Site icon Vistara News

Nokia : ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾದ ನೋಕಿಯಾ ಸಿಇಒ ಲುಂಡ್‌ಮಾರ್ಕ್‌

Nokia ceo

#image_title

ನವ ದೆಹಲಿ: ಪ್ರಧಾನಿ ನರೇಂದ್ರ ಮೋದಿಯನ್ನು ನೋಕಿಯಾ ಸಿಇಒ ಪೆಕ್ಕಾ ಲುಂಡ್‌ ಮಾರ್ಕ್‌ ಅವರು ಭೇಟಿಯಾಗಿದ್ದಾರೆ. ಈ ಭೇಟಿ ಫಲಪ್ರದವಾಗಿತ್ತು ಎಂದು ಮೋದಿ ಹೇಳಿದ್ದಾರೆ. ಭಾರತದ ಡಿಜಿಟಲ್‌ ಯೋಜನೆಗಳ ಪ್ರಗತಿ ಬಗ್ಗೆ ಚರ್ಚೆ ನಡೆದಿದೆ.

ನೋಕಿಯಾ ಸಿಇಒ ಲುಂಡ್‌ ಮಾರ್ಕ್‌ ಕೂಡ ಪ್ರಧಾನಿ ಮೋದಿಯವರನ್ನು ಭೇಟಿಯಾಗಿರುವುದರ ಬಗ್ಗೆ ಟ್ವೀಟ್‌ ಮಾಡಿದ್ದಾರೆ. ಭಾರತದ 5ಜಿ ಯೋಜನೆಗೆ ಸಂಬಂದಿಸಿ ನೋಕಿಯ ಹೇಗೆ ಸಹಕರಿಸಬಹುದು ಮತ್ತು ಮುಂದಿನ ಹಂತದ ಡಿಜಿಟಲೀಕರಣದಲ್ಲಿ ಹೇಗೆ ಭಾಗವಹಿಸಬಹುದು ಎಂಬುದರ ಬಗ್ಗೆ ಚರ್ಚಿಸಲಾಯಿತು. 6ಜಿ ಮಹತ್ತ್ವಾಕಾಂಕ್ಷೆ ಬಗ್ಗೆಯೂ ಸಮಾಲೋಚನೆ ನಡೆಯಿತು ಎಂದು ತಿಳಿಸಿದ್ದಾರೆ.

Exit mobile version