ಮುಂದಿನ ವರ್ಷ ನಡೆಯುವ ಲೋಕಸಭೆ ಚುನಾವಣೆ ದೃಷ್ಟಿಯಿಂದಾಗಿ ಹೆಚ್ಚಿನ ಮಹತ್ವ ಪಡೆದಿರುವ ತ್ರಿಪುರ, ಮೇಘಾಲಯ ಹಾಗೂ ನಾಗಾಲ್ಯಾಂಡ್ ವಿಧಾನಸಭೆ ಚುನಾವಣೆ ಫಲಿತಾಂಶ (Northeast Assembly Election Result 2023) ಗುರುವಾರ (ಮಾರ್ಚ್ 2) ಪ್ರಕಟವಾಗಲಿದೆ. ಇಂದು ಬೆಳಗ್ಗೆ 8ಗಂಟೆಯಿಂದ ಮೂರು ರಾಜ್ಯಗಳಲ್ಲಿ ಮತ ಎಣಿಕೆ ಪ್ರಾರಂಭವಾಗಿದೆ. ಈ ಮೂರು ರಾಜ್ಯಗಳಲ್ಲಿ ನಡೆಯುತ್ತಿರುವ ಮತ ಎಣಿಕೆಯ ಸಮಗ್ರ ವರದಿ ಇಲ್ಲಿದೆ.
ತ್ರಿಪುರ ಸಿಎಂ ಮನೆಯಲ್ಲಿ ಸಿಹಿ ವಿತರಣೆ
ತ್ರಿಪುರದಲ್ಲಿ ಬಿಜೆಪಿ 32 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿರುವ ಬೆನ್ನಲ್ಲೇ, ಮುಖ್ಯಮಂತ್ರಿ ಮಾಣಿಕ್ ಸಾಹಾ ಅವರ ಅಗರ್ತಲಾದಲ್ಲಿರುವ ಮನೆಯಲ್ಲಿ ಸಿಹಿ ವಿತರಣೆ ಪ್ರಾರಂಭವಾಗಿದೆ.
ನಾಗಾಲ್ಯಾಂಡ್ನಲ್ಲಿ ಇದೇ ಮೊದಲ ಬಾರಿಗೆ ಇಬ್ಬರು ಮಹಿಳೆಯರ ಗೆಲುವು
ನಾಗಾಲ್ಯಾಂಡ್ನಲ್ಲಿ ಇದೇ ಮೊದಲ ಬಾರಿಗೆ ಇಬ್ಬರು ಮಹಿಳೆಯರು ಚುನಾಯಿತರಾಗಿದ್ದಾರೆ. ಈ ಮೂಲಕ ಇತಿಹಾಸ ಸೃಷ್ಟಿಯಾಗಿದೆ. ಪಶ್ಚಿಮ ಅಂಗಮಿ ಎಸಿ ಕ್ಷೇತ್ರದಿಂದ ಸಾಲ್ಹೋತೌನೋ ಖ್ರುಸೆ ಮತ್ತು ದಿಮಾಪುರ್ 111 ವಿಧಾನಸಭಾ ಕ್ಷೇತ್ರದಲ್ಲಿ ಹೆಕಾನಿ ಜಖಾಲು ಗೆದ್ದಿದ್ದಾರೆ. ಇವರಿಬ್ಬರೂ ಮಹಿಳೆಯರು ಎನ್ಡಿಪಿಪಿ ಪಕ್ಷದವರೇ ಆಗಿದ್ದಾರೆ.
ಸಾಗರ್ದಿಘಿ ಬೈ ಎಲೆಕ್ಷನ್ ಮತ ಎಣಿಕೆ: ಕಾಂಗ್ರೆಸ್ ಅಭ್ಯರ್ಥಿಗೆ ಮುನ್ನಡೆ
ಪಶ್ಚಿಮ ಬಂಗಾಳದ ಸಾಗರ್ದಿಘಿ ಕ್ಷೇತ್ರಕ್ಕೆ ನಡೆದಿದ್ದ ಉಪಚುನಾವಣೆ ಮತ ಎಣಿಕೆ ಇಂದು ಬೆಳಗ್ಗೆಯಿಂದ ನಡೆಯುತ್ತಿದ್ದು 5,093 ಮತಗಳಿಂದ ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ.
ಚಿಂಚನ್ವಾಡ ಉಪಚುನಾವಣೆಯಲ್ಲಿ ಬಿಜೆಪಿಗೆ ಮುನ್ನಡೆ
ಪುಣೆಯ ಪಿಂಪ್ರಿ ಚಿಂಚನ್ವಾಡ್ ಕ್ಷೇತ್ರದ ಉಪಚುನಾವಣಾ ಫಲಿತಾಂಶ ಕೂಡ ಇಂದು ಪ್ರಕಟವಾಗಲಿದ್ದು, ಇಲ್ಲಿಯವರೆಗಿನ ಟ್ರೆಂಡ್ನಲ್ಲಿ ಬಿಜೆಪಿ ಅಭ್ಯರ್ಥಿ ಅಶ್ವನಿ ಜಗ್ತಾಪ್ ಅವರು 2919 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.
ನಾಗಾಲ್ಯಾಂಡ್ನಲ್ಲಿ ಮತ್ತೆ ಬಿಜೆಪಿ-ಎನ್ಡಿಪಿಪಿ ಮೈತ್ರಿ ಅಧಿಕಾರಕ್ಕೆ
ನಾಗಾಲ್ಯಾಂಡ್ನಲ್ಲಿ ಬಿಜೆಪಿ-ಎನ್ಡಿಪಿಪಿ ಮೈತ್ರಿ 36 ಸೀಟ್ಗಳಲ್ಲಿ ಮುನ್ನಡೆ ಸಾಧಿಸಿದ್ದು, ಮ್ಯಾಜಿಕ್ ನಂಬರ್ ದಾಟಿದೆ. ಮತ್ತೊಮ್ಮೆ ಈ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತ ಎನ್ನಲಾಗಿದೆ.