟ. ನನ್ನ ಏಕೈಕ ಸಮಸ್ಯೆಯೆಂದರೆ, ನಾವು ಆತನ ಮಾತನ್ನು ಒಪ್ಪಿ ಥಾರ್ ಅನ್ನು 700 ರೂಪಾಯಿಗಳಿಗೆ ಮಾರಾಟ ಮಾಡಿದರೆ ನಾವು ಶೀಘ್ರದಲ್ಲೇ ದಿವಾಳಿಯಾಗುತ್ತೇವೆ” ಎಂದು ಆನಂದ್ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ನಿಲ್ಲುತ್ತಿದೆ ಮಕ್ಕಳ ಹೃದಯ! ಹೆಚ್ಚಾಯ್ತು ಅಲ್ಪಾಯುಷ್ಯದ ಭಯ; ಹೃದಯಾಘಾತಕ್ಕೆ ಮತ್ತೊಬ್ಬ ವಿದ್ಯಾರ್ಥಿ ಬಲಿ

ಇಂಟರ್ನೆಟ್ ಬಳಕೆದಾರರು ಈ ವೀಡಿಯೊವನ್ನು ಇಷ್ಟಪಟ್ಟಿದ್ದಾರೆ. ಕಾಮೆಂಟ್ ವಿಭಾಗದಲ್ಲಿ ಹೃದಯ ಮತ್ತು ಪ್ರೀತಿಯ ಎಮೋಜಿಗಳನ್ನು ಸುರಿದಿದ್ದಾರೆ. ಕೆಲವರು ಮುಗ್ಧ ಹುಡುಗನ ಆಸೆಯನ್ನು ಪೂರೈಸುವಂತೆ ಮಹೀಂದ್ರಾಗೆ ವಿನಂತಿ ಮಾಡಿದ್ದಾರೆ. ಬಳಕೆದಾರೊಬ್ಬರು “ಆನಂದ್ ಸರ್, ನೀವು ಕೇವಲ ಅಸಾಧಾರಣ!! ಶ್ರೇಷ್ಠ ಭಾರತೀಯ ಮತ್ತು ಯಶಸ್ವಿ ಉದ್ಯಮಿ!! ಅಪಾರ ಗೌರವ ಇದೆ ಎಂದು ಬರೆದುಕೊಂಡಿದ್ದಾರೆ.

700 ರೂಪಾಯಿ ಕೊಟ್ಟು ಥಾರ್ ಅಥವಾ ಎಕ್ಸ್ ಯುವಿ 700 ಮಾದರಿಯ ಆಟಿಕೆ ಕಾರು ಉಡುಗೊರೆಯಾಗಿ ನೀಡಬೇಕು. ಇದು ಮಕ್ಕಳಲ್ಲಿ ಅಭಿಮಾನ ಹುಟ್ಟು ಹಾಕುತ್ತದೆ ಎಂದು ಹೇಳಿದ್ದಾರೆ.

ಇನ್ನೊಬ್ಬರು ಬರೆದುಕೊಂಡಿದ್ದಾರೆ “ಮಗು ತಿಳಿಯದೆ ನಿಮ್ಮ ಬ್ರಾಂಡ್ ಅನ್ನು ಭಾವೋದ್ರಿಕ್ತವಾಗಿ ಮತ್ತು ಮುಗ್ಧತೆ ಮತ್ತು ಪ್ರಾಮಾಣಿಕತೆಯಿಂದ ಪ್ರಚಾರ ಮಾಡಿದೆ. ದಯವಿಟ್ಟು ಅವನಿಗೆ ಒಂದನ್ನು ಉಡುಗೊರೆಯಾಗಿ ನೀಡಿ ಎಂದು ಬರೆದುಕೊಂಡಿದ್ದಾರೆ.

Exit mobile version