ನವದೆಹಲಿ: ಸುಮಾರು 200 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಜೈಲುಪಾಲಾಗಿರುವ ವಂಚಕ ಸುಕೇಶ್ ಚಂದ್ರಶೇಖರ್ ಹೇಳಿಕೆ ನೀಡಿದ್ದು, “ನಟಿ ನೋರಾ ಫತೇಹಿ (Nora Fatehi) ಅವರೇ ದಿನಕ್ಕೆ 10 ಬಾರಿ ಕರೆ ಮಾಡುತ್ತಿದ್ದರು” ಎಂದಿದ್ದಾನೆ. “ನನ್ನ ಜೀವನವನ್ನು ಸುಕೇಶ್ ಚಂದ್ರಶೇಖರ್ ನರಕ ಮಾಡಿದ್ದಾನೆ” ಎಂದು ನಟಿ ಜಾಕ್ವೆಲಿನ್ ಫರ್ನಾಂಡಿಸ್ ಹೇಳಿಕೆ ನೀಡಿದ ಬೆನ್ನಲ್ಲೇ ಸುಕೇಶ್ ಹೇಳಿದ್ದಾನೆ.
“ನಾನು ಜಾಕ್ವೆಲಿನ್ ಫರ್ನಾಂಡಿಸ್ ಜತೆ ಡೇಟಿಂಗ್ ಮಾಡುತ್ತಿದ್ದೆ. ನಾನು ಹಾಗೂ ಜಾಕ್ವೆಲಿನ್ ರಿಲೇಷನ್‌ಶಿಪ್‌ನಲ್ಲಿರುವುದು ನೋಡಿ ನೋರಾ ಫತೇಹಿಗೆ ಹೊಟ್ಟೆ ಕಿಚ್ಚು ಆಗುತ್ತಿತ್ತು. ಹಾಗಾಗಿ, ನನಗೆ ದಿನಕ್ಕೆ 10 ಸಲ ಕರೆ ಮಾಡುತ್ತಿದ್ದಳು. ಅವಳು ಹೀಗೆ ತೊಂದರೆ ಕೊಡುವುದರಿಂದ ಬೇಸತ್ತು ನಾನೇ ನಿರ್ಲಕ್ಷಿಸಲು ಶುರು ಮಾಡಿದೆ” ಎಂದು ವಕೀಲರಾದ ಅನಂತ್ ಮಲಿಕ್ ಹಾಗೂ ಎ.ಕೆ.ಸಿಂಗ್ ಅವರ ಮೂಲಕ ಹೇಳಿಕೆ ನೀಡಿದ್ದಾನೆ.
ಸುಕೇಶ್ ಚಂದ್ರಶೇಖರ್‌ನಿಂದ ಕೋಟ್ಯಂತರ ರೂ. ಬೆಲೆಬಾಳುವ ಉಡುಗೊರೆ ಪಡೆದ ಆರೋಪದಲ್ಲಿ ಈಗಾಗಲೇ ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನು ತನಿಖಾ ಸಂಸ್ಥೆಯು ವಿಚಾರಣೆ ನಡೆಸಿದೆ. ಆದಾಗ್ಯೂ, ನೋರಾ ಫತೇಹಿ ಅವರ ಹೆಸರೂ ಪ್ರಕರಣದಲ್ಲಿ ಕೇಳಿಬಂದಿದೆ. ಪ್ರಕರಣದಲ್ಲಿ ಎಳೆದುತಂದ ಕಾರಣ ಜಾಕ್ವೆಲಿನ್ ವಿರುದ್ಧ ನೋರಾ ಫತೇಹಿ ಅವರು ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಇದನ್ನೂ ಓದಿ | Jacqueline Fernandez | ‘ವಂಚಕ ಸುಕೇಶ್ ನನ್ನ ಜೀವನವನ್ನು ನರಕವಾಗಿಸಿದ್ದಾನೆ’ ಕೋರ್ಟ್‌ಗೆ ರಕ್ಕಮ್ಮ ಜಾಕ್ವೆಲಿನ್ ಮಾಹಿತಿ